ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಮಲೇಶ್ ತಿವಾರಿ ಹತ್ಯೆ ಪ್ರಕರಣದಲ್ಲಿ ಹುಬ್ಬಳ್ಳಿಯ ವ್ಯಕ್ತಿ ವಿಚಾರಣೆ

|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 22: ಉತ್ತರಪ್ರದೇಶದ ಲಖನೌನಲ್ಲಿ ಹಿಂದೂ ಸಮಾಜ್ ಪಾರ್ಟಿಯ ಮುಖ್ಯಸ್ಥ ಕಮಲೇಶ್ ತಿವಾರಿಯ ಭೀಕರ ಹತ್ಯೆ ಆಯಿತಲ್ಲಾ, ಆ ಪ್ರಕರಣದ ನಂಟು ಹುಬ್ಬಳ್ಳಿವರೆಗೆ ಇದೆ ಎಂದು ಕಂಡುಬಂದಿದೆ. ಹಳೇ ಹುಬ್ಬಳ್ಳಿ ಪ್ರದೇಶದ ಸ್ಥಳೀಯ ಮೊಹಮ್ಮದ್ ಜಫರ್ ಸಾದಿಕ್ ನನ್ನು ವಿಚಾರಣೆ ಸಲುವಾಗಿ ಪೊಲೀಸರು ಕರೆದೊಯ್ದಿದ್ದಾರೆ. ಕಮಲೇಶ್ ತಿವಾರಿ ಕೊಲೆ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

ಕಮಲೇಶ್ ತಿವಾರಿ ಕೊಲೆ ಪ್ರಮುಖ ಆರೋಪಿ 2 ತಿಂಗಳ ಹಿಂದಷ್ಟೇ ದುಬೈನಿಂದ ಬಂದಿದ್ದಕಮಲೇಶ್ ತಿವಾರಿ ಕೊಲೆ ಪ್ರಮುಖ ಆರೋಪಿ 2 ತಿಂಗಳ ಹಿಂದಷ್ಟೇ ದುಬೈನಿಂದ ಬಂದಿದ್ದ

Recommended Video

ಡಿಕೆಶಿಗೆ ವಾರ್ನಿಂಗ್ ಮಾಡಿದ ಜಗದೀಶ್ ಶೆಟ್ಟರ್.. | Oneindia Kannada

"ಉತ್ತರಪ್ರದೇಶದಲ್ಲಿ ನಡೆದ ಹಿಂದೂ ಸಂಘಟನೆ ನಾಯಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾದಿಕ್ ನನ್ನು ವಿಚಾರಣೆ ಮಾಡುತ್ತಿದ್ದೇವೆ. ಆದರೆ ಈ ವರೆಗೆ ಬಂಧಿಸಿಲ್ಲ. ಸಾದಿಕ್ ಗೂ ನಿಷೇಧಿತ 'ಸಿಮಿ' ಸಂಘಟನೆಗೂ ನಂಟಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ. ಆದರೆ ಅದು ಸತ್ಯವಲ್ಲ. ಆತ ಯುವ ಸಂಘಟನೆಯೊಂದರ ಜತೆ ನಂಟು ಹೊಂದಿದ್ದಾನೆ" ಎಂದಿದ್ದಾರೆ.

Man From Hubballi Interrogated In Kamlesh Tiwari Murder Case

ಉತ್ತರಪ್ರದೇಶದ ಲಖನೌದಲ್ಲಿ ಕಳೆದ ಶುಕ್ರವಾರದಂದು ಹಿಂದೂ ಸಮಾಜ್ ಪಾರ್ಟಿಯ ಮುಖ್ಯಸ್ಥ ಕಮಲೇಶ್ ತಿವಾರಿ ಹತ್ಯೆಯಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ನ ಸೂರತ್ ನಲ್ಲಿ ಹಲವರನ್ನು ಬಂಧಿಸಲಾಗಿತ್ತು. ಇದೀಗ ಹುಬ್ಬಳ್ಳಿಯ ವ್ಯಕ್ತಿಯೊಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

English summary
Uttar Pradesh Hindu samaj party leader Kamlesh Tiwari murder case linked to Hubballi now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X