ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಮುಖ್ಯಮಂತ್ರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವುದೇ ಆಗಿರುತ್ತದೆ: ಮೋದಿ

|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 10: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹುಬ್ಬಳ್ಳಿಗೆ ಬಂದಿದ್ದರು. ಐದು ಗಂಟೆಗೆ ಅವರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ತಡವಾಯಿತು. ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು.

ಮಹಾನಾಯಕ ಎನ್ಟಿಆರ್ ಬೆನ್ನಿಗೆ ಚೂರಿ ಹಾಕಿದ್ದ ಚಂದ್ರಬಾಬು ನಾಯ್ಡು: ಮೋದಿಮಹಾನಾಯಕ ಎನ್ಟಿಆರ್ ಬೆನ್ನಿಗೆ ಚೂರಿ ಹಾಕಿದ್ದ ಚಂದ್ರಬಾಬು ನಾಯ್ಡು: ಮೋದಿ

ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಕರ್ನಾಟಕದಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಂತಾಗಿದೆ. ಮೋದಿ ಅವರ ಆಗಮನಕ್ಕೂ ಮುನ್ನ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ವಿಶ್ವದಲ್ಲೇ ಅತಿ ದೊಡ್ಡ ಆರೋಗ್ಯ ಯೋಜನೆ ತಂದ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದರು.

Narendra Modi

ಹದಿನೇಳು ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ದೊರೆಯುವಂತೆ ಮಾಡಿದರು. ಆದಾಯ ತೆರಿಗೆ ಇಳಿಕೆ ಮಾಡಿದ ಕೇಂದ್ರ ಸರಕಾರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು ಸದಾನಂದ ಗೌಡ. ಬಿಜೆಪಿಯ ಭಾರೀ ಶಕ್ತಿ ಪ್ರದರ್ಶನದಂತೆ ಕಂಡುಬರುತ್ತಿರುವ ಈ ಸಭೆಯಲ್ಲಿ ಮೋದಿ ಮಾತನಾಡಲಿದ್ದಾರೆ.

ದೆಹಲಿಯಲ್ಲಿ ಕೂತು ರಾಜ್ಯ ಸರಕಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿ ಹೆಸರು ಹೇಳದೆ ವ್ಯಂಗ್ಯವಾಡಿದರು.

Newest FirstOldest First
8:02 PM, 10 Feb

ನಿಮಗೆ ಎಂಥ ಸರಕಾರ ಬೇಕು ಎಂದು ನಿರ್ಧರಿಸಿ. ದುರ್ಬಲ ಸರಕಾರವಾ? ಸಶಕ್ತ ಸರಕಾರವಾ?
7:52 PM, 10 Feb

ಇದೇ ಮಾದರಿಯನ್ನು ದೇಶದಲ್ಲೂ ತರಲು ಬಯಸುತ್ತಾರೆ.
7:52 PM, 10 Feb

ಇದೇ ಕೆಟ್ಟ ಮಾದರಿ ದೇಶದಲ್ಲೂ ತರುವುದಕ್ಕೆ ಪ್ರಯತ್ನ ನಡೆಯುತ್ತಿದೆ
7:52 PM, 10 Feb

ಕಾಂಗ್ರೆಸ್ ತೊಂದರೆ ಕೊಡುತ್ತಾ ಇರುತ್ತದೆ. ಮುಖ್ಯಮಂತ್ರಿ ಕಣ್ಣೀರು ಹಾಕುತ್ತಾ ಇರುತ್ತಾರೆ
7:51 PM, 10 Feb

ಕರ್ನಾಟಕ ಮುಖ್ಯಮಂತ್ರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವುದೇ ಆಗಿರುತ್ತದೆ
7:51 PM, 10 Feb

ಇವರಿಗೆ ರೈತರು, ಯುವಕರ ಹಿತ ಬೇಕಿಲ್ಲ. ತಮ್ಮ ಸರಕಾರ ಉಳಿದರು ಸಾಕಷ್ಟೇ
7:46 PM, 10 Feb

ನೋಡಿ, ಇದು ಇವರ ಪ್ರಾಮಾಣಿಕತೆಗೆ ಇರುವ ಸಾಕ್ಷಿ
Advertisement
7:45 PM, 10 Feb

ರೈತರ ಸಾಲ ಮನ್ನಾದ ಭರವಸೆ ನೀಡಿದರಲ್ಲಾ ರಾಜ್ಯ ಸರಕಾರ ಏನು ಮಾಡಿದರು? ಸಾವಿರ ಜನರ ಮನ್ನಾ ಮಾಡಿದರು
7:43 PM, 10 Feb

ನಿಮ್ಮ ಚೌಕೀದಾರ್ ಮೇಲೆ ಪ್ರಾಮಾಣಿಕರಿಗೆ ನಂಬಿಕೆ ಇದೆ, ಆದರೆ ಭ್ರಷ್ಟರಿಗೆ ಕಷ್ಟ
7:42 PM, 10 Feb

ಇದೇ ಮೊದಲ ಬಾರಿಗೆ ಆದಾಯ ತೆರಿಗೆಯಲ್ಲಿ ಐದು ಲಕ್ಷದ ತನಕ ರಿಬೇಟ್ ದೊರೆಯುವ ಮಾಡಿದ್ದೇವೆ
7:42 PM, 10 Feb

ಮಧ್ಯಮ ವರ್ಗದವರ ಪಾಲಿಗೆ ಬಾಡಿಗೆ ಆದಾಯ ಮುಖ್ಯವಾಗಿರುತ್ತದೆ. ಆ ರೀತಿ ದೊರೆಯುವ ಆದಾಯ ಮೂಲದ ಆದಾಯದ ಮೇಲೆ ತೆರಿಗೆ ಇಳಿಸಿದ್ದೇವೆ
7:40 PM, 10 Feb

ಮಕ್ಕಳ ಸಲುವಾಗಿ ಎರಡನೇ ಮನೆ ಬಾಡಿಗೆ ಆದಾಯಕ್ಕೆ ಕಟ್ಟಿರುತ್ತಾರೆ. ನಾವು ಅದರ ಮೇಲಿನ ಆದಾಯ ತೆರಿಗೆ ವಿನಾಯಿತಿ ನೀಡಿದ್ದೇವೆ
Advertisement
7:39 PM, 10 Feb

ಬಡವರು-ಮಧ್ಯಮ ವರ್ಗದವರಿಗೆ ಗೃಹ ಸಾಲದಲ್ಲಿ ವಿನಾಯಿತಿ ನೀಡಲಾಗುತ್ತಿದೆ.
7:35 PM, 10 Feb

ಪ್ರಧಾನಮಂತ್ರಿ ಆವಾಸ ಯೋಜನೆ ಅಡಿ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ
7:33 PM, 10 Feb

ಐಐಟಿ, ಐಐಐಟಿ ಮೂಲಕ ಉನ್ನತ ಶಿಕ್ಷಣದಲ್ಲಿ ಹುಬ್ಬಳ್ಳಿ ದೊಡ್ಡ ಹೆಸರು ಪಡೆಯಲಿದೆ
7:33 PM, 10 Feb

ಉನ್ನತ ಶಿಕ್ಷಣ, ಬಡವರಿಗೆ ಅನುಕೂಲ ಸೇರಿದಂತೆ ವಿವಿಧ ಅನುಕೂಲ ಒದಗಿಸಲು ಯೋಜನೆ ತರಲಾಗಿದೆ.
7:33 PM, 10 Feb

ಐದು ಸಾವಿರ ಕೋಟಿ ರುಪಾಯಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.
7:31 PM, 10 Feb

ಜಗನ್ನಾಥ್ ರಾವ್ ಜೋಶಿ, ಅನಂತ ಕುಮಾರ್ ಸೇರಿದಂತೆ ಬಿಜೆಪಿಯ ವಿವಿಧ ನಾಯಕರನ್ನು ನೆನಪಿಸಿಕೊಂಡ ಮೋದಿ
7:30 PM, 10 Feb

ಕುಮಾರಸ್ವಾಮಿ, ದ.ರಾ.ಬೇಂದ್ರೆ, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವರಿಗೆ ನಮಸ್ಕರಿಸುತ್ತೇನೆ
7:29 PM, 10 Feb

ಸಿದ್ದಗಂಗಾ ಶ್ರೀಗಳಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ
7:29 PM, 10 Feb

ಇಂದು ವಸಂತ ಪಂಚಮಿ. ವಾತಾವರಣದಲ್ಲಿ ಬದಲಾವಣೆ ಆಗುವ ಕಾಲ. ಕರ್ನಾಟಕ ರಾಜಕೀಯದ ವಾತಾವರಣದಲ್ಲೂ ಬದಲಾವಣೆ ಆಗಲಿರುವುದನ್ನು ಗಮನಿಸುತ್ತಿದ್ದೇನೆ
7:26 PM, 10 Feb

ಈ ಭೂಮಿ ಸಾಹಸ, ದಾನಕ್ಕೆ ಹೆಸರುವಾಸಿಯಾಗಿಗೆ ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಭಾಷಣ ಆರಂಭ
7:23 PM, 10 Feb

ಆಂತರಿಕ ಕಚ್ಚಾಟ ಇರುವ ಈ ರಾಜ್ಯ ಸರಕಾರವನ್ನು ಕಿತ್ತೊಗೆಯಬೇಕು. ಕೇಂದ್ರದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕರ್ನಾಟಕದಲ್ಲಿ ಅತಿ ಹೆಚ್ಚು ಬಿಜೆಪಿ ಸಂಸದರನ್ನು ಗೆಲ್ಲಿಸಬೇಕು
7:21 PM, 10 Feb

ರಾಜ್ಯದ ಪ್ರತಿ ಪ್ರಜೆಯ ತಲೆ ಮೇಲೆ ಐವತ್ತು ಸಾವಿರ ಸಾಲ ಇದೆ
7:21 PM, 10 Feb

ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಅದರಲ್ಲಿ ಕುಮಾರಸ್ವಾಮಿ ಮಾಡಿದ್ದು ಎಂಟು ಸಾವಿರ ಕೋಟಿ ಮಾತ್ರ
7:19 PM, 10 Feb

ರೈತರ ಖಾತೆಗೆ ಹಣ, ಆದಾಯ ತೆರಿಗೆ ರಿಬೇಟ್ ಹೆಚ್ಚಳ ಸೇರಿದಂತೆ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದ ಯೋಜನೆಗಳನ್ನು ಹೊಗಳಿದ ಯಡಿಯೂರಪ್ಪ
7:17 PM, 10 Feb

ಮೋದಿಗೆ ಸರಿಸಾಟಿ ಇರುವ ವ್ಯಕ್ತಿ ಭಾರತದಲ್ಲಿ ಮತ್ತೊಬ್ಬರಿಲ್ಲ
7:17 PM, 10 Feb

ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದ್ದು, ದೇಶದ ಆರ್ಥಿಕ ಸ್ಥಾನ ವಿಶ್ವದಲ್ಲೇ ಐದನೇ ಸ್ಥಾನ ತಲುಪಿದೆ
7:16 PM, 10 Feb

ಸರ್ದಾರ್ ಪಟೇಲ್ ರಲ್ಲಿ ನೋಡುತ್ತಿದ್ದ ವ್ಯಕ್ತಿತ್ವ ಜನರು ನರೇಂದ್ರ ಮೋದಿಯವರಲ್ಲಿ ನೋಡುತ್ತಿದ್ದಾರೆ
7:15 PM, 10 Feb

ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭಾಷಣ ಆರಂಭ
READ MORE

English summary
PM Narendra Modi came to Hubballi for various developmental work inauguration on Sunday. Here is an live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X