ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್ ಸಮಯದಲ್ಲಿ ಮೋದಿ ಮೆಚ್ಚುವ ಕೆಲಸ ಮಾಡಿದ ಹುಬ್ಬಳ್ಳಿ ಹುಡುಗಿ

|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 20: ಲಾಕ್‌ಡೌನ್ ಸಮಯದಲ್ಲಿ ಹುಬ್ಬಳ್ಳಿಯ ಆರು ವರ್ಷದ ಬಾಲಕಿ ಪ್ರಧಾನಿ ಮೋದಿ ಮೆಚ್ಚುವಂತೆ ನಡೆದುಕೊಂಡಿದ್ದಾಳೆ. ಪುಟ್ಟ ಬಾಲಕಿಯ ಬಗ್ಗೆ ಮೋದಿ ತಮ್ಮ ಟ್ವಿಟ್ಟರ್ ಮೆಚ್ಚುಗೆ ಸೂಚಿಸಿದ್ದಾರೆ.

ಹುಬ್ಬಳಿಯ ನಿವಾಸಿ ಇಮ್ತಿಯಾಜಹಮದ್ ಪುತ್ರಿ ಇಫ್ರಾ ಮುಲ್ಲಾ ಮನೆಯಲ್ಲಿ ಯೋಗ ಮಾಡಿದ್ದಾಳೆ. ಟಿವಿ ನೋಡಿಕೊಂಡು ಯೋಗ ಮಾಡುತ್ತಿದ್ದು, ಆ ವೇಳೆ ತಾಯಿ ವಿಡಿಯೋ ಮಾಡಿದ್ದಾರೆ. ಮಗಳ ಯೋಗದ ವಿಡಿಯೋವನ್ನು ತಂದೆ ಇಮ್ತಿಯಾಜಹಮದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

ಕಿತ್ತಲೆ ವಲಯದಿಂದ ಹಸಿಲು ವಲಯದತ್ತ ಉಡುಪಿ ಜಿಲ್ಲೆ ಹೆಜ್ಜೆ ಕಿತ್ತಲೆ ವಲಯದಿಂದ ಹಸಿಲು ವಲಯದತ್ತ ಉಡುಪಿ ಜಿಲ್ಲೆ ಹೆಜ್ಜೆ

ವಿಡಿಯೋ ಪೋಸ್ಟ್ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್‌ರಿಗೆ ಟ್ಯಾಗ್ ಮಾಡಿದ್ದರು. ಈ ವಿಡಿಯೋ ನೋಡಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಕಿಯ ವಿಡಿಯೋವನ್ನು ತಮ್ಮ ಖಾತೆಯಲ್ಲಿಯೂ ಹಂಚಿಕೊಂಡು ''ಗ್ರೇಟ್ ಮನೆಯಲ್ಲಿಯೇ ಇರೀ. ಆರೋಗ್ಯವಾಗಿರಿ, ಫೀಟ್ ಆಗಿರಿ'' ಎಂದು ಬರೆದಿದ್ದಾರೆ.

Narendra Modi Praised hubballi Girl Yoga

ಇಫ್ರಾ ಮುಲ್ಲಾ ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವರ ತಂದೆ ಇಮ್ತಿಯಾಜಹಮದ್ ಮುಲ್ಲಾ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಪ್ರಧಾನ ಮುಖ್ಯ ವೈದ್ಯಕೀಯ ನಿರ್ದೇಶಕರ ಕಚೇರಿಯಲ್ಲಿ ಸೂಪರಿಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ವಿಶ್ವ ಯೋಗದಿನದ ವಿಶೇಷ: ಸಹಜ ರಾಜಯೋಗದ ಮಹತ್ವವೇನು?ವಿಶ್ವ ಯೋಗದಿನದ ವಿಶೇಷ: ಸಹಜ ರಾಜಯೋಗದ ಮಹತ್ವವೇನು?

ಲಾಕ್‌ಡೌನ್ ಸಮಯದಲ್ಲಿ ಯೋಗ ಮಾಡುವಂತೆ ಮೋದಿ ಕರೆ ನೀಡಿದ್ದರು. ಯೋಗದ ವಿಡಿಯೋ ಕೂಡ ಹಂಚಿಕೊಂಡಿದ್ದರು. ಅವರಂತೆ ಹುಬ್ಬಳ್ಳಿ ಪುಟ್ಟ ಬಾಲಕಿ ಯೋಗ ಮಾಡಿ ಪ್ರಧಾನಿಯಿಂದ ಗ್ರೇಟ್ ಎನಿಸಿಕೊಂಡಿದ್ದಾಳೆ.

English summary
PM Narendra Modi praised Hubli girl for her yoga video. The girl did yoga during lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X