ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಸಿದ್ದರಾಮಯ್ಯ ಹುಚ್ಚ, ಅಧಿಕಾರದ ಕನಸೇ ಹುಚ್ಚುತನ"; ಕೆ.ಎಸ್. ಈಶ್ವರಪ್ಪ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್ 29: "ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿರುವುದು ಹುಚ್ಚುತನದ ಪರಮಾವಧಿ. ಸಿದ್ದರಾಮಯ್ಯ ‌ಒಬ್ಬ ಹುಚ್ಚ" ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಇಂದು ಮಾತನಾಡಿದ ಅವರು, "ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಗುತ್ತೆ ಅಂದ್ರೆ ಅದು ನಗು ತರಿಸುತ್ತದೆ. ಮೈತ್ರಿ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ಅವರು ಎಷ್ಟು ಕಷ್ಟ ಅನುಭವಿಸಿದ್ದಾರೆಂದು ಅವರೇ ಹೇಳಿದ್ದಾರೆ. ಈ ಹಿಂದಿನ‌ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ದಾಟಲು ಆಗಲ್ಲ ಅಂತಿದ್ರು, ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದೊಂದು ಸ್ಥಾನ ಪಡೆದುಕೊಂಡವು. ರಾಜ್ಯದ ಜನ ಎರಡೂ ಪಕ್ಷಕ್ಕೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ" ಎಂದರು.

 ಸಿದ್ದರಾಮಯ್ಯನ ಅಧಿಕಾರ ಒಂದು ಕನಸು

ಸಿದ್ದರಾಮಯ್ಯನ ಅಧಿಕಾರ ಒಂದು ಕನಸು

ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಬಾರದೆಂದು ದೇವೇಗೌಡ್ರು, ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಯಾವುದೇ ಪಕ್ಷಕ್ಕೆ ಬಹುಮತ ಬರಬಾರದೆಂದು ದೇವೇಗೌಡ್ರು ಕನಸು ಕಾಣ್ತಾ ಇದ್ದಾರೆ. ಆದರೆ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಹೇಳಿದರು.

ಉಪಚುನಾವಣೆ ಬಗ್ಗೆ ಬಿಜೆಪಿ ಉಸ್ತುವಾರಿಗಳು ಯಾವುದೇ ವರದಿ ಕೊಟ್ಟಿಲ್ಲ. ನಾವು 15 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂಬ ಗುರಿ ಇಟ್ಟುಕೊಂಡಿದ್ದೇವೆ. ಉಪ ಚುನಾವಣೆ ನಂತರ ನಾನೇ ಸಿಎಂ ಎಂದು ಸಿದ್ದರಾಮಯ್ಯ ಕನಸು ಕಾಣ್ತಾ ಇದ್ದಾರೆ. ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ, ಅವರು ಹಗಲು‌ ಕನಸು ಕಾಣ್ತಾ ಇದ್ದಾರೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಿಕ್ಕೆ ಬರೋದಿಲ್ಲ ಎಂದರು.

ಸಿದ್ದರಾಮಯ್ಯಗೆ ಭಾರತ ರತ್ನಕ್ಕೆ ಶಿಫಾರಸು ಮಾಡುತ್ತಾರಾ?ಸಿದ್ದರಾಮಯ್ಯಗೆ ಭಾರತ ರತ್ನಕ್ಕೆ ಶಿಫಾರಸು ಮಾಡುತ್ತಾರಾ?

 ಸಿದ್ದುಗೆ ಈಶ್ವರಪ್ಪ ಮರು ಸವಾಲು

ಸಿದ್ದುಗೆ ಈಶ್ವರಪ್ಪ ಮರು ಸವಾಲು

ಯಡಿಯೂರಪ್ಪನವರು ಎಂಟು ಕ್ಷೇತ್ರದಲ್ಲಿ ಗೆಲ್ಲದೆ ಇದ್ದರೆ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಸವಾಲು ಹಾಕ್ತಾ ಇದ್ದಾರೆ. ನಾನು ಅವರಿಗೆ ಸವಾಲು ಹಾಕ್ತೇನೆ ಎಂಟು ಕ್ಷೇತ್ರದಲ್ಲಿ ಗೆಲ್ಲದೆ ಇದ್ದರೆ ನಾನು ರಾಜೀನಾಮೆ ನೀಡುತ್ತೇನೆ. ನೀವು ಎಂಟು ಕ್ಷೇತ್ರದಲ್ಲಿ ಗೆಲ್ಲದೆ ಇದ್ದರೆ, ನಿಮ್ಮ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮರುಸವಾಲು ಹಾಕಿದರು. ಸಿದ್ದರಾಮಯ್ಯಗೆ ಮತ್ತೊಮ್ಮೆ ಸಿಎಂ ಆಗಬೇಕೆಂದು ಹುಚ್ಚು ಹಿಡಿದಿದೆ ಎಂದು ವ್ಯಂಗ್ಯ ಮಾಡಿದರು.

 ಕುರುಬರನ್ನು ಬೆಳೆಯೋಕೆ ಬಿಟ್ಟರಾ ಸಿದ್ದರಾಮಯ್ಯ?

ಕುರುಬರನ್ನು ಬೆಳೆಯೋಕೆ ಬಿಟ್ಟರಾ ಸಿದ್ದರಾಮಯ್ಯ?

ಸಿದ್ದರಾಮಯ್ಯ ನಾನು ಕುರುಬ ನಾಯಕ ಎಂದು ಹೇಳಿಕೊಳ್ಳುತ್ತಾರೆ, ಯಾವ ಕುರುಬನನ್ನು ಅವರು ಬೆಳೆಯಲು ಬಿಟ್ಟಿದ್ದಾರೆ? ಅವರು ಕುರುಬರನ್ನು ಮತ್ತು ದಲಿತರನ್ನು ಬೆಳೆಯಲು ಬಿಟ್ಟಿಲ್ಲ. ಸಿದ್ದರಾಮಯ್ಯ ಸ್ವಾರ್ಥಿ, ತಾನೊಬ್ಬನೇ ಬೆಳೆಯಬೇಕು, ಬೇರೆ ಯಾರೂ ಬೆಳೆಯಬಾರದು, ತಮ್ಮ ಪಕ್ಷ ಬೆಳೆಯಬಾರದು ಅನ್ನುವವರು. ಸಿದ್ದರಾಮಯ್ಯ ಕಾಂಗ್ರೆಸ್‌ ಅನ್ನು ಛಿದ್ರಛಿದ್ರ ಮಾಡಲು ಹೊರಟಿದ್ದಾರೆ. ಕುಮಾರಸ್ವಾಮಿ ಬಿಜೆಪಿಯನ್ನು ಸೋಲಿಸುವುದೇ ನನ್ನ ಗುರಿ ಎನ್ನುತ್ತಿದ್ದಾರೆ, ಅವರಿಗೆ ತಮ್ಮ ತಂದೆ ಮತ್ತು ಮಗನನ್ನು ಗೆಲ್ಲಿಸಲು ಆಗಿಲ್ಲ ಎಂದು ಕಿಡಿಕಾರಿದರು.

ನನ್ನ ಅತಿ ಹೆಚ್ಚು ಟೀಕಿಸಿದವರಿಗೆ ಪ್ರಧಾನಿ ಬಹುಮಾನ ಕೊಡ್ತಾರಾ?: ಸಿದ್ದರಾಮಯ್ಯನನ್ನ ಅತಿ ಹೆಚ್ಚು ಟೀಕಿಸಿದವರಿಗೆ ಪ್ರಧಾನಿ ಬಹುಮಾನ ಕೊಡ್ತಾರಾ?: ಸಿದ್ದರಾಮಯ್ಯ

"ಜಾತಿ ಗಣತಿ ಮಾಡಿ ದ್ರೋಹ"

ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಹೋಗಿದ್ದು ಯಾವ ದುಡ್ಡಿನಿಂದ. ಅದೇ ಅಡಿಬಿಟ್ಟಿ ದುಡ್ಡಿನಿಂದ ಜೆಡಿಎಸ್ ತೊರೆದು, ಕಾಂಗ್ರೆಸ್‌ಗೆ ಹೋಗಿ ವಿರೋಧ ಪಕ್ಷದ ನಾಯಕನಾಗಿದ್ದು. ಇವಾಗ ಆ ದುಡ್ಡು ಎಲ್ಲಿಂದ ಬಂತು ಎಂದು ಉತ್ತರ ನೀಡಲಿ. ಪರಮೇಶ್ವರ ಅವರನ್ನು ಸೋಲಿಸಲು ಪ್ರಮುಖ ಕಾರಣ ಯಾರು ಎಂಬುದನ್ನು ಆಣೆ ಮಾಡಿ ಒಪ್ಪಿಕೊಳ್ಳಲಿ. ಸಿದ್ದರಾಮಯ್ಯ ಜಾತಿ ಗಣತಿ ಮಾಡಿ ದೊಡ್ಡ ದ್ರೋಹ ಮಾಡಿದ್ದಾರೆ. ಜಾತಿ ಗಣತಿಗಾಗಿ 188 ಕೋಟಿ ಹಣ ಖರ್ಚು ಮಾಡಿದ್ದಾರೆ ಎಂದು ಕಿಡಿಕಾರಿದರು.

English summary
"Siddaramaiah is dreaming to become chief minister again. Siddaramaiah is mad" said ks eshwarappa in hubballi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X