ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ವಿದ್ಯುತ್‌ ದೀಪಗಳ ಕೊರತೆ; ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್‌, 15: ಜಿಲ್ಲೆಯಲ್ಲಿ ಬಡವರ ಪಾಲಿನ ಸಂಜೀವಿನಿಯಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಕಿಮ್ಸ್‌ ಕರ್ತವ್ಯ ನಿರ್ವಹಿಸುತ್ತಿದೆ. ಕಿಮ್ಸ್ ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಅಂತಲೇ ಹೆಸರುವಾಸಿ ಆಗಿದ್ದು, 8 ಜಿಲ್ಲೆಯ ಜನರು ಇಲ್ಲಿಗೆ ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ ಇದೀಗ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿ ವಿದ್ಯುತ್‌ ಇಲ್ಲದಾಂತಾಗಿದೆ. ಇದರಿಂದ ಬೇಸತ್ತ ಜನರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಿಮ್ಸ್‌ ನೌಕರರ ಮುಷ್ಕರ ಗುರುವಾರ ಹಿಂಪಡೆಯುವ ಸಾಧ್ಯತೆಕಿಮ್ಸ್‌ ನೌಕರರ ಮುಷ್ಕರ ಗುರುವಾರ ಹಿಂಪಡೆಯುವ ಸಾಧ್ಯತೆ

ಕೊರಿನಾ ಪರಿಸ್ಥಿತಿಯಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದ ಕಿಮ್ಸ್ ಸುಮಾರು 365ಕ್ಕೂ ಹೆಚ್ಚು ಕೋವಿಡ್ ಸೋಂಕಿತ ಗರ್ಭಿಣಿ ಮಹಿಳೆಯರಿಗೆ ಯಶಸ್ವಿ ಹೆರಿಗೆ ಮಾಡಿಸಿದೆ. ಹೀಗೆ ಮಹತ್ತರ ಸೇವೆ ಮೂಲಕ ಗುರುತಿಸಿಕೊಂಡಿರುವ ಕಿಮ್ಸ್ ರಾಷ್ಟ್ರೀಯ ಮಟ್ಟದಲ್ಲಿಯೇ ಎರಡನೇ ಅತ್ಯುತ್ತಮ ಪ್ರಸೂತಿ ಹಾಗೂ ಶಸ್ತ್ರಚಿಕಿತ್ಸೆ ಆಸ್ಪತ್ರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Hubballi: No electric lights in KIMS hospital premises- protest

ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿ ವಿದ್ಯುತ್‌ ಸಮಸ್ಯೆ
ಕಿಮ್ಸ್ ಆಸ್ಪತ್ರೆಯು ಒಂದಿಲ್ಲೊಂದು ರೀತಿಯಲ್ಲಿ ಉತ್ತಮವಾದ ಸೇವೆಗೆ ಹೆಸರಾಗಿದೆ. ಅಲ್ಲದೇ ಉತ್ತಮ ಕಾರ್ಯ ನಿರ್ವಹಣೆಯಿಂದ ಈಗ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಆದರೆ ಕಿಮ್ಸ್‌ಗೆ ಬರುವ ರೋಗಿಗಳ ಪಾಡು ಹೇಳತೀರದಾಗಿದೆ.‌ ವಿದ್ಯುತ್‌ ದೀಪಗಳ ಕೊರತೆ ಹಿನ್ನೆಲೆ ಸಂಜೆ ಆದರೆ ಸಾಕು ರೋಗಿಗಳು ಕಿಮ್ಸ್‌ಗೆ ಬರಲು ಹಿಂಜರಿಯುತ್ತಾರೆ. ನೂರಾರು ಎಕರೆಯಲ್ಲಿರುವ ಈ ಆಸ್ಪತ್ರೆಗೆ ಚಿಕಿತ್ಸೆಗೆಂದು ದಿನಕ್ಕೆ ಲಕ್ಷಾಂತರ ರೋಗಿಗಳು ಬರುತ್ತಾರೆ. ಆದರೆ ಸರಿಯಾದ ಬೀದಿ ದೀಪಗಳು ಇಲ್ಲದ ಕಾರಣ ರೋಗಿಗಳು ಹಾಗೂ ಅವರ ಸಂಬಂಧಿಕರು ಇತ್ತ ಬರಲು ಹಿಂದುಮುಂದು ನೋಡುವಂತಹ ಪರಿಸ್ಥಿತಿ ‌ನಿರ್ಮಾಣ ಆಗಿದೆ.

Hubballi: No electric lights in KIMS hospital premises- protest

ಜನಪ್ರತಿನಿಧಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ:
ಜನಪ್ರತಿನಿಧಿಗಳ ವಿರುದ್ಧ ನಗರ ವಾಸಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ಮಾಡಿದರು. ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ‌ಪಂಜಿನ ಮೆರವಣಿಗೆ ಮತ್ತು ಕ್ಯಾಂಡಲ್ ಪ್ರದರ್ಶಿಸುವ ಮೂಲಕ ವಿನೂತನ ಪ್ರತಿಭಟನೆ ಮಾಡಿದ್ದು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದಾರಿ ದೀಪವಿಲ್ಲದೆ ಸಾರ್ವಜನಿಕರು ಹಾಗೂ ರೋಗಿಗಳು ಪರದಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಕಿಮ್ಸ್‌ನಲ್ಲಿ ಹಲವು ವಿನೂತನ ತಂತ್ರಜ್ಞಾನದ ಮೂಲಕ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಇದೀಗ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಅಪಕೀರ್ತಿಗೆ ಕಾರಣವಾಗುತ್ತಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

English summary
No electric lights in Hubballi KIMS hospital premises, Patients wandering. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X