ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಮ್ಸ್ ವೈದ್ಯರ ಸಾಧನೆ, ದವಡೆಯಲ್ಲಿ ಸಿಲುಕಿದ್ದ ಚಾಕು ಹೊರಗೆ!

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, 19: ಬಡ ರೋಗಿಗಳ ಪಾಲಿನ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಆಸ್ಪತ್ರೆ ‌ಇದೀಗ ಮತ್ತೊಂದು ಪ್ರಶಂಸೆಗೆ ಪಾತ್ರವಾಗಿದೆ. ಇರುವ ಸೌಲಭ್ಯಗಳನ್ನೇ ಸದುಪಯೋಗ ಪಡೆದುಕೊಂಡು ಇಲ್ಲಿನ ವೈದ್ಯರ ತಂಡ ವ್ಯಕ್ತಿಯೊಬ್ಬನ ಮುಖದಲ್ಲಿ ಸಿಕ್ಕಿಹಾಕಿಕೊಂಡಿದ್ದ ಚಾಕುವನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಪುನರ್ಜನ್ಮ ನೀಡಿದೆ.

ಹೀಗೆ ವೈದ್ಯರ ಕಾಳಜಿ ಹಾಗೂ ಚಿಕಿತ್ಸೆ ನೆನೆದು ಕಣ್ಣೀರು ಹಾಕುತ್ತಿರುವ ವ್ಯಕ್ತಿಯ ಹೆಸರು ಭೀಮರಾವ್ ಚೌಹಾನ್. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕೆ. ಕೆ. ಹಳ್ಳಿಯ ನಿವಾಸಿ.‌ ಕಳೆದ ಏಪ್ರಿಲ್ 18 ರಂದು ಒಂದು ಗಂಟೆ ವೇಳೆಯಲ್ಲಿ ಮುಖಕ್ಕೆ ಹರಿತವಾದ ಚಾಕುವಿನಿಂದ ಇರಿಯಲಾಗಿತ್ತು.

ಪಿಯುಸಿ ಫಲಿತಾಂಶ; ಹುಬ್ಬಳ್ಳಿಯ ವಿದ್ಯಾರ್ಥಿನಿಗೆ 3ನೇ Rank ಪಿಯುಸಿ ಫಲಿತಾಂಶ; ಹುಬ್ಬಳ್ಳಿಯ ವಿದ್ಯಾರ್ಥಿನಿಗೆ 3ನೇ Rank

ಪರಿಣಾಮವಾಗಿ ಚಾಕು ಮುಖದ ದವಡೆಯಲ್ಲಿಯೇ ಮುರಿದು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದರು. ಆಗ ಭೀಮರಾವ್ ಕುಟುಂಬಸ್ಥರು ಮೊದಲಿಗೆ ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ ಅಲ್ಲಿನ ವೈದ್ಯರು ಚಾಕುವನ್ನು ಸಂಪೂರ್ಣವಾಗಿ ಹೊರತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ಜೂನ್ 3 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಭೀಮರಾವ್ ಅವರನ್ನು ದಾಖಲಿಸಲಾಯಿತು.

KIMS Doctors Remove 6 CM Knife From Mans Jaw

20 ದಿನಗಳ ಕಾಲ ಉಳಿದಿದ್ದ ಚಾಕು; ಇನ್ನು ಭೀಮರಾವ್ ಚೌಹಾನ್ ಕಿಮ್ಸ್ ಆಸ್ಪತ್ರೆಗೆ ದಾಖಲಾಗುವಷ್ಟರಲ್ಲಿಯೇ ಚಾಕು ಮುಖದ ಡವಡೆಯಲ್ಲಿಯೇ 20 ದಿನಗಳ ಕಾಲ ಉಳಿದಿತ್ತು. ಇದರಿಂದ ಮುಖದ ದವಡೆ ಭಾಗದಲ್ಲಿ ತೀವ್ರವಾಗಿ ಗಾಯಗೊಂಡು, ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಯಿತ್ತು. ಇದನ್ನು ಕಿಮ್ಸ್ ಆಸ್ಪತ್ರೆಯ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ವಿಜಯಪುರ ನೇತೃತ್ವದ ತಂಡ ಸವಾಲಾಗಿ ಸ್ವೀಕರಿಸಿ ರೋಗಿಯ ಮುಖದ ಸಿಟಿ ಸ್ಕ್ಯಾನ್, ಮುಖದ ರಚನೆಯ ಸಿಟಿ ಆಂಜಿಯೋಗ್ರಾಮ್ ಮಾಡಿದರು.

Breaking: ವಿಧಾನ ಪರಿಷತ್‌: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿಗೆ 8ನೇ ಬಾರಿ ಜಯ Breaking: ವಿಧಾನ ಪರಿಷತ್‌: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿಗೆ 8ನೇ ಬಾರಿ ಜಯ

ಆನಂತರ ಕಿಮ್ಸ್ ಆಸ್ಪತ್ರೆಯ ಅರಿವಳಿಕೆ, ಇಎನ್ ಟಿ ಮತ್ತು ನರಶಸ್ತ್ರಚಿಕಿತ್ಸೆ ವಿಭಾಗದ ವೈದ್ಯರು ಜೂನ್ 15 ರಂದು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿ ರೋಗಿಯ ಮುಖದಿಂದ 6 ಸೆಂ.ಮೀ ಒಡೆದ ಚಾಕುವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈಗ ರೋಗಿ ಆರೋಗ್ಯವಾಗಿದ್ದು, ವಾರ್ಡ್ ಗೆ ಸ್ಥಳಾಂತರಿಸಲಾಗಿದೆ.

KIMS Doctors Remove 6 CM Knife From Mans Jaw

ಒಟ್ಟಿನಲ್ಲಿ ವ್ಯಕ್ತಿಯ ಮುಖದ ದವಡೆಯಲ್ಲಿ ಸಿಕ್ಕಿಹಾಕಿಕೊಂಡ ಚಾಕು ಮೆದುಳು, ಬೆನ್ನುಹುರಿ ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು. ಶಸ್ತ್ರಚಿಕಿತ್ಸೆಯು ಜೀವಕ್ಕೆ ಅಪಾಯಕಾರಿ ಮತ್ತು ಸವಾಲಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಕಿಮ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಯಾವುದೇ ಖಾಸಗಿ ಆಸ್ಪತ್ರೆಗೆ ಸರ್ಕಾರಿ ಆಸ್ಪತ್ರೆ ಕಡಿಮೆ ಇಲ್ಲ ಎಂಬುದನ್ನು ಮತ್ತೊಮ್ಮೆ ರುಜುವಾತು ಮಾಡಿದ್ದಾರೆ. ಇನ್ನು ವೈದ್ಯರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತವಾಗುತ್ತಿದೆ.

English summary
Doctors at the Hubballi KIMS successfully removed a 6-cm-long knife from a man's jaw. Bhimrao Chauhan resident of KK Halli in Haliyal Taluk in Uttara Kannada district admitted to KIMS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X