• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಯಾಣಿಕರ ಹೆಚ್ಚಳಕ್ಕೆ ವಾಯವ್ಯ ಸಾರಿಗೆ ಮಾಡಿದೆ ಹೊಸ ಯತ್ನ

By ಹುಬ್ಬಳ್ಳಿ ಪ್ರತಿನಿಧಿ
|

ಹುಬ್ಬಳ್ಳಿ , ಸೆಪ್ಟೆಂಬರ್ 14: ಲಾಕ್‌ಡೌನ್ ಸಂದರ್ಭ ಹಾಗೂ ಲಾಕ್ ಡೌನ್ ತೆರವಾದ ನಂತರವೂ ಸಾರಿಗೆ ಇಲಾಖೆ ನಷ್ಟ ಅನುಭವಿಸುತ್ತಲೇ ಇದೆ. ಇದೀಗ ಈ ನಷ್ಟವನ್ನು ಭರಿಸಲು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ.

ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪಾಸ್ ನೀಡಿ ನಷ್ಟ ಕಡಿಮೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಪಾಸ್‌ಗಳನ್ನು ಪಡೆದರೆ ಪ್ರಯಾಣಿಕರಿಗೆ ಹಣ ಉಳಿತಾಯವಾಗುತ್ತದೆ. ಪಟ್ಟಣಕ್ಕೆ ಹೋಗಿ ಬರುವ ಉದ್ಯೋಗಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್‌ನಿಂದ ಹೆಚ್ಚಿನ ಲಾಭದ ಜೊತೆಗೆ ನಗದು ರಹಿತ ವ್ಯವಹಾರ ಮಾಡಿ ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಂಡಂತೆ ಆಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳೆ ಬಂದರೆ ಶವರ್ ಆಗುತ್ತದೆ ಗುಡೇನಕಟ್ಟಿ ಮಾರ್ಗದ ಈ ಏಕೈಕ ಬಸ್!

ಲಾಕ್ ಡೌನ್ ಗೂ ಮೊದಲು ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ 4,670 ಬಸ್ ಸಂಚರಿಸುತ್ತಿದ್ದವು. ಈಗ 3,100 ಬಸ್‌ಗಳ ಸಂಚಾರವಿದೆ. ಸಂಸ್ಥೆಗೆ ನಿತ್ಯ 2.2 ಕೋಟಿ ಆದಾಯ ಬರುತ್ತಿದೆ.

   India-China ಸಂಘರ್ಷದ ಬಗ್ಗೆ ಮಾತನಾಡಲಿದ್ದಾರೆ Rajnath Singh | Oneindia Kannada

   ಈ ರೀತಿ ನಿತ್ಯ ಹಳ್ಳಿಗಳು ಮತ್ತು ಬೇರೆ ಬೇರೆ ಪ್ರದೇಶಗಳಿಂದ ಪಟ್ಟಣಕ್ಕೆ ಉದ್ಯೋಗಕ್ಕೆ ಬರುವವರಿಗೆ ಪಾಸ್​​ಗಳಲ್ಲಿ ವಿನಾಯಿತಿ ನೀಡಿರುವುದಕ್ಕೆ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗುತ್ತಿದೆ. ಅಲ್ಲದೇ ತಿಂಗಳ ಪಾಸಿನಿಂದ ಪ್ರಯಾಣಿಕರಿಗೆ ಹಣವೂ ಉಳಿಯುತ್ತದೆ. ಇದರಿಂದ ಪ್ರಯಾಣಿಕರಲ್ಲಿ ಸಂತಸ ವ್ಯಕ್ತವಾಗಿದೆ.

   English summary
   Monthly Pass System has started in North West Transportation to increase the passengers,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X