ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ಒಂದು ಚಾಟ್, ಖೋತಾ ಆಯ್ತು ಲಕ್ಷಗಟ್ಟಲೆ ದುಡ್ಡು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 5: ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ, ಬೆಲೆಬಾಳುವ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ನಗರದ ವೈದ್ಯರೊಬ್ಬರ ಪತ್ನಿಗೆ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿದ್ದಾನೆ.

ಕೆನಡಿ ಓವೆನ್ ಎಂಬ ಹೆಸರಿನ ವ್ಯಕ್ತಿ ಲಂಡನ್‌ನ ತೈಲ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ವೈದ್ಯರ ಪತ್ನಿಗೆ ಫೇಸ್‌ಬುಕ್‌ಲ್ಲಿ ಪರಿಚಯ ಮಾಡಿಕೊಂಡಿದ್ದಾನೆ. ಈ ವೇಳೆ ವಿದೇಶದಿಂದ ತಾನು ವೈದ್ಯರ ಪತ್ನಿಗೆ ಬೆಲೆ ಬಾಳುವ ಗಿಫ್ಟ್ ಕಳಿಸುವುದಾಗಿ ಆಸೆ ತೋರಿಸಿದ್ದ. ಅದನ್ನು ನಂಬಿದ ಈ ಮಹಿಳೆ ಆತನಿಗೆ 21.41 ಲಕ್ಷ ಹಣವನ್ನು ಆತನ ಖಾತೆಗೆ ವರ್ಗಾಯಿಸಿದ್ದಾರೆ.

ಪೋಲಿ ವೆಬ್ ಸೈಟ್ ಗೆ ಗೆಳತಿ ಫೋನ್ ನಂಬರ್ ಹಾಕಿದ ವ್ಯಕ್ತಿ ಅಂದರ್ಪೋಲಿ ವೆಬ್ ಸೈಟ್ ಗೆ ಗೆಳತಿ ಫೋನ್ ನಂಬರ್ ಹಾಕಿದ ವ್ಯಕ್ತಿ ಅಂದರ್

ದೆಹಲಿ ಏರ್‌ಪೋರ್ಟ್‌ ಪಾರ್ಸೆಲ್ ಆಫೀಸ್‌ನಿಂದ ಪಾರ್ಸಲ್ ಬಂದಿದೆ ಎಂದು ಇಬ್ಬರಿಂದ ವೈದ್ಯರ ಪತ್ನಿಗೆ ಕರೆ ಮಾಡಿಸಿದ್ದಾನೆ. ಪಾರ್ಸಲ್ ‌ನಲ್ಲಿ ಬೆಲೆ ಬಾಳುವ ವಸ್ತುಗಳಿವೆ, ಅವುಗಳನ್ನು ಪಡೆಯಲು ಹಣ ಪಾವತಿಸಬೇಕು ಎಂದು ಐದು ಬ್ಯಾಂಕ್‌ಗಳ ಖಾತೆ ನಂಬರ್‌ಗಳನ್ನು ನೀಡಿದ್ದಾನೆ. ಅದನ್ನು ನಂಬಿದ ಇವರು 21,41,500 ಜಮಾ ಮಾಡಿದ್ದಾರೆ. ನಂತರ ಪಾರ್ಸಲ್ ಸಿಗದೇ ಮೋಸ ಹೋಗಿದ್ದಾರೆ.

Man Fraud Lakhs Of Rupees To Wife Of Doctor By Facebook

ವೈದ್ಯ ಹಾಗೂ ವೈದ್ಯರ ಪತ್ನಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಕಿಲಾಡಿ ಆರೋಪಿಗಾಗಿ ಬಲೆ ಬೀಸಿದ್ದಾರೆ.

English summary
A man who was introduced on Facebook has cheated lakhs of rupees to the wife of a doctor in hubballi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X