ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿ ವಿವಾದ: ಬಹಿರಂಗ ಸವಾಲು ಹಾಕಿದ ದಿಂಗಾಲೇಶ್ವರ ಶ್ರೀ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜನವರಿ 25: ವಾಣಿಜ್ಯ ನಗರಿ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಮತ್ತೆ ಆಸ್ತಿ ವಿವಾದ ಭುಗಿಲೆದ್ದಿದೆ. ಮಠದ ಉನ್ನತ ಮಟ್ಟದ ಸಮಿತಿಗೆ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದ್ದಾರೆ.

ಮಠದ ಆಸ್ತಿಯನ್ನು ಕೆಎಲ್ಇ ಸಂಸ್ಥೆಗೆ ನೀಡುವ ಕುರಿತು ವಿರೋಧ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಸ್ವಾಮೀಜಿ, ಉನ್ನತ ಮಟ್ಟದ ಸಮಿತಿಗೆ ಸವಾಲೊಡ್ಡಿದ್ದಾರೆ. ಈ ಮೂರು ಸಾವಿರ ಮಠದ ಆಸ್ತಿ, ಸಮಾಜದ ಆಸ್ತಿ, ನಿಮ್ಮಪ್ಪನ ಆಸ್ತಿ ಅಲ್ಲ. ಕೆಎಲ್‌ಇ ಸಂಸ್ಥೆಗೆ ನೀಡಿದ ಮೂರು ಸಾವಿರ ಮಠದ ಆಸ್ತಿಯನ್ನು ಮಠಕ್ಕೆ ಮರಳಿಸಬೇಕು. ಇಲ್ಲವಾದ್ರೆ ಬರುವ ದಿನಗಳಲ್ಲಿ ಇದರ ದುಃಖವನ್ನು ನೀವು ಅನುಭವಿಸುತ್ತಿರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಉನ್ನತ ಮಟ್ಟದ ಸಮಿತಿಯವರು ಮೂರು ಸಾವಿರ ಮಠವನ್ನು ನಾಶ ಮಾಡಿದ್ದಾರೆ. ಉನ್ನತ ಮಟ್ಟದ ಸಮಿತಿಗೆ ನಾಚಿಗೆಯಾಗಬೇಕು. ನಿಮ್ಮ ಮನೆತನಕ್ಕೆ ಸಂಬಂಧಿಸಿದ ಆಸ್ತಿ ಇರಲ್ಲಿಲ್ಲವೇನೂ? ಆ ಆಸ್ತಿಯಲ್ಲಿ ನೀವು ಮೆಡಿಕಲ್ ‌ಕಾಲೇಜು ಕಟ್ಟಿಕೊಳ್ಳಬೇಕಿತ್ತು ಎಂದು ಶ್ರೀಗಳು ಉನ್ನತ ಮಟ್ಟದ ಸಮಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Hubballis Mooru Savira Math Property Controversy: Challenged By Dingaleshwara Shri

ತಾಕತ್ತಿದ್ದರೆ ನನ್ನ ಬಗ್ಗೆ ಬಹಿರಂಗವಾಗಿ ಬಂದು ಅಪಪ್ರಚಾರ ಮಾಡಿ. ನನ್ನ ಬಗ್ಗೆ ಅಪಪ್ರಚಾರ ಮಾಡುವವರಿಗೆ ಪಂಥಾಹ್ವಾನ ಕೋಡ್ತೆನಿ, ನಾನು ಎಲ್ಲವನ್ನೂ ಸಾಬೀತುಪಡಿಸುತ್ತೆನೆ. ನಿಮ್ಮಲ್ಲಿ ತಂದೆ-ತಾಯಿ ರಕ್ತ ಇದ್ದರೆ, ಅದು ಏನಾದರೂ ಓರಿಜನಾಲಿಟಿ ನಿಮ್ಮಲ್ಲಿ ಇದ್ದರೆ ಬಹಿರಂಗವಾಗಿ ತೋರಿಸಿ. ಎಲ್ಲದಕ್ಕೂ ನಾನು ಸಿದ್ದನಿದ್ದೇನೆ, ಆಗಿದ್ದಾಗಲಿ ಎಮದು ಬಹಿರಂಗ ಸವಾಲು ಹಾಕಿದರು.

ಹುಬ್ಬಳ್ಳಿಯಿಂದ ಗೋವಾ, ಕೊಚ್ಚಿಗೆ ಜ.21ರಿಂದ ನೇರ ವಿಮಾನ ಹುಬ್ಬಳ್ಳಿಯಿಂದ ಗೋವಾ, ಕೊಚ್ಚಿಗೆ ಜ.21ರಿಂದ ನೇರ ವಿಮಾನ

ದಿಂಗಾಲೇಶ್ವರ ಶ್ರೀ ಉನ್ನತ ಮಟ್ಟದ ಸಮಿತಿಗೆ ಬಹಿರಂಗವಾಗಿ ಸವಾಲ್ ಹಾಕಿದ್ದು, ಉನ್ನತ ಮಟ್ಟದ ಸಮಿತಿಯಲ್ಲಿ ಉಸ್ತುವಾರಿ ಮಂತ್ರಿಗಳಿದ್ದಾರೆ, ಗೃಹ ಮಂತ್ರಿಗಳಿದ್ದಾರೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಇದ್ದಾರೆ. ಇವರೆಲ್ಲಾ ಸೇರಿ ಮೂರು ಸಾವಿರ ಮಠದ ಆಸ್ತಿಯನ್ನು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿದ್ದಾರೆ. ಮಠದ ಆಸ್ತಿ ಹಾಳಾಗಲಿಕ್ಕೆ ವಿರೋಧ ಪಕ್ಷದವರು ಸಹಕಾರ ಕೊಡುತ್ತಿದ್ದಾರೆ. ಇದು ತಪ್ಪೆಂದು ನಾನು ಹೇಳುತ್ತಿದ್ದೇನೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀ ಹೇಳಿದರು.

Hubballis Mooru Savira Math Property Controversy: Challenged By Dingaleshwara Shri

ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರರು ಇರುವವರು ಸುಪ್ರೀಂ ಕೋರ್ಟ್‌ನ ಆದೇಶವನ್ನು ತಿರುಚಿದ್ದಾರೆ. ಆದೇಶ ತಿದ್ದುಪಡಿ ಮಾಡಿ ಆಸ್ತಿ ಕೊಡಿಸುವ ಮುಂದಾಳತ್ವವನ್ನು ವಹಿಸುವುದು ಸರೀನಾ? ‌ಈ ಸಮಾಜ ಇದನ್ನು ಗಮನಿಸಿಬೇಕು. ಈಗಿರುವ ಸರ್ಕಾರದಲ್ಲಿ ಬಹಳ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಈ ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ಜನರು ವಿರೋಧ ಮಾಡಲು ಹೆದರುತ್ತಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಗಂಭೀರವಾಗಿ ಆರೋಪ ಮಾಡುವ ಮೂಲಕ ಸವಾಲೊಡ್ಡಿದ್ದಾರೆ.

Recommended Video

Delhi ರೈತರ Tractor Paradeಗೆ ಪೊಲೀಸ್‌ ಇಲಾಖೆಯಿಂದ ಶರತ್ತು ಬದ್ಧ ಅನುಮತಿ | Oneindia Kannada

ಒಟ್ಟಿನಲ್ಲಿ ಇಷ್ಟು ದಿನ ಶೀತಲ ಸಮರದಲ್ಲಿದ್ದ ಮೂರು ಸಾವಿರ ಮಠದ ಆಸ್ತಿ ವಿವಾದ, ಈಗ ತಾರಕಕ್ಕೆ ಏರಿದ್ದು, ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

English summary
The property dispute has erupted again at the Mooru Savira Math in Hubballi. Dingaleshwar Swamiji of Balehosoor has challenged the high-level committee of the Math.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X