ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಂಡತಿ ಮೊಬೈಲ್ ಎಂದು ಮಾವನಿಗೆ ಅಶ್ಲೀಲ ವಿಡಿಯೋ ಕಳುಹಿಸಿದ ಅಳಿಯ!

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮಾರ್ಚ್. 22 : ಹೆಂಡತಿ ಮೊಬೈಲ್ ಎಂದು ತಿಳಿದು ಮಾವನ ಮೊಬೈಲ್ ಗೆ ಅಶ್ಲೀಲ ವಿಡಿಯೋ ಸಂದೇಶ ಕಳುಹಿಸುತ್ತಿದ್ದ ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ಅರುಣ್ ನಾಯಕ್ ಬಂಧಿತ ಆರೋಪಿ. ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಡಾಕ್ಟರ್ ಜೊತೆ ಮದುವೆಯಾಗಿತ್ತು. ಆದರೆ, ಮದುವೆ ನಂತರ ಪತ್ನಿ ಗಂಡನ ಮನೆ ತೊರೆದು ಹುಬ್ಬಳ್ಳಿಯ ತವರು ಮನೆಗೆ ಬಂದು ನೆಲೆಸಿದ್ದರು.

Man arrested for sending obscene videos to wifes father in hubballi

ಕೆಲವು ದಿನಗಳ ಹಿಂದೆ ಪತ್ನಿ ತಮ್ಮ ತಂದೆಯ ಮೊಬೈಲ್‍ ನಿಂದ ಪತಿ ಅರುಣ್‍ ಗೆ ಕರೆ ಮಾಡಿದ್ದರು. ಅರುಣ್ ಇದುವೇ ತನ್ನ ಪತ್ನಿ ನಂಬರ್ ಎಂದು ತಿಳಿದು ನಿರಂತರವಾಗಿ ಮೊಬೈಲ್‍ ಗೆ ಅಶ್ಲೀಲ ವಿಡಿಯೋ, ಚಿತ್ರ ಹಾಗೂ ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದನು.

ಅಳಿಯನ ಕಾಮಾವತಾರ ಕಂಡ ಮಾವ ಮೋಹನ್ ಹೆಗಡೆ ಅಶೋಕ್ ನಗರದ ಪೊಲೀಸ್ ಠಾಣೆ ದೂರು ನೀಡಿದ್ದರು. ಕಳೆದ ಒಂದು ವರ್ಷದ ಹಿಂದೆ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಕೋರ್ಟ್ ವಿಚಾರಣೆಗಾಗಿ ಸೋಮವಾರ ಹುಬ್ಬಳ್ಳಿ ನಗರಕ್ಕೆ ಬಂದಿದ್ದ ಅರುಣ್ ನಾಯಕ್‍ ರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

English summary
Man arrested for sending obscene videos to wifes father in hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X