ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳ ಬಸ್‌ ಪಾಸ್ ಅವಧಿ ವಿಸ್ತರಣೆ: ಎಷ್ಟು ದಿನ, ಶುಲ್ಕದ ಮಾಹಿತಿ ಇಲ್ಲಿದೆ

|
Google Oneindia Kannada News

ಹುಬ್ಬಳ್ಳಿ, ಜೂನ್ 27; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ವಿದ್ಯಾರ್ಥಿಗಳ ಉಚಿತ/ ರಿಯಾಯಿತಿ ಬಸ್ ಪಾಸ್‌ಗಳನ್ನು ಒಂದು ಮತ್ತು ಎರಡು ತಿಂಗಳಿಗೆ ವಿಸ್ತರಿಸಲು ಅನುಮತಿ ನೀಡಲಾಗಿದೆ.

2021-22ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ/ ರಿಯಾಯಿತಿ ಬಸ್‌ ಪಾಸುಗಳನ್ನು 10 ಗಂಟೆಗಳ ಅವಧಿಗೆ ನೀಡಲಾಗುತ್ತದೆ. 10 ತಿಂಗಳ ನಂತರವೂ ಕೆಲವು ಶಾಲೆ, ಕಾಲೇಜುಗಳು ನಡೆಯುತ್ತಿದ್ದರೆ ಅಂತಹ ವಿದ್ಯಾರ್ಥಿಗಳ ಬಸ್‌ ಪಾಸ್ ಅವಧಿಯನ್ನು ವಿಸ್ತರಿಸಲು ಕ್ರಮ ಕೈಗೊಂಡಿದೆ.

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಇಂದಿನಿಂದ (ಜೂ.27) ಪ್ರಾರಂಭಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಇಂದಿನಿಂದ (ಜೂ.27) ಪ್ರಾರಂಭ

ಪಾಸ್ ಅವಧಿ ವಿಸ್ತರಿಸಲು ಬಯಸುವ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಆದೇಶದನ್ವಯ ಸಂಬಂಧಿಸಿದ ಪ್ರಾಂಶುಪಾಲರಿಂದ ದೃಢೀಕರಣ ಪತ್ರ ಪಡೆಯಬೇಕಿದೆ. ಒಟ್ಟು ಪಾಸ್ ಅವಧಿ 12 ತಿಂಗಳಿಗೆ ಮೀರದಂತೆ ಕ್ರಮ ಜರುಗಿಸಲು ಸೂಚಿಸಿದೆ.

NWKRTC Extend Bus Pass validity For School And College Students Here are Details

ಕಳೆದ ಸಾಲಿನಲ್ಲಿ ಪದ್ಧತಿಯನ್ವಯ ಒಂದು ಮತ್ತು ಎರಡು ತಿಂಗಳ ಅವಧಿಗೆ ಪಾಸ್ ಅವಧಿ ವಿಸ್ತರಿಸಲು ನಿಗದಿತ ಮೊತ್ತ ಪಾವತಿಸಿಕೊಂಡು ರಸೀದಿ ನೀಡುವಂತೆ ಸೂಚನೆ ನೀಡಲಾಗಿದೆ. ಇನ್ನು ಪ್ರಯಾಣದ ವೇಳೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಬಸ್ ಪಾಸ್ ಅವಧಿ ವಿಸ್ತರಣೆಯ ರಶೀದಿ ಮತ್ತು ಹಳೆಯ ಬಸ್‌ ಪಾಸ್ ಎರಡನ್ನೂ ತೋರಿಸಬೇಕಾಗಿದೆ.

ಬೆಂಗಳೂರು: ಸರ್ ಎಂವಿ ಟರ್ಮಿನಲ್ ಗೆ ಬಿಎಂಟಿಸಿ ಫೀಡರ್ ಬಸ್ ಸೇವೆ ಆರಂಭ ಬೆಂಗಳೂರು: ಸರ್ ಎಂವಿ ಟರ್ಮಿನಲ್ ಗೆ ಬಿಎಂಟಿಸಿ ಫೀಡರ್ ಬಸ್ ಸೇವೆ ಆರಂಭ

ವಿಸ್ತರಣಾ ಅವಧಿಯನ್ನು ಈಗಾಗಲೇ ವಿತರಿಸಿರುವ ಪಾಸಿನ ಹಿಂಬದಿಯಲ್ಲಿ ಸಂಬಂಧಿಸಿದ ಘಟಕ ವ್ಯವಸ್ಥಾಪಕರ ಸಹಿಯೊಂದಿಗೆ ದೃಢೀಕರಿಸುವುದು ಮತ್ತು ಕಡ್ಡಾಯವಾಗಿ ಪಾಸನ್ನು ಲ್ಯಾಮಿನೇಷನ್ ಮಾಡುವಂತೆ ಸೂಚನೆ ನೀಡಲಾಗಿದೆ.

ಪಾಸ್ ವಿಸ್ತರಣೆಗೆ ದರ ನಿಗದಿ; ಪಾಸ್‌ ಅವಧಿ ವಿಸ್ತರಣೆಗೆ ಸಂಸ್ಥೆ ದರಗಳನ್ನು ನಿಗದಿ ಮಾಡಿದ್ದು, ನಿಗದಿತ ದರವನ್ನು ಪಾವತಿಸಿ ವಿದ್ಯಾರ್ಥಿಗಳು ತಮ್ಮ ಪಾಸ್‌ನ ಅವಧಿಯನ್ನು ವಿಸ್ತರಿಸಿಕೊಳ್ಳಬಹುದು.

NWKRTC Extend Bus Pass validity For School And College Students Here are Details

ಕಾಲೇಜು, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಪಾಸ್ ಅವಧಿ ವಿಸ್ತರಣೆಗೆ 195 ರುಪಾಯಿ ನಿಗದಿ ಮಾಡಿದ್ದರೆ ಎರಡು ತಿಂಗಳ ಅವಧಿಗೆ ಪಾಸ್ ವಿಸ್ತರಿಸಲು 290 ರುಪಾಯಿಗಳನ್ನು ನೀಡಬೇಕಾಗುತ್ತದೆ.

ವೃತ್ತಿ ಪರ ಕೋರ್ಸ್‌ಗಳಿಗ ವಿತರಿಸಿರುವ ಪಾಸ್ ಅವಧಿ ವಿಸ್ತರಣೆಗೆ ಒಂದು ತಿಂಗಳಿಗೆ 245 ರುಪಾಯಿ ಮತ್ತು ಎರಡು ತಿಂಗಳಿಗೆ 390 ರುಪಾಯಿ ಪಾವತಿ ಮಾಡಬೇಕಾಗುತ್ತದೆ.

ಸಂಜೆ ಕಾಲೇಜಿನ ವಿದ್ಯಾರ್ಥಿಗಳು ಒಂದು ತಿಂಗಳು ಪಾಸ್ ಅವಧಿ ವಿಸ್ತರಣೆಗೆ 225 ಮತ್ತು ಮತ್ತು ಎರಡು ತಿಂಗಳಿಗೆ 350 ರುಪಾಯಿ ಪಾವತಿ ಮಾಡಬೇಕಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಿದೆ. ಈಗ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿಕೊಳ್ಳಲು ಸಂಸ್ಕರಣಾ ಶುಲ್ಕ ಮತ್ತು ಅಪಘಾತ ವಿಮಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಲ್ಲಾ ರೀತಿಯ ಪಾಸ್‌ಗಳಿಗೆ ಸಂಸ್ಕರಣೆ ಮತ್ತು ಅಪಘಾತ ವಿಮಾ ಶುಲ್ಕವಾಗಿ 110 ರುಪಾಯಿಗಳನ್ನು ನಿಗದಿಪಡಿಸಲಾಗಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಸುರಕ್ಷಿತ, ಮಿತವ್ಯಯ ಸಾರಿಗೆ ಸೌಲಭ್ಯ ಒದಗಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ಹೋಗಿ ಬರಲು ಅನುಕೂಲವಾಗುವ ದೃಷ್ಟಿಯಿಂದ ವಿದ್ಯಾರ್ಥಿಗಳ ವಾಸಸ್ಥಳದಿಂದ ಶಾಲಾ-ಕಾಲೇಜುವರೆಗೆ 60 ಕಿ.ಮೀ. ಪರಿಮಿತಿಯಲ್ಲಿ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಉಚಿತ/ ರಿಯಾಯಿತಿ ಬಸ್ ಪಾಸ್‍ಗಳನ್ನು ವಿತರಣೆ ಮಾಡಿತ್ತು.

English summary
NWKRTC extend bus pass duration for school and college students. Students must pay the amount for extending their bus passes. Know the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X