ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆಗಳ ಡಿನೋಟಿಫೈ ಹಿಂದೆ ಭೂಮಾಫಿಯಾ ಕೈವಾಡ: ಹಿರೇಮಠ್

By Basavaraj Maralihalli
|
Google Oneindia Kannada News

ಹುಬ್ಬಳ್ಳಿ, ಜುಲೈ 24: ಮೂಲ ಸ್ಥಿತಿ ಕಳೆದುಕೊಂಡಿರುವ ಕೆರೆಗಳನ್ನು ಕಂದಾಯ ಭೂಮಿ ಮಾಡುವ ಸರ್ಕಾರದ ನಿರ್ಧಾರದ ಹಿಂದೆ ಭೂಮಾಫಿಯಾ, ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಆರೋಪಿಸಿದರು.

ಭೂಕಬಳಿಕೆಗೆ ಗೃಹಸಚಿವ ಪರಮೇಶ್ವರ್ ಬೆಂಬಲ: ಹಿರೇಮಠ್ ಆರೋಪಭೂಕಬಳಿಕೆಗೆ ಗೃಹಸಚಿವ ಪರಮೇಶ್ವರ್ ಬೆಂಬಲ: ಹಿರೇಮಠ್ ಆರೋಪ

ನಗರದಲ್ಲಿ ಸೋಮವಾರ (ಜುಲೈ 24) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೆರೆಗಳ ಸರ್ವನಾಶಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರ ಖಂಡನೀಯ. ಸಂಪುಟ ಸಭೆಯ ನಿರ್ಣಯದಲ್ಲಿ ಗಂಭೀರ ಲೋಪವಿದೆ. ರಾಜ್ಯ ಸರ್ಕಾರ ಕೂಡಲೇ ತನ್ನ ನಿಲುವು ಬದಲಿಸಬೇಕು" ಎಂದು ಆಗ್ರಹಿಸಿದರು.

Land mafia behind denotification of lake says S R Hiremath

ಪ್ರಾಚೀನ ಕಾಲದಿಂದ ಉಳಿಸಿಕೊಂಡು ಬಂದಿರುವ ಕೆರೆಗಳ ನಾಶ ಕಾನೂನು ಬಾಹಿರ. ಇಂಥ ನಿರ್ಧಾರಗಳಿಂದ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ರಾಜಿನಾಮೆ ನೀಡಬೇಕು. ಇಲ್ಲವಾದ್ರೆ ಸಿಎಂ ಸಿದ್ಧರಾಮಯ್ಯನವರ ಕಾಗೋಡು ತಿಮ್ಮಪ್ಪನನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಎಂದು ಹಿರೇಮಠ್ ಆಗ್ರಹಿಸಿದರು.

ಸೃಷ್ಟಿ ಮಾತೆಯ ವಿರುದ್ಧ ನಿರ್ಣಯ ಕೈಗೊಂಡರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

English summary
Samaj Parivarthana Samudaya chief S R Hiremath has alleged that denotification of lake land mafia behind this issue. Government should drop this decision and CM should dismiss Kagodu Timmappa from cabinet, he demanded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X