ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಲ್ಹಾಪುರ-ಕೆ.ಎಸ್.ಆರ್.ಬೆಂಗಳೂರು ರೈಲು ಸಂಚಾರ ರದ್ದು

|
Google Oneindia Kannada News

ಹುಬ್ಬಳ್ಳಿ, ಜೂನ್ 14 : ಕೊಲ್ಹಾಪುರ-ಕೆ.ಎಸ್.ಆರ್.ಬೆಂಗಳೂರು ರೈಲು ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಜುಲೈ 6 ಮತ್ತು 7ರ ತನಕ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತೀಯ ರೈಲ್ವೆ ಈ ಕುರಿತು ಪ್ರಕಟಣೆ ಹೊರಡಿಸಿದೆ. ಜೋಡಿ ಮಾರ್ಗದ ಕಾಮಗಾರಿ ನಡೆಯುತ್ತಿರುವುದರಿಂದ ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದ್ದು, ಪ್ರಯಾಣಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು 8 ದಿನ ರದ್ದುಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು 8 ದಿನ ರದ್ದು

ರೈಲುಗಳ ಸಂಖ್ಯೆ, ಭಾಗಶಃ ರದ್ದಾಗಿರುವ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಕೊಲ್ಹಾಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚಾರ ನಡೆಸುವ ಜನರು ಸಹಕಾರ ನೀಡಬೇಕು ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.

ಬೆಂಗಳೂರು : ಗ್ರೆನೇಡ್ ಸಿಕ್ಕ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟನೆ, ವದಂತಿಗೆ ತೆರೆಬೆಂಗಳೂರು : ಗ್ರೆನೇಡ್ ಸಿಕ್ಕ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟನೆ, ವದಂತಿಗೆ ತೆರೆ

Kolhapur express train service partial cancellation

* ಕೆ.ಎಸ್.ಆರ್.ಬೆಂಗಳೂರು-ಕೊಲ್ಹಾಪುರ ಎಕ್ಸ್‌ಪ್ರೆಸ್ (16589) ಸಂಚಾರವನ್ನು ಜುಲೈ 6ರ ತನಕ ಮಿರಜ್ ಮತ್ತು ಕೊಲ್ಹಾಪುರದ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ರೈಲು ಮಿರಜ್‌ ತನಕ ಮಾತ್ರ ಸಂಚಾರ ನಡೆಸಲಿದೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ ಕಾಮಗಾರಿ ಆರಂಭಿಸಿತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ ಕಾಮಗಾರಿ ಆರಂಭಿಸಿ

* ಕೊಲ್ಹಾಪುರ-ಕೆ.ಎಸ್.ಆರ್.ಬೆಂಗಳೂರು ಎಕ್ಸ್‌ಪ್ರೆಸ್ (16590) ಸಂಚಾರವನ್ನು ಜುಲೈ 7ರ ತನಕ ಕೊಲ್ಹಾಪುರ ಮತ್ತು ಮಿರಜ್ ನಡುವೆ ಭಾಗಶಃ ರದ್ದು ಮಾಡಲಾಗಿದೆ. ಈ ಅವಧಿಯಲ್ಲಿ ರೈಲು ಕೊಲ್ಹಾಪುರದ ಬದಲಾಗಿ ಮಿರಜ್‌ನಿಂದ ಸಂಚಾರ ಆರಂಭಿಸಲಿದೆ.

English summary
KSR Bengaluru-Kolhapur express and Kolhapur-KSR Bengaluru train service cancelled till July 7 due to track doubling work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X