ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

777 ನಂಬರ್ ಕಾರಲ್ಲಿ ಬಂದಿಳಿದ ಅಧಿಕಾರಿ ಯಾರು?'

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್, 01: ನವಲಗುಂದದಲ್ಲಿ ಕೆ. ಎ01- 777 ಕಾರಿನಲ್ಲಿ ಬಂದಿಳಿದಿದ್ದ ಮೂರು ಸ್ಟಾರ್ ಹೊಂದಿದ್ದ ಪೊಲೀಸ್ ಅಧಿಕಾರಿ ಯಾರು ? ಅವರ ಹೆಸರನ್ನು ಮೊದಲು ಮೊದಲು ಬಹಿರಂಗಪಡಿಸಿ ಎಂದು ಒತ್ತಾಯ ಮಾಡಿದ್ದು ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ.

ಯಮನೂರು ಗ್ರಾಮದಲ್ಲಿ ರೈತ ಮಹಿಳೆಯರು ಮತ್ತು ವೃದ್ಧರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಗ್ರಹಿಸಿದ್ದಾರೆ.['ಬಂದ್' ವಾರದಲ್ಲಿ ರಾಜ್ಯಕ್ಕಾದ ನಷ್ಟ ತುಂಬುವವರು ಯಾರು?]

Navalgund case: Kodihalli Chandrashekhar demands judicial enquiry

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರಶೇಖರ್, ಬಂಧಿತ ಅಮಾಯಕ ರೈತರನ್ನು ಕೂಡಲೇ ಬಿಡುಗಡೇ ಮಾಡಬೇಕು ಆಗಸ್ಟ್ 5 ರೊಳಗಾಗಿ ಬಿಡುಗಡೆ ಮಾಡದಿದ್ದಲ್ಲಿ ಗೃಹ ಸಚಿವ ಪರಮೇಶ್ವರ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದರು. ರೈತ ಧುರೀಣರಾದ ಕಡಿದಾಳ ಶ್ಯಾಮಣ್ಣ, ಎಚ್.ಆರ್.ಬಸುರಾಜ, ಅನುಸೂಯ ಮತ್ತಿತರರು ಧರಣಿ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.

ನಮ್ಮ ಹೋರಾಟಕ್ಕೆ ಗೃಹ ಸಚಿವರು ಸ್ಪಂದನೆ ನೀಡದಿದ್ದರೆ ಆಗಸ್ಟ್ 10 ರಂದು ತಿಪಟೂರಿನಿಂದ ಬೆಂಗಳೂರವರೆಗೆ ಪಾದಯಾತ್ರೆ ಮಾಡುತ್ತೇವೆ. ರೈತರ ಮೇಲೆ ಹಲ್ಲೆ ಮಾಡಿದ ಅಪರಾಧಿಗಳೇ ಪ್ರಕರಣದ ತನಿಖೆ ಮಾಡುವಂತಾಗದೇ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ತನಿಖೆ ಆರಂಭ :
ಯಮನೂರು ಪೊಲೀಸ್ ದೌರ್ಜನ್ಯದ ಕುರಿತು ಎಡಿಜಿಪಿ ಕಮಲಪಂತ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಮಂಗಳವಾರ ನವಲಗುಂದ ಬರುವ ಪಂತ್ ಅವರು ದೌರ್ಜನ್ಯ ನಡೆದ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರ ದೂರು ಆಲಿಸಲಿದ್ದಾರೆ.

ಮಾಧ್ಯಮದಲ್ಲಿ ದೌರ್ಜನ್ಯದ ದೃಶ್ಯಗಳು ಪ್ರಸಾರವಾಗಿದ್ದು ಅವುಗಳನ್ನು ಪರಿಶೀಲಿಸಿ ಪ್ರತ್ಯಕ್ಷ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗುವುದು ಮತ್ತು ಲಾಠಿ ಚಾರ್ಜ್ ಗೆ ಆದೇಶ ನೀಡಿದವರು ಯಾರು ಎಂದು ಪತ್ತೆ ಹಚ್ಚಲಾಗುವುದು ಎಂದು ಮೂಲಗಳು ತಿಳಿಸಿವೆ.

English summary
Karnataka Rajya Raitha Sangha President Kodihalli Chandrashekhar demanded a judicial enquiry in Police caning case, Navalagund, yamaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X