ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಅತ್ಯಾಧುನಿಕ ಸ್ಟಾರ್ಟ್‌ಅಪ್ ಕ್ಲಸ್ಟರ್ ಉದ್ಘಾಟಿಸಲಿರುವ ಜಾರ್ಜ್

By Mahesh
|
Google Oneindia Kannada News

ಹುಬ್ಬಳ್ಳಿ, ಜುಲೈ 16: ಉತ್ತರ ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ ಸ್ಟಾರ್ಟ್‌ಅಪ್ ಗಳಿಗೆ ಪ್ರೋತ್ಸಾಹಿಸುವ ಉದ್ದೇಶವಿರುವ ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ಅಪ್ ನ ಅತ್ಯಾಧುನಿಕ ಇಎಸ್ ಡಿಎಂ ಕ್ಲಸ್ಟರ್‍ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಜುಲೈ 17ರಂದು ಆರಂಭವಾಗಲಿದೆ.

ಕರ್ನಾಟಕದ ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಅವರು ಇಎಸ್ ಡಿಎಂ ಕ್ಲಸ್ಟರ್‍ ಅನ್ನು ಸಂಜೆ 4.30ಕ್ಕೆ ಉದ್ಘಾಟಿಸಲಿದ್ದಾರೆ.

ಸಚಿವರೊಂದಿಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳು ಜೊತೆಗೂಡಲಿದ್ದಾರೆ.

ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾರು ಕುರ್ಚಿ, ಜೀಪು ಟೇಬಲ್!ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾರು ಕುರ್ಚಿ, ಜೀಪು ಟೇಬಲ್!

ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಟ್ರಸ್ಟಿಗಳಾಗಿರುವ ಡಾ. ದೇಶ್ ದೇಶಪಾಂಡೆ, ದೇಶಪಾಂಡೆ ಪ್ರತಿಷ್ಠಾನದ ಸಿಇಓ ವಿವೇಕ್ ಪವಾರ್‍, ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ಅಪ್ ನ ಸಿಇಓ ಸಿ.ಎಂ. ಪಾಟೀಲ್ ಉಪಸ್ಥಿತರಿರುವರು.

ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ ದೇಶದ ಮಾದರಿ ಕೋರ್ಟ್ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ ದೇಶದ ಮಾದರಿ ಕೋರ್ಟ್

ಹುಬ್ಬಳ್ಳಿಯಲ್ಲಿರುವ ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌‌ಅಪ್ ನಲ್ಲಿ ಇರುವ ಆರಕ್ಕೂ ಹೆಚ್ಚು ಸ್ಟಾರ್ಟ್‌‌ಅಪ್ ಗಳಿಗೆ ಈ ಇಎಸ್ ಡಿಎಂ ಕ್ಲಸ್ಟರ್‍ ನಿಂದ ತಕ್ಷಣದ ನೆರವು ದೊರೆಯಲಿದೆ.

ಸಚಿವ ಜಾರ್ಜ್ ರಿಂದ ಇಎಸ್ ಡಿಎಂ ಕ್ಲಸ್ಟರ್‍ ಉದ್ಘಾಟನೆ

ಸಚಿವ ಜಾರ್ಜ್ ರಿಂದ ಇಎಸ್ ಡಿಎಂ ಕ್ಲಸ್ಟರ್‍ ಉದ್ಘಾಟನೆ

ಕರ್ನಾಟಕದ ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಅವರು ಉತ್ತರ ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ ಸ್ಟಾರ್ಟ್‌ಅಪ್ ಗಳಿಗೆ ಪ್ರೋತ್ಸಾಹಿಸುವ ಉದ್ದೇಶವಿರುವ ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ಅಪ್ ನ ಅತ್ಯಾಧುನಿಕ ಇಎಸ್ ಡಿಎಂ ಕ್ಲಸ್ಟರ್‍ ಉದ್ಘಾಟಿಸಲಿದ್ದಾರೆ. ದೇಶಪಾಂಡೆ ಪ್ರತಿಷ್ಠಾನದ ಸಿಇಓ ವಿವೇಕ್ ಪವಾರ್‍, ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ಅಪ್ ನ ಸಿಇಓ ಸಿ.ಎಂ. ಪಾಟೀಲ್ ಉಪಸ್ಥಿತರಿರುವರು

ಆರಕ್ಕೂ ಹೆಚ್ಚು ಸ್ಟಾರ್ಟ್‌‌ಅಪ್ ಗಳಿಗೆ ನೆರವು

ಆರಕ್ಕೂ ಹೆಚ್ಚು ಸ್ಟಾರ್ಟ್‌‌ಅಪ್ ಗಳಿಗೆ ನೆರವು

6000 ಚದುರಡಿ ಪ್ರದೇಶದಲ್ಲಿರುವ ಇಎಸ್ ಡಿಎಂ ಕ್ಲಸ್ಟರ್‍ ನಲ್ಲಿ ಉದ್ದೇಶಿತ ಮೂಲಮಾದರಿಗಳ ಸಿದ್ಧಪಡಿಸುವ, ಉತ್ಪನ್ನದ ಪರೀಕ್ಷೆ ಮತ್ತು ಪ್ರಮಾಣೀಕರಣದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಈ ನೂತನ ಸೌಲಭ್ಯಗಳು ಉತ್ತರ ಕರ್ನಾಟಕದಲ್ಲಿನ ತಂತ್ರಜ್ಞಾನ ಆಧಾರಿತ ಉದ್ಯಮಿಗಳಿಗೆ ಹೆಚ್ಚು ಉಪಯುಕ್ತವಾಗಲಿವೆ. ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಇರುವ ಸೌಲಭ್ಯಗಳನ್ನು ಸ್ಪೇಸ್ ಆಫ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಅಂಡ್ ಮ್ಯಾನುಫ್ಯಾಕ್ಚರಿಂಗ್ (ಇಎಸ್ ಡಿಎಂ) ಹುಬ್ಬಳ್ಳಿಯಲ್ಲಿಯೇ ಒದಗಿಸಲಿದೆ.

ಹುಬ್ಬಳ್ಳಿಯಲ್ಲಿರುವ ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌‌ಅಪ್ ನಲ್ಲಿ ಇರುವ ಆರಕ್ಕೂ ಹೆಚ್ಚು ಸ್ಟಾರ್ಟ್‌‌ಅಪ್ ಗಳಿಗೆ ಈ ಇಎಸ್ ಡಿಎಂ ಕ್ಲಸ್ಟರ್‍ ನಿಂದ ತಕ್ಷಣದ ನೆರವು ದೊರೆಯಲಿದೆ.

ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ ಅಪ್ ವ್ಯವಸ್ಥೆ

ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ ಅಪ್ ವ್ಯವಸ್ಥೆ

'ಕರ್ನಾಟಕ ಸರ್ಕಾರವು ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ ಅಪ್ ವ್ಯವಸ್ಥೆಗೆ ಪೂರ್ಣ ಪ್ರಮಾಣದ ಬೆಂಬಲ ನೀಡುತ್ತಿದೆ. ಉತ್ತರ ಕರ್ನಾಟಕದ ಯುವ ಎಲೆಕ್ಟ್ರಾನಿಕ್ ಉದ್ಯಮಿಗಳಿಗೆ ನೆರವು ಒದಗಿಸಲಿರುವ ಇಎಸ್ ಡಿಎಂ ಕ್ಲಸ್ಟರ್‍ ಅನ್ನು ಬೆಂಗಳೂರಿನಿಂದ ಹೊರಗೆ ಆರಂಭಿಸುವುದಕ್ಕೆ ಬೆಂಬಲ ನೀಡಿರುವುದಕ್ಕಾಗಿ ರಾಜ್ಯ ಸರ್ಕಾರ ಕೃತಜ್ಞತೆ ಸಲ್ಲಿಸಬೇಕು' ಎಂದು ದೇಶಪಾಂಡೆ ಪ್ರತಿಷ್ಠಾನ ಹೇಳಿದೆ.

ಅತ್ಯಾಧುನಿಕ ಇಎಸ್ ಡಿಎಂ ನೆರವು ಕಲ್ಪಿಸಲಿದೆ

ಅತ್ಯಾಧುನಿಕ ಇಎಸ್ ಡಿಎಂ ನೆರವು ಕಲ್ಪಿಸಲಿದೆ

ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿನ ಸಮಸ್ಯೆಗಳಿಗೆ ಸ್ಯಾಂಡ್ ಬಾಕ್ಸ್ ಇಎಸ್ ಡಿಎಂ ಕ್ಲಸ್ಟರ್‍ ಪರಿಹಾರ ಕಲ್ಪಿಸಲಿದೆ. ವಾಹನೋದ್ಯಮ, ವೈದ್ಯಕೀಯ ಮತ್ತು ದೂರ ಸಂಪರ್ಕ ವ್ಯವಸ್ಥೆಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ಸ್ಟಾರ್ಟ್‌‌ಅಪ್ ಗೆ ಅತ್ಯಾಧುನಿಕ ಇಎಸ್ ಡಿಎಂ ನೆರವು ಕಲ್ಪಿಸಲಿದೆ.

ಡಿಸೈನ್ ನಿಂದ ಮೂಲಮಾದರಿಗಳ ನಿರ್ಮಾಣ, ಸಮೂಹ ತಯಾರಿಕೆ, ಅಂತಿಮ ಪರೀಕ್ಷಾ ಸೌಲಭ್ಯಗಳನ್ನು ಇಎಸ್ ಡಿಎಂ ಒಳಗೊಂಡಿದೆ. ಇಎಸ್ ಡಿಎಂ ಕ್ಲಸ್ಟರ್‍ ನಲ್ಲಿ ಸಂಪೂರ್ಣ ಸ್ವಯಂಚಾಲಿತ ಎಸ್ ಎಂಟಿ ಸೌಲಭ್ಯ ಹೊಂದಿದೆ.

English summary
Sandbox Startups ESDM Cluster, a state-of-the-art facility set up at the Sandbox Startups in Hubballi to encourage electronics startups in the North Karnataka region, will be inaugurated by Minister KJ George on July 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X