ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಪ್ರಯಾಣಿಕರಿಗಾಗಿ ನೈಋತ್ಯ ರೈಲ್ವೆಯಿಂದ "ಮೇರಿ ಸಹೇಲಿ"

By Lekhaka
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 30: ರೈಲುಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಸುರಕ್ಷತಾ ದಳವು ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ 'ಮೇರಿ ಸಹೇಲಿ' ಎಂಬ ವಿನೂತನ ಯೋಜನೆಯನ್ನು ಶುರು ಮಾಡಿದೆ.

ಹಬ್ಬದ ಅಂಗವಾಗಿ ಸಂಚರಿಸುವ ವಿಶೇಷ ರೈಲುಗಳಲ್ಲಿ ಈ ಸೇವೆಯು ಜಾರಿಯಲ್ಲಿರಲಿದೆ. ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಹುಬ್ಬಳ್ಳಿ/ವಾಸ್ಕೊಡಾಗಾಮಾ - ಹಜರತ್ ನಿಜಾಮುದ್ದಿನ್ /ಹುಬ್ಬಳ್ಳಿ- ವಾಸ್ಕೊಡಾಗಾಮಾ ಎಕ್ಸ್​ಪ್ರೆಸ್ ಸ್ಪೆಷಲ್, ಹುಬ್ಬಳ್ಳಿ- ಲೋಕಮಾನ್ಯ ತಿಲಕ್ ಟರ್ವಿುನಸ್- ಹುಬ್ಬಳ್ಳಿ ಎಕ್ಸ್​ಪ್ರೆಸ್ ಸ್ಪೆಷಲ್, ಹುಬ್ಬಳ್ಳಿ- ವಿಜಯವಾಡಾ- ಹುಬ್ಬಳ್ಳಿ ಎಕ್ಸ್​ಪ್ರೆಸ್ ಸ್ಪೆಷಲ್ ಮತ್ತು ಗದಗ- ಮುಂಬೈ ಸಿಎಸ್​ಎಂಟಿ- ಗದಗ ಎಕ್ಸ್​ಪ್ರೆಸ್ ಸ್ಪೇಷಲ್ ರೈಲುಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಮಹಿಳಾ ಸುರಕ್ಷತೆ ಕುರಿತು ರಾಜ್ಯಗಳಿಗೆ ಕೇಂದ್ರದ ಸಲಹೆ: ಪೊಲೀಸರು ಪಾಲಿಸಬೇಕಾದ ನಿಯಮಗಳುಮಹಿಳಾ ಸುರಕ್ಷತೆ ಕುರಿತು ರಾಜ್ಯಗಳಿಗೆ ಕೇಂದ್ರದ ಸಲಹೆ: ಪೊಲೀಸರು ಪಾಲಿಸಬೇಕಾದ ನಿಯಮಗಳು

ಮೇರಿ ಸಹೇಲಿ ಯೋಜನೆಯ ತಂಡದಲ್ಲಿ ಮಹಿಳಾ ಸಬ್ ಇನ್​ಸ್ಪೆಕ್ಟರ್ ಹಾಗೂ ಕಾನ್ ಸ್ಟೆಬಲ್ ಕಾರ್ಯನಿರ್ವಹಿಸುತ್ತಾರೆ. ಆರಂಭಿಕ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಬೋಗಿ ಸೇರಿದಂತೆ ಎಲ್ಲ ಪ್ರಯಾಣಿಕರ ವಿವರಗಳನ್ನು ಸಂಗ್ರಹಿಸುವ ಇವರು, ಒಂಟಿಯಾಗಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಮಾಹಿತಿ ಪಡೆದುಕೊಳ್ಳುತ್ತಾರೆ. ಪ್ರಯಾಣದ ಸಂದರ್ಭ ವಹಿಸಬೇಕಾದ ಮುನ್ನೆಚ್ಚರಿಕೆಯ ಕುರಿತು ಅವರಿಗೆ ತಿಳಿಸಲಾಗುತ್ತದೆ. ಅಪಾಯ ಸಂದರ್ಭ ಎದುರಾದ ಮಹಿಳಾ ಪ್ರಯಾಣಿಕರು 182 ಸಂಖ್ಯೆಗೆ ಕರೆ ಮಾಡಲು ತಿಳಿಸಲಾಗಿದೆ. ಹುಬ್ಬಳ್ಳಿ ವಿಭಾಗಕ್ಕೆ [email protected] ಎಂದು ಇಮೇಲ್ ಐಡಿ ರಚಿಸಲಾಗಿದೆ. ಭದ್ರತಾ ಸಹಾಯಕ್ಕಾಗಿ ಹುಬ್ಬಳ್ಳಿ ವಿಭಾಗದ ಮೊಬೈಲ್ ಸಂಖ್ಯೆ 7022626987 ಸಂಪರ್ಕಿಸಬಹುದಾಗಿದೆ.

Hubballi: Meri Saheli Special Programme By Southwest Railway To Women Safety

ದೆಹಲಿಯ ಆರ್​ಪಿಎಫ್ ಡಿಜಿ ಅರುಣ್ ಕುಮಾರ್ ಹಾಗೂ ನೈಋತ್ಯ ರೈಲ್ವೆ ವಲಯದ ಐಜಿ ಮತ್ತು ಪ್ರಧಾನ ಭದ್ರತಾ ಆಯುಕ್ತ ಆರ್.ಎಸ್. ಚೌವ್ಹಾಣ ನಿರ್ದೇಶನದ ಮೇರೆಗೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

English summary
Southwest railway has introduced "Meri Saheli" special programme to women passengers safety at trains
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X