ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಲಕಿಯ ಪಾದಮುಟ್ಟಿ ನಮಸ್ಕರಿಸಿದ ಕಿರಣ್ ಬೇಡಿ

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 1 : ಮಾಜಿ ಐಪಿಎಸ್ ಅಧಿಕಾರಿ ಹಾಗೂ ಪುದುಚೆರಿಯ ಲೆಫ್ಟಿನಂಟ್ ಗೌರ್ನರ್ ಕಿರಣ್ ಬೇಡಿ ಬಾಲಕಿಯ ಪಾದ ಮುಟ್ಟಿ ನಮಸ್ಕರಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ರಾತ್ರಿ ವೇಳೆ ಕಿರಣ್ ಬೇಡಿಯಿಂದ ಮಹಿಳಾ ಸುರಕ್ಷತೆಯ ರಿಯಾಲಿಟಿ ಚೆಕ್ರಾತ್ರಿ ವೇಳೆ ಕಿರಣ್ ಬೇಡಿಯಿಂದ ಮಹಿಳಾ ಸುರಕ್ಷತೆಯ ರಿಯಾಲಿಟಿ ಚೆಕ್

ಹುಬ್ಬಳ್ಳಿಯ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವಾಗತಿ ಕೋರಿ ಪುಷ್ಪಗುಚ್ಚ ಅರ್ಪಿಸಿದ ಬಾಲಕಿಯೊಬ್ಬಳು ಕಿರಣ್ ಬೇಡಿ ಅವರ ಪಾದ ಮುಟ್ಟಿ ನಮಸ್ಕರಿಸಿದ್ದಕ್ಕೆ ಹಾಗೆ ಮಾಡಬೇಡ ಮಕ್ಕಳು ದೇವರ ಸಮಾನ ಎಂದು ಹೇಳಿದ್ದಲ್ಲದೆ ತಿರುಗಿ ಆ ಬಾಲಕಿಯ ಪಾದವನ್ನು ಸ್ಪರ್ಷಿಸಿದ್ದಾರೆ.

ಲೆಫ್ಟನೆಂಟ್ ಗವರ್ನರ್ ಹುದ್ದೆ ತೊರೆಯುವೆ: ಕಿರಣ್ ಬೇಡಿಲೆಫ್ಟನೆಂಟ್ ಗವರ್ನರ್ ಹುದ್ದೆ ತೊರೆಯುವೆ: ಕಿರಣ್ ಬೇಡಿ

Kiran Bedi respect girl, touching her feet!

ಕಾರ್ಯಕ್ರಮದಲ್ಲಿ ಕಿರಣ್ ಬೇಡಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗಬೇಕು ಎನ್ನುವ ದೃಷ್ಟಿಯಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅವುಗಳನ್ನು ತಲುಪಿಸುವಲ್ಲಿ ದೊಡ್ಡ ಅಂತರ ಉಂಟಾಗಿದೆ. ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಈ ಯೋಜನೆಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇಂತಹ ಪ್ರಯತ್ನವನ್ನು ನಾನು ಪುದುಚೆರಿಯಲ್ಲಿ ಆರಂಭಿಸಿದ್ದೇನೆ. ಪುದುಚೆರಿಯ ರಾಜಭವನದಲ್ಲಿ ಮಕ್ಕಳಿಂದ ವೃದ್ಧರವೆಗೂ ನನ್ನನ್ನು ಭೇಟಿ ಮಾಡಲು ನಿತ್ಯ ಮೂರು ಗಂಟೆಗಳ ಕಾಲ ಮೀಸಲಿಟ್ಟಿದ್ದೇನೆ. ಜನರು ಹೆಚ್ಚು ಸಂಜೆ ವಾರ್ತೆಗಳನ್ನು ಕೇಳಬೇಕು. ಕಾರಣ ಅದರಲ್ಲಿ ಜನರಿಗೆ ಅನುಕೂಲವಾಗುವಂತಹ, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದರು.

English summary
Pondicherry Lieutenant Governor Kiran Bedi touched feet of a girl who welcomed her in a program held at Hubballi and won the hearts of many.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X