ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರಿದ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುವ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್ 02: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ ಗಳ ಜೀವಕ್ಕೆ ಧಕ್ಕೆಯನ್ನುಂಟು ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ದೋಷಪೂರಿತ ಸುರಕ್ಷತಾ ಕಿಟ್ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಯಶಸ್ವಿಯಾದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಯಶಸ್ವಿಯಾದ "ಪ್ಲಾಸ್ಮಾ ಥೆರಪಿ"

ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಗುಣಮಟ್ಟದ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ ಕಿಟ್), ಎನ್ 95 ಮಾಸ್ಕ್ ಧರಿಸಬೇಕಾಗುತ್ತದೆ. ಆದರೆ ಕಿಮ್ಸ್ ನ ಕೆಲ ಸಿಬ್ಬಂದಿಗೆ ನೀಡಲಾದ ಪಿಪಿಇ ಕಿಟ್ ಗಳು ಹರಿದು ಹೋಗಿದ್ದು, ಯಾವ ಧೈರ್ಯದ ಮೇಲೆ ವೈದ್ಯಕೀಯ ಸಿಬ್ಬಂದಿ ಸೇವೆಗೆ ಮುಂದಾಗಿದ್ದಾರೆ ಎಂಬುವುದು ದೊಡ್ಡ ಪ್ರಶ್ನೆಯಾಗಿದೆ.

Hubballi: Kims Hospital Staff Performing Duties Wearing A Torn PPE Kit

ಕೋವಿಡ್ ವಾರ್ಡ್ ನ ಐಸಿಯು ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಾತ್ರ ಗುಣಮಟ್ಟದ ಕಿಟ್ ಗಳನ್ನು ನೀಡಲಾಗಿದೆ. ಕೊರೊನಾ ಸೋಂಕಿತರ ಸಾಮಾನ್ಯ ವಾರ್ಡ್ ಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಶುಶ್ರೂಷಕರಿಗೆ ಎರಡು, ಮೂರನೇ ದರ್ಜೆಯ ಸುರಕ್ಷತಾ ಕಿಟ್ ಗಳನ್ನು ನೀಡಲಾಗಿದೆ.

Hubballi: Kims Hospital Staff Performing Duties Wearing A Torn PPE Kit

ಕೊವಿಡ್ ರೋಗಿಗಳ ಜೊತೆ ಬ್ಯಾಡ್ಮಿಂಟನ್ ಆಡಿದ ಹುಬ್ಬಳ್ಳಿ ವೈದ್ಯರು ಕೊವಿಡ್ ರೋಗಿಗಳ ಜೊತೆ ಬ್ಯಾಡ್ಮಿಂಟನ್ ಆಡಿದ ಹುಬ್ಬಳ್ಳಿ ವೈದ್ಯರು

ಹರಿದ ಪಿಪಿಇ ಕಿಟ್ ಗಳು, ಮಧ್ಯದಲ್ಲಿ ಕಿಂಡಿ ಬಿದ್ದಿರುವ ಮಾಸ್ಕ್ ಗಳ ಚಿತ್ರಗಳನ್ನು ಕಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳ ಸಂಘದ ಸದಸ್ಯರೇ ಬಹಿರಂಗಪಡಿಸಿದ್ದಾರೆ.

English summary
For Medical staff working at Hubballi Kims Hospital have been accused of providing a flawed safety kit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X