ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಹೈದರಾಬಾದ್ ಬಸ್ ಸಂಚಾರ ಆರಂಭ; ವೇಳಾಪಟ್ಟಿ

|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್ 30 : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಂತರ ರಾಜ್ಯ ಬಸ್ ಸಂಚಾರವನ್ನು ಆರಂಭಿಸಿದೆ. ಕೋವಿಡ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಆರು ತಿಂಗಳ ಬಳಿಕ ಬಸ್ ಸಂಚಾರ ಆರಂಭಗೊಂಡಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಹುಬ್ಬಳ್ಳಿ-ಹೈದರಾಬಾದ್ ನಡುವಿನ ಬಸ್ ಸಂಚಾರವನ್ನು ಆರಂಭಿಸಿದೆ. ಈಗಾಗಲೇ ಸಂಸ್ಥೆ ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಗೆ ಬಸ್ ಸಂಚಾರವನ್ನು ಆರಂಭಿಸಿತ್ತು.

ಹುಬ್ಬಳ್ಳಿ ಮಂದಿ ಕೆಂಗಣ್ಣಿಗೆ ಗುರಿಯಾದ ಕೇಂದ್ರ ಸರ್ಕಾರ ಹುಬ್ಬಳ್ಳಿ ಮಂದಿ ಕೆಂಗಣ್ಣಿಗೆ ಗುರಿಯಾದ ಕೇಂದ್ರ ಸರ್ಕಾರ

ಸರ್ಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ ಬಸ್ ಸಂಚಾರ ನಡೆಯಲಿದೆ. ಬಸ್‌ಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ, ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೈದರಾಬಾದ್‌ಗೆ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆ ಹೇಳಿದೆ.

ಹುಬ್ಬಳ್ಳಿ-ಗೋವಾ ಬಸ್ ಸೇವೆ; ವೇಳಾಪಟ್ಟಿ ಹುಬ್ಬಳ್ಳಿ-ಗೋವಾ ಬಸ್ ಸೇವೆ; ವೇಳಾಪಟ್ಟಿ

ಎಲ್ಲಾ ಬಸ್‌ಗಳಿಗೆ ಮುಂಗಡ ಟಿಕೆಟ್ ಬುಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಬಸ್‌ಗಳಲ್ಲಿ ನೀರಿನ ಬಾಟಲಿ ಮತ್ತು ಹೊದಿಕೆಗಳನ್ನು ನೀಡುವುದಿಲ್ಲ ಎಂದು ಪ್ರಯಾಣಿಕರಿಗೆ ಸೂಚನೆ ನೀಡಲಾಗಿದೆ.

ಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ ಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ

ಬಸ್‌ಗಳ ವಿವರಗಳು

ಬಸ್‌ಗಳ ವಿವರಗಳು

1 ಎಸಿ ಸ್ಲೀಪರ್ (ರಾತ್ರಿ 8), 1 ನಾನ್ ಎಸಿ ಸ್ಲೀಪರ್ (ಸಂಜೆ 7), 1 ರಾಜಹಂಸ (ಸಂಜೆ 7) ಹಾಗೂ 2 ವೇಗದೂತ (ಬೆಳಗ್ಗೆ 7 ಮತ್ತು 8)ಕ್ಕೆ ಸಂಚಾರ ನಡೆಸಲಿವೆ. ಎಲ್ಲಾ ಬಸ್‌ಗಳು ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು, ಮೆಹಬೂಬನಗರ, ಝಡ್ ಚರ್ಲಾ ಮಾರ್ಗವಾಗಿ ಸಂಚಾರ ನಡೆಸಲಿವೆ.

ವೇಗದೂತ ಬಸ್ ಮಾರ್ಗ

ವೇಗದೂತ ಬಸ್ ಮಾರ್ಗ

ಹುಬ್ಬಳ್ಳಿಯಿಂದ ಬೆಳಗ್ಗೆ 8ಕ್ಕೆ ಹೊರಡುವ ವೇಗದೂತ ಬಸ್ ನವಲಗುಂದ, ರೋಣ, ಗಜೇಂದ್ರಗಢ, ಕುಷ್ಟಗಿ, ಸಿಂಧನೂರು, ರಾಯಚೂರು, ಮೆಹಬೂಬ ನಗರ ಮಾರ್ಗವಾಗಿ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವೋಲ್ವೊ ಬಸ್ ಸಂಚಾರ ಯಾವಾಗ?

ವೋಲ್ವೊ ಬಸ್ ಸಂಚಾರ ಯಾವಾಗ?

ಹುಬ್ಬಳ್ಳಿ-ಹೈದರಾಬಾದ್ ನಡುವೆ ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಮತ್ತು ರಾಜಹಂಸ ಬಸ್‌ಗಳು ಸಂಚಾರವನ್ನು ಆರಂಭಿಸಿವೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ವೋಲ್ವೊ ಬಸ್ ಸಂಚಾರ ಆರಂಭಿಸುವ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Recommended Video

ಚಳಿಗಾಲದಲ್ಲಿ ಮತ್ತಷ್ಟು ಉಲ್ಬಣಗೊಳ್ಳಲಿದೆ ಕೊರೊನಾ ಸೋಂಕು | Oneindia Kannada
ಹುಬ್ಬಳ್ಳಿ-ಗೋವಾ ಸಂಚಾರ

ಹುಬ್ಬಳ್ಳಿ-ಗೋವಾ ಸಂಚಾರ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಹುಬ್ಬಳ್ಳಿ ಮತ್ತು ಗೋವಾದ ರಾಜಧಾನಿ ಪಣಜಿ ನಡುವೆ ಸೆಪ್ಟೆಂಬರ್ 5ರಿಂದ ಬಸ್‌ ಸಂಚಾರವನ್ನು ಆರಂಭಿಸಿವೆ. ಲಾಕ್ ಡೌನ್ ಘೋಷಣೆ ಬಳಿಕ ಅಂತರರಾಜ್ಯ ಬಸ್ ಸಂಚಾರ ಸ್ಥಗಿತವಾಗಿತ್ತು.

English summary
The North Western Karnataka Road Transport Corporation began the bus service to Hyderabad from Hubballi, Karnataka. Bus service resumed after 6 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X