ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ; ಚಿರತೆ ಪ್ರತ್ಯಕ್ಷ, ವಾಕಿಂಗ್, ಆಫ್‌ಲೈನ್ ಕ್ಲಾಸ್ ರದ್ದು

|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್ 20; ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ 3-4 ದಿನದಿಂದ ಚಿರತೆಯು ಕಾಣಿಸುತ್ತಿದೆ. ಅರಣ್ಯ ಇಲಾಖೆ ಚಿರತೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದು, ಜನರು ಸಹ ಸಹಕಾರ ನೀಡಬೇಕು ಎಂದು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಮನವಿ ಮಾಡಿದೆ.

ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಈ ಕುರಿತು ಜನರಲ್ಲಿ ಮನವಿ ಮಾಡಿದ್ದು, "ಚಿರತೆ ಪತ್ತೆ ಮಾಡಿ ಹಿಡಿಯುವ ಕಾರ್ಯ ಪ್ರಗತಿಯಲಿದ್ದು, ನೃಪತುಂಗ ಬೆಟ್ಟ, ರಾಜನಗರ ಮತ್ತು ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದ ಜನ ಸಂಜೆ ಮತ್ತು ಬೆಳಗ್ಗೆ ಎನ್. ಆರ್. ಬೆಟ್ಟಕ್ಕೆ ವಾಯುವಿಹಾರಕ್ಕೆ ಬರದಂತೆ ಮತ್ತು ರಾತ್ರಿ ಸಮಯ ಅನಗತ್ಯವಾಗಿ ಈ ಪ್ರದೇಶದಲ್ಲಿ ಸಂಚರಿಸಬಾರದು" ಎಂದು ಹೇಳಿದ್ದಾರೆ.

ಚಿರತೆಗೆ ಕರಿ ಚಿರತೆ ಸವಾಲು: ಕಬಿನಿಯಲ್ಲಿ ನಡೆದ ರೋಚಕ ಮುಖಾಮುಖಿಯ ವಿಡಿಯೋಚಿರತೆಗೆ ಕರಿ ಚಿರತೆ ಸವಾಲು: ಕಬಿನಿಯಲ್ಲಿ ನಡೆದ ರೋಚಕ ಮುಖಾಮುಖಿಯ ವಿಡಿಯೋ

ಈ ರೀತಿ ಚಿರತೆ ಅಥವಾ ವನ್ಯಪ್ರಾಣಿಗಳು ಕಾಣಿಸಿಕೊಂಡಾಗ ನಮ್ಮ ವರ್ತನೆ ಹೆದರಿಕೆ ಅಥವಾ
ಗಾಬರಿಯಿಂದ ಕೂಡಿರಬಾರದು ಮತ್ತು ಚಿರತೆ ಇರುವ ಸುತ್ತಮುತ್ತಲಿನ ಸ್ಥಳದಲ್ಲಿ ಜನದಟ್ಟಣೆ ಸೇರಬಾರದು. ಚಿರತೆ ಇರುವ ಕುರಿತು ಅತಿಯಾದ ಪ್ರಚಾರದಿಂದ ಅಲ್ಲಿ ಜನದಟ್ಟಣೆ ಹೆಚ್ಚುತ್ತದೆ. ಆದ್ದರಿಂದ ಜನರು ಸಹ ಬಹಳಷ್ಟು ಮುಂಜಾಗೃತೆ ವಹಿಸುವ ಅಗತ್ಯವಿದೆ ಎಂದು ಅರಣ್ಯ ಇಲಾಖೆ ಹೇಳಿದೆ.

ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ

ಚಿರತೆ ಹಿಡಿಯುವ ಕಾರ್ಯಾಚರಣೆ ನಡೆದಿದ್ದು, ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ನಡೆಸುವ ಎಲ್ಲ ಭೌತಿಕ ಕ್ಲಾಸ್ ರದ್ದುಮಾಡಿ, ಸೋಮವಾರದಿಂದ ಆನ್‌ಲೈನ್ ಕ್ಲಾಸ್ ಗಳನ್ನು ಮಾತ್ರ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಶೌಚಾಲಯದಿಂದ ಚಿರತೆ ಪರಾರಿ, ಜೀವ ಉಳಿಸಿಕೊಂಡ ನಾಯಿ! ಶೌಚಾಲಯದಿಂದ ಚಿರತೆ ಪರಾರಿ, ಜೀವ ಉಳಿಸಿಕೊಂಡ ನಾಯಿ!

ಜಂಟಿಯಾಗಿ ಸಂಚಾರ ನಡೆಸಬೇಡಿ

ಜಂಟಿಯಾಗಿ ಸಂಚಾರ ನಡೆಸಬೇಡಿ

"ಚಿರತೆ ಹಿಡಿಯುವ ಕಾರ್ಯಾಚರಣೆಗೆ ಜನರ ಸಹಕಾರವೂ ಬೇಕಿದೆ. ಜನರು ಬೆಳಗ್ಗೆ ಹಾಗೂ ಸಾಯಂಕಾಲ ವಾಯು ವಿಹಾರವನ್ನು ಹಾಗೂ ಒಂಟಿಯಾಗಿ ಸಂಚರಿಸುವುದನ್ನು ಬಿಟ್ಟು ಅತಿ ಅವಶ್ಯವಿದ್ದಲ್ಲಿ ಮಾತ್ರ ಹೊರಗಡೆ, ಗುಂಪಾಗಿ ಸಂಚರಿಸಬೇಕು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆ ಹಿಡಿಯುವ ಕಾರ್ಯ ನಿರ್ವಹಿಸುತ್ತಿದ್ದಾರೆ" ಎಂದು ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್ ಪಾಲ ಕ್ಷೀರಸಾಗರ ಹೇಳಿದ್ದಾರೆ.

ಚಿರತೆ ಪತ್ತೆಗಾಗಿ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ರಾತ್ರಿ ಮತ್ತು ಹಗಲು ಎರಡು ಪಾಳಿದಲ್ಲಿ ಕಾವಲು ಕಾಯುತ್ತಿದ್ದಾರೆ. ಚಿರತೆ ಹಿಡಿಯಲು ಬೋನ್ ಸಹ ಇಟ್ಟಿದ್ದಾರೆ. ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಪಶು ವೈದ್ಯರು, ತಜ್ಞರು ಮತ್ತು ಅಗತ್ಯ ಸಲಕರಣೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸಿದ್ದಗೊಳಿಸಿದ್ದಾರೆ.

ಅರಣ್ಯ ಇಲಾಖೆಯ ನುರಿತ ತಂಡ

ಅರಣ್ಯ ಇಲಾಖೆಯ ನುರಿತ ತಂಡ

"ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಈಗಾಗಲೇ ನುರಿತ ವನ್ಯಜೀವಿ ವೈದ್ಯರು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವನ್ಯಜೀವಿ ತಜ್ಞರೊಳಗೊಂಡ ತಂಡ ಕಾರ್ಯಚರಣೆ ಆರಂಭಿಸಿದೆ. ಅಗತ್ಯವಿದ್ದಲ್ಲಿ ಅಗ್ನಿಶಾಮಕ ದಳ, ಆರೋಗ್ಯ ಇಲಾಖೆಯವರ ಸಹಕಾರವನ್ನು ಪಡೆದುಕೊಳ್ಳಲಾಗುತ್ತದೆ. ಚಿರತೆಗಳು ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಚಿರತೆಗಳು ಸಂಖ್ಯೆ ಜಾಸ್ತಿಯಾಗಿರುವುದು, ಅವುಗಳ ಆವಾಸ ಸ್ಥಾನ ಕುಂಠಿತಗೊಳ್ಳುತ್ತಿರುವುದು ಮತ್ತು ಅವುಗಳ ನೈಸರ್ಗಿಕ ಆಹಾರವಾದ ಚಿಂಕೆ, ಕೊಂಡುಕುರಿ, ಮೊಲ, ಕಾಡುಕೋಳಿ, ಇನ್ನಿತರ ಪ್ರಾಣಿಗಳ ಅವ್ಯಾಹತವಾಗಿ ಬೇಟೆ ಆಡುತ್ತಿರುವುದು. ಚಿರತೆ-ಮಾನವ ಸಂಘರ್ಷಕ್ಕೆ ಮುಖ್ಯವಾಗಿ ಅವುಗಳ ಆವಾಸ ಸ್ಥಾನದ ನಾಶ, ಇತರರಿಂದ ಅವುಗಳ ನೈಸರ್ಗಿಕ ಆಹಾರದ ಬೇಟೆ ಪ್ರಮುಖ ಕಾರಣವಾಗಿದೆ" ಎಂದು ಯಶ್ ಪಾಲ ಕ್ಷೀರಸಾಗರ ತಿಳಿಸಿದ್ದಾರೆ.

ಬೇರೆ ಮಾರ್ಗದಲ್ಲಿ ಸಂಚಾರ ನಡೆಸಿ

ಬೇರೆ ಮಾರ್ಗದಲ್ಲಿ ಸಂಚಾರ ನಡೆಸಿ

ಜನರು ಸಾಧ್ಯವಿದ್ದಲ್ಲಿ ನೃಪತುಂಗ ಬೆಟ್ಟದ ಮಾರ್ಗ ಹೊರತು ಪಡಿಸಿ, ಬೇರೆ ಮಾರ್ಗವನ್ನು ಸಂಚಾರಕ್ಕೆ ಬಳಸಬೇಕು. ಚಿರತೆ ಪತ್ತೆ ಮಾಡಿ ಸೆರೆ ಹಿಡಿಯುವವರೆಗೆ ನೃಪತುಂಗ ಬೆಟ್ಟಕ್ಕೆ ಯಾರು ಬರದಿದ್ದರೆ ಕಾರ್ಯಾಚರಣೆಗೆ ಹೆಚ್ಚು ಅನುಕೂಲವಾಗುತ್ತದೆ. ಚಿರತೆಯು ಯಾವುದೇ ರೀತಿಯ ಗದ್ದಲ, ಜನದಟ್ಟಣೆ ಇರದೆ ಆ ಪ್ರದೇಶವು ಶಾಂತವಾಗಿದ್ದರೆ ತನ್ನ ಸ್ಥಳ ಬಿಟ್ಟು ಹೊರ ಬಂದು ಸಂಚರಿಸುತ್ತದೆ. ಇದರಿಂದ ಚಿರತೆ ಸೆರೆ ಹಿಡಿಯಲು ಇನ್ನಷ್ಟು ಅನುಕೂಲವಾಗುತ್ತದೆ ಎಂದು ಅರಣ್ಯ ಇಲಾಖೆ ಹೇಳಿದೆ.

ಚಿರತೆಯು ಇಳಿಸಂಜೆ, ರಾತ್ರಿ ಮತ್ತು ಬೆಳಗಿನಜಾವ ನಸುಕಿನ ಸಮಯದಲ್ಲಿ ಇದ್ದ ಸ್ಥಳದಿಂದ ಹೊರಬಂದು ಸಂಚರಿಸುತ್ತದೆ. ಆದ್ದರಿಂದ ಸಾರ್ವಜನಿಕರು ನೃಪತುಂಗ ಬೆಟ್ಟಕ್ಕೆ ಸಾಯಂಕಾಲ, ರಾತ್ರಿ ಮತ್ತು ಬೆಳಿಗ್ಗಿನ ಜಾವ, ಮುಂಜಾನೆ ಸಮಯದಲ್ಲಿ ವಾಯುವಿಹಾರ ಮಾಡಲು ಹೋಗಬಾರದು ಮತ್ತು ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಒಬ್ಬಂಟಿಯಾಗಿ ಸಂಚರಿಸಬಾರದು ಎಂದು ಮನವಿ ಮಾಡಲಾಗಿದೆ.

Recommended Video

ಕೂಲ್ ಕ್ಯಾಪ್ಟನ್ ರಿವ್ಯೂ ತಗೊಂಡ್ರೆ ಮುಗೀತು ! | Oneindia Kannada
ಆನ್‌ಲೈನ್ ಕ್ಲಾಸ್ ನಡೆಸಲು ಸೂಚನೆ

ಆನ್‌ಲೈನ್ ಕ್ಲಾಸ್ ನಡೆಸಲು ಸೂಚನೆ

ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆದಿದ್ದು ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ನಡೆಸುವ ಎಲ್ಲ ಭೌತಿಕ ಕ್ಲಾಸ್‌ಗಳನ್ನು ರದ್ದು ಮಾಡಲಾಗಿದೆ. ಸೋಮವಾರದಿಂದ ಆನ್‌ಲೈನ್ ಕ್ಲಾಸ್‌ಗಳನ್ನು ಮಾತ್ರ ನಡೆಸಲು ಕೇಂದ್ರೀಯ ವಿದ್ಯಾಲಯದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ ನೀಡಿದ್ದಾರೆ.

ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ 1 ರಿಂದ 12 ನೇ ತರಗತಿವರೆಗೆ ಕ್ಲಾಸ್ ನಡೆಯುತ್ತವೆ. ಆದರೆ ಈ ಪ್ರದೇಶದಲ್ಲಿ ಚಿರತೆ ಪತ್ತೆ ಮತ್ತು ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ ಹಾಗೂ ವಿದ್ಯಾರ್ಥಿಗಳ, ಇತರರ ಸುರಕ್ಷತೆ ದೃಷ್ಟಿಯಿಂದ ಭೌತಿಕವಾಗಿ ನಡೆಯುತ್ತಿದ್ದ ಎಲ್ಲ ಕ್ಲಾಸ್ ರದ್ದುಗೊಳಿಸಲಾಗಿದೆ ಮತ್ತು ಎಲ್ಲ ಶಿಕ್ಷಕರು ಆನ್ ಲೈನ್ ಮೂಲಕ ಸೆಪ್ಟೆಂಬರ್ 20ರಿಂದ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಮುಗಿಯುವವರೆಗೆ ರಾಜನಗರ ಕೇಂದ್ರೀಯ ವಿದ್ಯಾಲಯದ ಕ್ಲಾಸ್‌ಗಳನ್ನು ಆನ್‌ಲೈನ್‌ ಮಾತ್ರ ನಡೆಸಲಾಗುತ್ತದೆ.

English summary
Leopard found near Nrupatunga betta and surrounding ares of Hubballi. Forest department officials have launched a search operation to catch wild animal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X