• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವದ ಅತಿ ಉದ್ದದ ಪ್ಲಾಟ್ ಫಾರ್ಮ್ ಉದ್ಘಾಟಿಸಲಿದ್ದಾರೆ ಮೋದಿ

|

ಹುಬ್ಬಳ್ಳಿ, ಡಿಸೆಂಬರ್ 22: ಕರ್ನಾಟಕದ ಹುಬ್ಬಳ್ಳಿ 'ಶ್ರೀ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣ' ಕೆಲವೇ ದಿನಗಳಲ್ಲಿ ಇತಿಹಾಸವನ್ನು ನಿರ್ಮಾಣ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

ಕೆಲವೇ ದಿನಗಳಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣ ವಿಶ್ವಮಟ್ಟದ ದಾಖಲೆ ಮಾಡಲು ಸಿದ್ಧವಾಗುತ್ತಿದೆ. ರೈಲು ನಿಲ್ದಾಣದ 1ನೇ ಪ್ಲಾಟ್ ಫಾರ್ಮ್ 550 ಮೀಟರ್ ಉದ್ದವಿದೆ. ನೈಋತ್ಯ ರೈಲ್ವೆ ಇದನ್ನು 1505 ಮೀಟರ್‌ಗೆ ವಿಸ್ತರಣೆ ಮಾಡುವ ಕಾಮಗಾರಿಯನ್ನು ಕೈಗೊಂಡಿದೆ.

ಇತಿಹಾಸ ನಿರ್ಮಾಣ ಮಾಡಲಿದೆ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣ

90 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ಲಾಟ್ ಫಾರ್ಮ್‌ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಘೋಯೆಲ್ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಟರ್ಮಿನಲ್ ಆರಂಭ

ಉತ್ತರ ಪ್ರದೇಶದ ಗೋರಖ್‌ಪುರ್‌ನಲ್ಲಿರುವ 1336 ಮೀಟರ್ ಉದ್ದದ ರೈಲು ಪ್ಲಾಟ್‌ ಫಾರ್ಮ್‌ ಈಗ ವಿಶ್ವದ ಅತಿ ಉದ್ದದ ರೈಲು ಪ್ಲಾಟ್‌ ಫಾರ್ಮ್‌ ಎಂಬ ಹೆಗ್ಗಳಿಕೆ ಪಡೆದಿದೆ. ಹುಬ್ಬಳ್ಳಿ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಉದ್ಘಾಟನೆಗೊಂಡ ಬಳಿಕ ಈ ದಾಖಲೆಯನ್ನು ಮುರಿಯಲಿದೆ.

ಹುಬ್ಬಳ್ಳಿ ರೈಲು ನಿಲ್ದಾಣದ ಸೌಂದರ್ಯಕ್ಕೆ ಕೇಂದ್ರ ಸಚಿವ ಪಿಯೂಶ್​ ಗೋಯಲ್ ಫಿದಾ

"ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಪ್ಲಾಟ್ ಫಾರ್ಮ್ ಉದ್ಘಾಟನೆ ಮಾಡಲಿದ್ದಾರೆ" ಎಂದು ಕೇಂದ್ರ ಸಚಿವ, ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಪ್ಲಾಟ್ ಫಾರ್ಮ್ ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಎರಡು ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಹುಬ್ಬಳ್ಳಿ ರೈಲು ನಿಲ್ದಾಣ ಈಗಾಗಲೇ 2 ಪ್ರವೇಶ ದ್ವಾರಗಳನ್ನು ಹೊಂದಿದೆ. 3ನೇ ಪ್ರವೇಶ ದ್ವಾರವನ್ನು ಚರ್ಚ್ ಕಡೆಯಿಂದ ನಿರ್ಮಾಣ ಮಾಡಲಾಗುತ್ತಿದೆ. ಭಾರತದಲ್ಲಿ 3 ಪ್ರವೇಶ ದ್ವಾರ ಹೊಂದಿರುವ ಕೆಲವೇ ರೈಲು ನಿಲ್ದಾಣಗಳಲ್ಲಿ ಹುಬ್ಬಳ್ಳಿ ಸಹ ಸೇರ್ಪಡೆಗೊಳ್ಳಲಿದೆ.

   Bangalore: ರೂಪಾಂತರಗೊಂಡ ಕೊರೊನಾ ವೈರಸ್‌ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ- ಸಿಎಂ ಯಡಿಯೂರಪ್ಪ ಮಾಹಿತಿ | Oneindia Kannada

   English summary
   Prime minister Narendra Modi will inaugurate world's longest railway platform in Shri Siddharoodha Swamiji railway station Hubballi, Karnataka soon.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X