ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕರ್ನಾಟಕದಿಂದ ಮೋದಿ ಸ್ಪರ್ಧಿಸಿದರೆ ಗೆಲುವು, ರಾಹುಲ್‌ಗೆ ಸೋಲು'

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 14 : ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಿಂದ 2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ?. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. 'ಅವರು ಸ್ಪರ್ಧೆ ಮಾಡಿದರೆ 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ' ಎಂದು ಯಡಿಯೂರಪ್ಪ ಹೇಳಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, 'ನರೇಂದ್ರ ಮೋದಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುವ ವಿಚಾರ ನನಗೆ ತಿಳಿದಿಲ್ಲ. ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾದರೆ ಮಾಡಲಿ' ಎಂದರು.

ಸಮೀಕ್ಷೆ: ಅಸೆಂಬ್ಲಿಯಲ್ಲಿ ಹಿಂದೆ, ಲೋಕಸಭೆಯಲ್ಲಿ 'ಬಿಜೆಪಿ' ಭಾರೀ ಮುಂದೆಸಮೀಕ್ಷೆ: ಅಸೆಂಬ್ಲಿಯಲ್ಲಿ ಹಿಂದೆ, ಲೋಕಸಭೆಯಲ್ಲಿ 'ಬಿಜೆಪಿ' ಭಾರೀ ಮುಂದೆ

'ನರೇಂದ್ರ ಮೋದಿ ಅವರು ದೇಶದ ಯಾವುದೇ ಕ್ಷೇತ್ರ ಅಥವ ಕರ್ನಾಟಕದ ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರೂ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ' ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Modi will win by one lakh margin if he is contest from Karnataka says BSY

ಬೀದರ್‌ನಿಂದ ರಾಹುಲ್ ಗಾಂಧಿ ಸ್ಪರ್ಧೆ : ಪರಮೇಶ್ವರ ಹೇಳಿದ್ದೇನು?ಬೀದರ್‌ನಿಂದ ರಾಹುಲ್ ಗಾಂಧಿ ಸ್ಪರ್ಧೆ : ಪರಮೇಶ್ವರ ಹೇಳಿದ್ದೇನು?

'ರಾಹುಲ್ ಗಾಂಧಿ ಅವರು ಬೀದರ್ ಮಾತ್ರವಲ್ಲ ರಾಜ್ಯದ ಯಾವ ಕ್ಷೇತ್ರದಿಂದ ನಿಂತರೂ ಗೆಲ್ಲುವುದು ಕಷ್ಟ. ಯಾವ ರಾಜ್ಯದಲ್ಲಿ ನಿಂತರೂ ಗೆಲ್ಲುವುದು ಕಷ್ಟ ಎಂದು ಅವರಿಗೆ ತಿಳಿದಿದೆ. ಆದ್ದರಿಂದ, ಕರ್ನಾಟಕಕ್ಕೆ ಬಂದು ಚುನಾವಣೆಗೆ ನಿಲ್ಲಲು ಬಯಸಿದ್ದಾರೆ. ಆದರೆ, ರಾಜ್ಯದ ಜನರು ಅವರನ್ನು ತಿರಸ್ಕರಿಸಲಿದ್ದಾರೆ' ಎಂದು ತಿಳಿಸಿದರು.

English summary
Karnataka BJP president B.S.Yeddyurappa said that, If Prime Minister of India Narendra Modi will contest from Karnataka in Lok Sabha Elections 2019, he will win with the 1 lakh margin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X