ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಲಿಮಂಜಾರೋ ಪರ್ವತ ಏರಿದ ಮೊದಲ ಕನ್ನಡತಿ ಹುಬ್ಬಳ್ಳಿಯ ನಂದಿತಾ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ ಅಕ್ಟೋಬರ್ 03 : ಸಾಧನೆ ಮಾಡುವ ಛಲ ಒಂದಿದ್ದರೆ ಸಾಕು ಏನನ್ನಾದ್ರೂ ಸಾಧಿಸಬಹುದು ಎಂಬುದಕ್ಕೆ ಈ ಹುಬ್ಬಳ್ಳಿಯ ಯುವತಿ ಸಾಕ್ಷಿ ಆಗಿದ್ದಾರೆ.

ಜಗತ್ತಿನ ಏಳು ಖಂಡಗಳ ಏಳು ಎತ್ತರದ ಪರ್ವತ ಏರುವ ಕನಸು ಕಂಡಿರುವ ಹುಬ್ಬಳ್ಳಿಯ ಯುವತಿ ಈಗ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಇಂಥ ಅಸಾಧಾರಣ ಕನಸು ಕಂಡಿದ್ದು ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ನಂದಿತಾ ನಾಗನಗೌಡರ್.

ಕಿಲಿಮಂಜಾರೋ ಚಾರಣದ ಅಪರೂಪದ ಅನುಭೂತಿಕಿಲಿಮಂಜಾರೋ ಚಾರಣದ ಅಪರೂಪದ ಅನುಭೂತಿ

2016ರಲ್ಲಿ ಮೌಂಟ್ ಎವರೆಸ್ಟ್ ಏರಿದ್ದು, ಕಳೆದ ಜೂನ್ನಲ್ಲಿ ಆಸ್ಟ್ರೇಲಿಯಾದ ಕಾರ್ ಸ್ಟೆಂಝ್ ಪಿರಾಮಿಡ್ ಶಿಖರ ಏರಿದ್ದರು. ಇದೇ ಸೆಪ್ಟೆಂಬರ್ 20ರಂದು ದಕ್ಷಿಣ ಆಫ್ರಿಕಾದಲ್ಲಿರುವ ಕಿಲಿಮಂಜಾರೋ ಪರ್ವತ ಏರಿ ಸಾಧನೆ ತಮ್ಮ ಕನಿಸಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ಅಲ್ಲದೆ ಜಗತ್ತಿನ ಏಳು ಖಂಡಗಳ ಏಳು ಎತ್ತರದ ಪರ್ವತ ಏರುವ ಮಹದಾಸೆಗೆ ಮತ್ತೊಂದು ದೊಡ್ಡ ಹೆಜ್ಜೆ ಇರಿಸಿದ್ದಾರೆ.

Nanditha, first from Karnataka to climb Kilimanjaro mountain

ಜ್ವಾಲಾಮುಖಿ ಪರ್ವತ ಕಿಲಿಮಂಜಾರೋ

ನಂದಿತಾ ಸೆ. 15ರಂದು ಪರ್ವತಾರೋಹಣವನ್ನು ಆರಂಭಿಸಿ 5,895 ಮೀಟರ್ ಎತ್ತರವನ್ನು ಯಶಸ್ವಿಯಾಗಿ ಏರಿದ್ದಾರೆ. ಆಫ್ರಿಕಾ ಖಂಡದಲ್ಲಿಯೇ ಅತಿ ಎತ್ತರ ಎನಿಸಿರುವ ಈ ಪರ್ವತ, ಜ್ವಾಲಾಮುಖಿ ಪರ್ವತವೆಂದೇ ಪ್ರಸಿದ್ಧಿಯಾಗಿದೆ. ಪರ್ವತಾರೋಹಣದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಿ ಈ ಪರ್ವತ ಶ್ರೇಣಿ ಏರಿದ ರಾಜ್ಯದ ಪ್ರಥಮ ಮಹಿಳೆ ಎಂಬ ಖ್ಯಾತಿ ನಂದಿತಾ ಅವರದ್ದಾಗಿದೆ.

ಆಫ್ರಿಕಾದ ಕಿಲಿಮಾಂಜರೋ ಪರ್ವತಾರೋಹಣಆಫ್ರಿಕಾದ ಕಿಲಿಮಾಂಜರೋ ಪರ್ವತಾರೋಹಣ

ಬೇಕಿದೆ ಸರ್ಕಾರದ ನೆರವು

ಮುಂದಿನ ದಿನಗಳಲ್ಲಿ ಶೀತ ಪ್ರದೇಶದಿಂದ ಕೂಡಿದ ಅಂಟಾರ್ಟಿಕಾ ವಿನ್ಸನ್ ಮ್ಯಾಸಿಪ್ ಪರ್ವತ ಏರುವ ಗುರಿ ಹೊಂದಿರುವ ನಂದಿತಾ, ಈ ಹಿಂದಿನ ಮೂರು ಪರ್ವತ ಏರಲು ಸಾಕಷ್ಟು ಹಣ ಖರ್ಚಾಗಿದೆ. ಒಂದು ಸಾರಿ ಪರ್ವತ ಏರಿ ಬಂದ್ರೆ ಸುಮಾರು 3ರಿಂದ 5 ಲಕ್ಷ ರುಪಾಯಿ ಹಣ ಬೇಕು. ಆದ್ರೆ ಈ ಹಿಂದೆ ಮಾಡಿದ ಎಲ್ಲ ಸಾಧನೆಗಳಿಗೆ ತಮ್ಮ ಸ್ವಂತ ಹಣವನ್ನೆ ಖರ್ಚು ಮಾಡಿದ್ದಾರೆ. ಆದ್ರೆ ಹೊಸ ಪರ್ವತ ಏರಲು ಸರ್ಕಾರದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

Nanditha, first from Karnataka to climb Kilimanjaro mountain

ಸದ್ಯ ಅವರು ಇಂಗ್ಲೆಂಡ್ನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. 2011ರಲ್ಲಿ ಹುಬ್ಬಳ್ಳಿಯ ಬಿವಿಬಿಯಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಇವರು, ಇಂಗ್ಲೆಂಡ್ನಲ್ಲಿ ಎಂಬಿಎ ಪದವಿ ಪಡೆದು ಅಲ್ಲಿಯೇ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದಾರೆ.

ಮೊದಲು ಪರ್ವತಾರೋಹಣಕ್ಕೆ ಸಿದ್ಧತೆ ಮಾಡಿಕೊಂಡಾಗ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ಹೇಳುವ ನಂದಿತಾ, ಈಗ ತನ್ನ ಸಾಧನೆ ಪೋಷಕರಿಗೆ ಹೆಮ್ಮೆ ತಂದಿದೆ ಎನ್ನುತ್ತಾರೆ. ಅಲ್ಲದೆ ತನ್ನ ಸಾಧನೆಗೆ ಪೋಷಕರು ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ ಮತ್ತಷ್ಟು ಸಾಧನೆ ಮಾಡುವ ಹಂಬಲ ಹೆಚ್ಚಿದೆ ಎನ್ನುತ್ತಾರೆ ನಂದಿತಾ.

English summary
Nanditha Naganagoudar is the first from Karnataka (Hubballi) to climb Kilimanjaro mountain. She has already climbed 3 top mountains and dreams to climb all the highest mountains in all the continents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X