ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಪೋನ್ ಕರೆ; ಮನೆ ಬಾಗಿಲಿಗೆ ಬರಲಿದೆ ಔಷಧಿ

|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 07 : ಕೊರೊನಾ ಹರಡದಂತೆ ತಡೆಯಲು ದೇಶದಲ್ಲಿ ಲಾಕ್‍ ಡೌನ್ ಜಾರಿಗೊಳಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಯೂ 144 ಸೆಕ್ಷನ್ ಜಾರಿಯಲ್ಲಿದೆ. ಹೀಗಾಗಿ ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ನಿರ್ಬಂಧಿಸಲಾಗಿದೆ.

Recommended Video

ಇನ್ನೂ ಅಬ್ಬರಿಸಲಿದೆ ಕೊರೊನಾ!!ಕೋಡಿ ಶ್ರೀಗಳು ಕೊರೊನಾ ಬಗ್ಗೆ ನುಡಿದ ಭವಿಷ್ಯ ಇಲ್ಲಿದೆ

ಅಗತ್ಯ ವಸ್ತುಗಳನ್ನು ಧಾರವಾಡ ಜಿಲ್ಲಾಡಳಿತದಿಂದ ಪೂರೈಕೆ ಮಾಡಲಾಗುತ್ತಿದೆ. ಇದರ ಜೊತೆಗೆ ಆರೋಗ್ಯದ ಹಿತದೃಷ್ಟಿಯಿಂದ ಮನೆಯಲ್ಲಿಯೇ ಕುಳಿತು ಫೋನ್ ಕರೆ ಮಾಡಿದರೆ ಔಷಧಿಯನ್ನು ಮನೆ ಬಾಗಿಲಿಗೆ ತಲುಪಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ಸಿಹಿ ಸುದ್ದಿ: ಆಸ್ಪತ್ರೆಯಿಂದ ಬಿಡುಗಡೆಗೊಂಡ ಕೊರೊನಾ ರೋಗಿಸಿಹಿ ಸುದ್ದಿ: ಆಸ್ಪತ್ರೆಯಿಂದ ಬಿಡುಗಡೆಗೊಂಡ ಕೊರೊನಾ ರೋಗಿ

ಹುಬ್ಬಳ್ಳಿಯ 22 ಕ್ಕೂ ಹೆಚ್ಚು ಹಾಗೂ ಧಾರವಾಡದ 12 ಕ್ಕೂ ಹೆಚ್ಚು ಮೆಡಿಕಲ್ ಶಾಪ್ ಮಾಲೀಕರು ಫೋನ್ ಮತ್ತು ಆನ್‍ಲೈನ್‍ನಲ್ಲಿ ಗ್ರಾಹಕರ ಬೇಡಿಕೆ ಸ್ವೀಕರಿಸುತ್ತಿದ್ದಾರೆ. ಔಷಧಿಯನ್ನು ಜನರ ಮನೆಯ ಬಾಗಿಲಿಗೆ ತಲುಪಿಸಲು ಸಿದ್ಧರಾಗಿದ್ದಾರೆ.

Medicine Door Delivery Services Hubballi And Dharwad

ಔಷಧಿ ತರಿಸುವುದು ಹೇಗೆ? : ಜಿಲ್ಲಾಡಳಿತ ನೀಡಿರುವ ಔಷಧಿ ಅಂಗಡಿಗಳ ದೂರವಾಣಿ ಸಂಖ್ಯೆಗೆ ಜನರು ಕರೆ ಮಾಡಬೇಕಿದೆ. ನಿಮ್ಮ ಹೆಸರು ಹಾಗೂ ವಿಳಾಸ ನೋಂದಾಯಿಸಿ, ನಿಮಗೆ ಬೇಕಾದ ಔಷಧಗಳ ವಿವರ, ಬೇಡಿಕೆಯನ್ನು ತಿಳಿಸಬೇಕು. 24 ಗಂಟೆಗಳ ಒಳಗೆ ಪ್ರತಿಕ್ರಿಯೆ ಬರುತ್ತದೆ.

ನಗದು ಅಥವಾ ಕಾರ್ಡ್ ಅಥವಾ ಯುಪಿಐ ಮೂಲಕ ಔಷಧಿಯ ಹಣವನ್ನು ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಥವಾ www.supportdharwad.in ಮೂಲಕವೂ ಈ ಸಂಪರ್ಕ ಪಡೆಯಬಹುದು. ಹೆಚ್ಚಿನ ವಿವರಗಳಿಗೆ 1077 ಸಹಾಯವಾಣಿಗೆ ಸಂಪರ್ಕಿಸಬಹುದು.

ಹುಬ್ಬಳ್ಳಿ; ಐಸೊಲೇಷನ್ ವಾರ್ಡ್ ಆಗುವತ್ತ ರೈಲ್ವೆ ಬೋಗಿಗಳು...ಹುಬ್ಬಳ್ಳಿ; ಐಸೊಲೇಷನ್ ವಾರ್ಡ್ ಆಗುವತ್ತ ರೈಲ್ವೆ ಬೋಗಿಗಳು...

ಸಹಾಯವಾಣಿ ಆರಂಭ : ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಯಾಗುತ್ತಿದೆ. ಇದನ್ನು ದೂರವಾಗಿಸಲು ಧಾರವಾಡ ಜಿಲ್ಲಾಡಳಿತ ಹಾಗೂ ಕಿಮ್ಸ್ ವತಿಯಿಂದ 24*7 ವೈದ್ಯರ ದೂರವಾಣಿ ಸಲಹಾ ಕೇಂದ್ರ ಸ್ಥಾಪಿಸಲಾಗಿದೆ.

ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇರುವರು, ನಿಯಮಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ದೂರವಾಣಿ ಸಂಖ್ಯೆಗಳಾದ 0836-2370057, 0836-2373447, 0836-2373641ಕ್ಕೆ ಕರೆ ಮಾಡಿ ವೈದ್ಯರ ಸಲಹೆ ಪಡೆಯಬಹುದು.

ದಿನದ 24 ಗಂಟೆಯು ವೈದ್ಯರ ಸಲಹಾ ಕೇಂದ್ರ ಕಾರ್ಯನಿರ್ವಹಿಸುವುದು. 3 ಶಿಫ್ಟ್ ಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುವರು. ಕಿಮ್ಸ್‌ನ ಎಲ್ಲಾ ವಿಭಾಗಗಳ 200 ವೈದ್ಯರು ದೂರವಾಣಿ ಮೂಲಕ ಜನರ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ.

English summary
Dharwad district administration launched medicine door delivery services in Hubballi and Dharwad city's. People can call to medical shop number and order for medicine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X