ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ಚಾಲನೆ ಮೂಲಕ ಬದುಕು ಕಟ್ಟಿಕೊಂಡ ಹುಬ್ಬಳ್ಳಿ ಮಹಿಳೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ29: ಸಾಮಾನ್ಯವಾಗಿ ಮಹಿಳೆಯರು ಮನೆಗೆಲಸ ನೋಡಿಕೊಳ್ಳುವುದು ಮತ್ತು ಪುರುಷರು ಹೊರಗಡೆ ಹೋಗಿ ದುಡಿದು ಮನೆಯನ್ನು ನಿಭಾಯಿಸುವುದು ಲೋಕ ರೂಢಿ. ಆದರೆ ಇದೀಗ ಮಹಿಳೆ ಬರೀ ಮನೆಯ ನಾಲ್ಕು ಗೋಡೆಯ ಒಳಗೆ ಕುಳಿತಿಲ್ಲ. ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇದೇ ರೀತಿ ಹುಬ್ಬಳ್ಳಿಯ ನಿವಾಸಿಯೊಬ್ಬರು ಈಗ ಪುರುಷ ಸಮಾನವಾಗಿ ದುಡಿಮೆ ಮಾಡಿ ತನ್ನ ಕುಟುಂಬ ನಿರ್ವಹಣೆಯಲ್ಲಿ ಆಸರೆಯಾಗಿದ್ದಾರೆ.

ಖಾಕಿ ಡ್ರೇಸ್ ಹಾಕಿಕೊಂಡು ಆಟೋ ಓಡಿಸುತ್ತಿರುವ ಮಹಿಳೆ ಮಂಜುಳಾ ಹಿರೇಮಠ. ಹುಬ್ಬಳ್ಳಿಯ ಈಶ್ವರ ನಗರದ ಹೂಗಾರ ಪ್ಲಾಟ್‌ನ ನಿವಾಸಿ. ಮಂಜುಳಾ ಹಿರೇಮಠ ಕಳೆದ ಐದು-ಆರು ವರ್ಷಗಳಿಂದ ಹುಬ್ಬಳ್ಳಿ ನಗರದಲ್ಲಿ ಆಟೋ ಓಡಿಸಿ ಜೀವನ ನಡೆಸುತ್ತಾ ಇದ್ದಾರೆ.

ಇದಕ್ಕೆಲ್ಲ ಕಾರಣ ಅವರ ಕುಟುಂಬ. ತಮ್ಮ ಮಗಳ ಪಾಲನೆ ಪೋಷಣೆ ಹಾಗೂ ಪತಿಯ ಅನಾರೋಗ್ಯದ ಕಾರಣದಿಂದ‌ ಮಂಜುಳಾಗೆ ಸಂಕಷ್ಟದ ದಿನ ಎದುರಾಗಿತ್ತು. ಆರ್ಥಿಕ ಹೊರೆ ಅವರನ್ನು ಕಾಡಲಾರಂಭಿಸಿತು. ಈ ನಡುವೆ ಸಂಕಷ್ಟಗಳಿಗೆ ಎದೆಗುಂದದ ಮಂಜುಳಾ 2017ರಿಂದ ಆಟೋ ಓಡಿಸಿಕೊಂಡು ಸಂಸಾರದ ಬಂಡಿಯನ್ನು ಎಳೆಯುತ್ತಿದ್ದಾರೆ.

Met Women Auto Driver of Hubballi Who Support Family

ಜೀವನ ನಿರ್ವಹಣೆಗೆ ಆಟೋ; ಮಂಜುಳಾ ಓದಿದ್ದು ಹತ್ತನೇ ತರಗತಿ, ವಾಹನ ಓಡಿಸುವ ಹವ್ಯಾಸ ಹೊಂದಿದ್ದ ಇವರು, ತಮ್ಮ ಸ್ನೇಹ ಸಂಬಂಧಿಗಳ ಸಹಾಯದಿಂದ ಆಟೋ ಓಡಿಸುವುದನ್ನು ಚಿಕ್ಕ ವಯಸ್ಸಿನಲ್ಲೇ ಕಲಿತ್ತಿದ್ದರು. ಮದುವೆ ನಂತರ ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದರು.

Met Women Auto Driver of Hubballi Who Support Family

ಪತಿ ಸಿದ್ದರಾಮಯ್ಯ ಕೂಡಾ ಆಟೋ ಚಾಲನೆ ಮಾಡುತ್ತಿದ್ದರು. ಆದರೆ ಮೂರು ವರ್ಷಗಳ ಹಿಂದೆ ಸಿದ್ದಲಿಂಗಯ್ಯ ಅವರಿಗೆ ಅಪಘಾತವಾಗಿ ಕಾಲು ಮುರಿದುಕೊಂಡಿದ್ದರು. ಹೀಗಾಗಿ ಮಂಜುಳಾ ಹಿರೇಮಠ ತಮ್ಮ ಮಗಳ ಪೋಷಣೆ ಮತ್ತು ಜೀವನ ನಿರ್ವಹಣೆಗೆ ಆಟೋ ಚಾಲನೆಯನ್ನು ನಂಬಿಕೊಂಡು ಜೀವನ ಬಂಡಿ ನಡೆಸುತ್ತಿದ್ದಾರೆ.

ಇನ್ನು ವಿಶೇಷ ಅಂದರೆ ಮಂಜುಳಾ ಹಿರೇಮಠ ಪುರುಷರಂತೆಯೇ ಬಟ್ಟೆ ತೊಟ್ಟು ನಿತ್ಯ ಆಟೋ ಓಡಿಸುತ್ತಾರೆ. ಈ ಕುರಿತು ಅವರನ್ನು ಕೇಳಿದರೆ, "ಮಹಿಳೆಯರಿಗೆ ಈಗ ರಕ್ಷಣೆ ಇಲ್ಲ. ಇದಕ್ಕಾಗಿ ನಾನು ಪುರುಷರಂತೆ ಬಟ್ಟೆ ಧರಿಸಿ ಆಟೋ ಓಡಿಸುತ್ತೇನೆ" ಎನ್ನುತ್ತಾರೆ.

Met Women Auto Driver of Hubballi Who Support Family

ಬಡತನ ಮತ್ತು ಇಡೀ ಕುಟುಂಬದ ಹೊಣೆಗಾರಿಕೆಯನ್ನು ಮಹಿಳೆಯೂ ಸಹ ಸಮರ್ಥವಾಗಿ ಎದುರಿಸಬಲ್ಲಳು ಎಂಬುದಕ್ಕೆ ಮಂಜುಳಾ ಹಿರೇಮಠ ಉದಾಹರಣೆಯಾಗಿದ್ದಾರೆ. ಮಹಿಳೆಯಿಂದ ಏನನ್ನು ಮಾಡಲು ಸಾಧ್ಯವಿಲ್ಲ ಎಂಬುವವರ ಮಧ್ಯೆ ಎಂತಹ ಸಂಕಷ್ಟವನ್ನಾದರೂ ಧೈರ್ಯದಿಂದ ಎದುರಿಸಬಹುದು ಎಂಬುದನ್ನು ಮಂಜುಳಾ ನಿರೂಪಿಸಿದ್ದಾರೆ.

ಆದರೆ ಸರ್ಕಾರ, ಸಂಘ ಸಂಸ್ಥೆಗಳು ಇಂತಹ ಕಷ್ಟದ ಜೀವನ ನಡೆಸುವ ಮಹಿಳಾ ಕುಟುಂಬಗಳಿಗೆ ನೆರವಾದರೆ ನೂರಾರು ಕುಟುಂಬಗಳು ನೆಮ್ಮದಿಯ ಬದುಕು ನಡೆಸಬಹುದು ಎನ್ನುವುದು ಪ್ರಜ್ಞಾವಂತರ ಆಶಯವಾಗಿದೆ.

English summary
Met woman auto driver of Hubballi Manjula Hiremath. She supporting family by running auto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X