ಹುಬ್ಬಳ್ಳಿಯಲ್ಲಿ ಸುರಕ್ಷಿತವಾಗಿ ಪತ್ತೆಯಾದ ಪೂಜಿತ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 28 : ಬೆಂಗಳೂರಿನಿಂದ ನಾಪತ್ತೆಯಾಗಿದ್ದ 13 ವರ್ಷದ ಎಂ.ಕೆ.ಪೂಜಿತ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ. ಆಕೆ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಸಬಂಧಿಕರ ಮನೆಯಲ್ಲಿದ್ದಾಳೆ.

ರಾಜಾಜಿನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 7 ತರಗತಿ ಓದುತ್ತಿದ್ದ ಎಂ.ಕೆ. ಪೂಜಿತಾ ಆಗಸ್ಟ್ 24ರಿಂದ ನಾಪತ್ತೆಯಾಗಿದ್ದಳು. ಭಾನುವಾರ ಬೆಳಗ್ಗೆ ಆಕೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಸಂಬಂಧಿಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ.[ಪೂಜಿತಾ ನಿಗೂಢ ನಾಪತ್ತೆ]

Missing girl MK Puujita found safe in Hubballi

ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸತೀಶ್ ಅವರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. 'ಇಂದು ಬೆಳಗ್ಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪೂಜಿತ ಪತ್ತೆಯಾಗಿದ್ದಾಳೆ ಎಂದು ಕುಟುಂಬದವರು ಮಾಹಿತಿ ನೀಡಿದರು. ಪೂಜಿತ ಸಂಬಂಧಿಕರ ಮನೆಯಲ್ಲಿದ್ದು, ಕುಟುಂಬದವರು ಅಲ್ಲಿಗೆ ತೆರಳುತ್ತಿದ್ದಾರೆ' ಎಂದು ಹೇಳಿದರು.

ಪೂಜಿತಾ ಇತ್ತೀಚೆಗೆ ಮುಗಿದ ಗಣಿತ ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಅಂಕ ಪಡೆದಿದ್ದಳು. ಈ ಕಾರಣದಿಂದ ಬೇಜಾರಾಗಿ ಮನೆಬಿಟ್ಟು ಹೋಗಿರಬಹುದು ಎಂದು ಆಕೆಯ ತಂದೆ ಮಧುಕಿರಣ್ ಅವರು ಹೇಳಿದ್ದರು. ಆಕೆ ಮನೆ ಬಿಟ್ಟು ಹೋಗಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.[ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]

ಸಾಮಾಜಿಕ ಜಾಲ ತಾಣದಲ್ಲಿ ಪೂಜಿತ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಲಾಗಿತ್ತು. ಆಕೆಯ ಪತ್ತೆಗೆ ಸಹಕಾರ ನೀಡುವಂತೆ ಪೋಷಕರು ಮನವಿ ಮಾಡಿದ್ದರು ಪೂಜಿತ ಪತ್ತೆಯಾಗಿದ್ದರಿಂದ ಆತಂಕ ದೂರವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 13-year-old girl M.K.Puujita is missing from Bengaluru has been found safe in Hubballi railway station on August 28, Sunday morning.
Please Wait while comments are loading...