ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿತೀಶ್ ಕುಮಾರ್ ಕೋಮುವಾದಿ ಬಿಜೆಪಿ ಬಿಟ್ಟದ್ದು ಒಳ್ಳೆಯ ನಿರ್ಧಾರ: ಸಿದ್ದರಾಮಯ್ಯ

|
Google Oneindia Kannada News

ಹುಬ್ಬಳ್ಳಿ, ಆಗಸ್ಟ್‌ 10: ಕೋಮುವಾದಿ ಬಿಜೆಪಿಯನ್ನು ಜೆಡಿಯು ನಾಯಕ ನಿತೀಶ್ ಕುಮಾರ್ ಬಿಟ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ತಿಳಿಸಿದ್ದಾರೆ.

Recommended Video

Bihar Politics : ಬಿಹಾರದ ಸಿಎಂ ನಿತೀಶ್ ಕುಮಾರ್ ಮಹಾ ಪಲ್ಟಿ ರಾಜಕೀಯ | Oneindia Kannada

ಬಾಗಲಕೋಟೆಯಲ್ಲಿ ಪಾದಯಾತ್ರೆಗೆ ಚಾಲನೆ ಹಾಗೂ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಅಪಘಾತದಲ್ಲಿ ಮೃತಪಟ್ಟಿರುವ ಅಭಿಮಾನಿಗೆ ಭೇಟಿ ನೀಡುವುದಕ್ಕಾಗಿ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. " ಬಿಹಾರದಲ್ಲಿ ಎನ್‌ಡಿಎನಲ್ಲಿ ಬಿಜೆಪಿ ಮತ್ತು ನಿತೀಶ್ ಕುಮಾರ್ ನಡುವೆ ಏನು ನಡೆದಿದಿಯೋ ಗೊತ್ತಿಲ್ಲ, ಗೊತ್ತಿಲ್ಲದೇ ಮಾತನಾಡಬಾರದು. ಆದರೆ ನಿತೀಶ್ ಕುಮಾರ್ ಎನ್‌ಡಿಎ ತೊರೆದಿದ್ದಾರೆ, ಮತ್ತೆ ಲಾಲು ಪ್ರಸಾದ್‌ ಯಾದವ್‌ ಜೊತೆ ಸೇರಿದ್ದಾರೆ. ಸಮಾಜವಾದಿ ಹಿನ್ನಲೆಯಲ್ಲಿ ಬಂದ ನಿತೀಶ್ ಕೋಮುವಾದಿ ಪಕ್ಷ ಬಿಜೆಪಿಯನ್ನು ಬಿಟ್ಟಿರುವುದು ಬಹಳ ಒಳ್ಳೆಯ ಕೆಲಸ" ಎಂದರು.

ನಿತೀಶ್ ಕುಮಾರ್ ಬಿಜೆಪಿ ಸಖ್ಯ ತೊರೆಯಲು ಏನು ಕಾರಣ?ನಿತೀಶ್ ಕುಮಾರ್ ಬಿಜೆಪಿ ಸಖ್ಯ ತೊರೆಯಲು ಏನು ಕಾರಣ?

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿದೆ ಎನ್ನುವುದರ ಬಗ್ಗೆ ಕೇಳಿದ್ದಕ್ಕೆ, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಯಡಿಯೂರಪ್ಪ ಬದಲಾಗುತ್ತಾರೆ ಎನ್ನುವ ಮಾಹಿತಿ ಅಂದು ತಿಳಿದಿತ್ತು ಹೇಳಿದ್ದೆ, ಬಸವರಾಜ ಬೊಮ್ಮಾಯಿ ಬದಲಾಗುತ್ತಾರಾ ಎನ್ನುವುದರ ಬಗ್ಗೆ ಮಾಹಿತಿಯಿಲ್ಲ ಎಂದು ತಿಳಿಸಿದರು.

Nitish Kumar Came out From NDA alliance is Good decision: Siddaramaiah

ಮೋದಿಯವರು ಪ್ರತಿಯೊಬ್ಬರು ಮನೆ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಕರೆ ಕೊಟ್ಟಿದ್ದಾರೆ. ಆದರೆ ಆರ್‌ಎಸ್‌ಎಸ್‌ನವರು ಮಾಡಿಲ್ಲ ಎಂದು ಕೇಳಿದ್ದಕ್ಕೆ ಆರ್‌ಎಸ್‌ಎಸ್‌ ಮಾಡುವುದಿಲ್ಲ, ಅವರು ನಾಗರಪುರದ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸ್ತಾರಾ.? ಎಂದು ಪ್ರಶ್ನಿಸಿದರು. ಈ ವಿಷಯ ರಾಜಕೀಯವಾಗುತ್ತಿದಿಯಾ ಎಂದ ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, "ಬಿಜೆಪಿಯವರ ಹರ್ ಘರ್ ತಿರಂಗಾ ಅಭಿಯಾನ ಡೋಂಗಿ ರಾಜಕೀಯ , ಡೋಂಗಿ ರಾಷ್ಟ್ರಭಕ್ತಿ. ಆರ್‌ಎಸ್‌ಎಸ್‌ನ ಆರ್ಗನೈಜರ್‌ ಪತ್ರಿಕೆ, ಸಾವರ್ಕರ್‌,ಗೋಳ್ವಾಲ್ಕರ್‌ ಇವರೆಲ್ಲರೂ ರಾಷ್ಟ್ರಧ್ವಜವನ್ನು ವಿರೋಧ ಮಾಡಿದ್ದರು, ಸಂವಿಧಾನವನ್ನು ವಿರೋಧ ಮಾಡಿದ್ದರು, ಪ್ರಜಾಪ್ರಭುತ್ವವನ್ನು ವಿರೋಧ ಮಾಡಿದ್ದರು ಎಂದು ನಾನು ಹೇಳಿದ್ದೇನೆ, ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಅದು ರಾಜಕೀಯ ಹೇಗಾಗುತ್ತದೆ "ಎಂದು ಪ್ರಶ್ನಿಸಿದರು.

Nitish Kumar Came out From NDA alliance is Good decision: Siddaramaiah

ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸೋ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸುಮಾರು ಕಡೆ ಪಾದಯಾತ್ರೆಗೆ ಹೋಗಿದ್ದೇನೆ. ಮೈಸೂರು, ಚಿಂತಾಮಣಿ, ಚಾಮುಂಡೇಶ್ವರಿಗೆ ಹೋಗಿದ್ದೇನೆ, ಅಲ್ಲೆಲ್ಲಾ ಚುನಾವಣೇಗೆ ನಿಲ್ಲುವುದಕ್ಕಾಗುತ್ತಾ?. ಇದು ಪಕ್ಷದ ಕಾರ್ಯಕ್ರಮವಾಗಿದ್ದು, ಎಲ್ಲಾ ಕಡೆ ಮಾಡುತ್ತಿದ್ದೇವೆ. ಸದ್ಯ ಬಾದಾಮಿಯ ಶಾಸಕ, ಮುಂದಿನ ಚುನಾವಣೆಯ ಬಗ್ಗೆ ನಾನೇ ಹೇಳುತ್ತೇನೆ ಎಂದರು.

English summary
Janata Dal (United) leader Nitish Kumar breaking off ties with BJP is a very good decision, said opposition leader Siddaramaiah in Hubli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X