ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಷ್ಯಾ ಖಂಡದಲ್ಲೇ ಮಾದರಿಯಾದ ಹುಬ್ಬಳ್ಳಿ ಕೋರ್ಟ್ ವಿಶೇಷತೆಗಳು

By Gururaj
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್ 12 : ಏಷ್ಯಾ ಖಂಡದಲ್ಲಿಯೇ ಮಾದರಿ ತಾಲೂಕು ನ್ಯಾಯಾಲಯಗಳ ಸಂಕೀರ್ಣ ಹುಬ್ಬಳ್ಳಿಯಲ್ಲಿ ಭಾನುವಾರ ಉದ್ಘಾಟನೆಗೊಂಡಿದೆ. 122 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಂಕೀರ್ಣದಲ್ಲಿ 20 ನ್ಯಾಯಾಲಯಗಳಿವೆ, ಅತ್ಯಾಧುನಿಕ ವ್ಯವಸ್ಥೆಗಳಿವೆ.

ಭಾನುವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನ್ಯಾಯಾಲಯಗಳ ಸಂಕೀರ್ಣವನ್ನು ಲೋಕಾರ್ಪಣೆ ಮಾಡಿದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ವಿವಿಧ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಸಂಪೂರ್ಣ ಹವಾನಿಯಂತ್ರಿತ ಕೋರ್ಟ್ ಉದ್ಘಾಟನೆ ಸಂಪೂರ್ಣ ಹವಾನಿಯಂತ್ರಿತ ಕೋರ್ಟ್ ಉದ್ಘಾಟನೆ

ಹುಬ್ಬಳ್ಳಿ ಸಮೀಪದ ತಿಮ್ಮಸಾಗರದಲ್ಲಿ ಈ ನ್ಯಾಯಾಲಯಗಳ ಸಂಕೀರ್ಣವಿದೆ. ಎರಡು ವರ್ಷಗಳ ಹಿಂದೆ ಈ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಆದರೆ, ತಡವಾಗಿ ಉದ್ಘಾಟನೆಯಾಗಿದೆ. ಏಷ್ಯಾದಲ್ಲಿಯೇ ಇದು ಅತೀ ದೊಡ್ಡ, ಸಂಪೂರ್ಣ ಹವಾನಿಯಂತ್ರಿತ ತಾಲೂಕು ನ್ಯಾಯಾಲಯವಾಗಿದೆ.

ಪರಿಸರ ಸ್ನೇಹಿ ಕಟ್ಟಡ ಇದಾಗಿದ್ದು ಮಳೆ ನೀರು ಇಂಗಿಸುವ, ತ್ಯಾಜ್ಯ ನೀರು ಸಂಸ್ಕರಣೆ ಮಾಡುವ ಘಟಕವನ್ನು ಕಟ್ಟಡ ಒಳಗೊಂಡಿದೆ. ಹೈದರಾಬಾದ್ ಮೂಲದ ಕೆಎಂವಿ ಪ್ರೊಜೆಕ್ಟ್ ಸಂಸ್ಥೆ ಈ ಕಟ್ಟಡವನ್ನು ನಿರ್ಮಾಣ ಮಾಡಿದೆ. ಹೊಸ ನ್ಯಾಯಾಲಯಗಳ ಸಂಕೀರ್ಣದಲ್ಲಿ 20 ನ್ಯಾಯಾಲಯಗಳಿವೆ. ಸದ್ಯ 17 ನ್ಯಾಯಾಲಯಗಳು ಸಂಕೀರ್ಣದಲ್ಲಿ ಕಾರ್ಯ ನಿರ್ವಹಿಸಲಿವೆ...

ಹುಬ್ಬಳ್ಳಿ ನ್ಯಾಯಾಲಯ ಉದ್ಘಾಟನೆ

ಹುಬ್ಬಳ್ಳಿ ನ್ಯಾಯಾಲಯ ಉದ್ಘಾಟನೆ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಹುಬ್ಬಳ್ಳಿ ನ್ಯಾಯಾಲಯಗಳ ಸಂಕೀರ್ಣವನ್ನು ಭಾನುವಾರ ಲೋಕಾರ್ಪಣೆ ಮಾಡಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

5.15 ಎಕರೆ ಜಾಗದಲ್ಲಿ ನಿರ್ಮಾಣ

5.15 ಎಕರೆ ಜಾಗದಲ್ಲಿ ನಿರ್ಮಾಣ

ಹುಬ್ಬಳ್ಳಿಯ ಹೊಸ ನ್ಯಾಯಾಲಯಗಳ ಸಂಕೀರ್ಣವನ್ನು 5.15 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. 24,525 ಚದರ ಮೀಟರ್ ಜಾಗದಲ್ಲಿ ಬಿ+ಜಿ+5 ಮಾದರಿಯಲ್ಲಿ ಈ ನ್ಯಾಯಾಲಯಗಳ ಸಂಕೀರ್ಣವನ್ನು ನಿರ್ಮಾಣ ಮಾಡಲಾಗಿದೆ.

ಸಂಪೂರ್ಣ ಹವಾನಿಯಂತ್ರಿತ ತಾಲೂಕು ನ್ಯಾಯಾಲಯವಿದಾಗಿದೆ. ಕೆಎಂವಿ ಪ್ರೊಜೆಕ್ಟ್ ಸಂಸ್ಥೆ ಈ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಇಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ತಾಲೂಕು ನ್ಯಾಯಾಲಯಗಳ ಕಟ್ಟಡ ಏಷ್ಯಾ ಖಂಡದಲ್ಲಿಯೇ ಪ್ರಥಮವಾಗಿದೆ.

20 ನ್ಯಾಯಾಲಯಗಳಿವೆ

20 ನ್ಯಾಯಾಲಯಗಳಿವೆ

ಹೊಸ ನ್ಯಾಯಾಲಯಗಳ ಸಂಕೀರ್ಣದಲ್ಲಿ 20 ನ್ಯಾಯಾಲಯಗಳಿವೆ. ಸದ್ಯ 17 ನ್ಯಾಯಾಲಯಗಳ ಸಂಕೀರ್ಣ ಕಾರ್ಯ ನಿರ್ವಹಿಸಲಿವೆ. ಮೊದಲ ಮಹಡಿಯಲ್ಲಿ 3 ನ್ಯಾಯಾಲವಿದೆ. ಉಳಿದ ನಾಲ್ಕು ಮಹಡಿಯಲ್ಲಿ ತಲಾ 4 ನ್ಯಾಯಾಲಯಗಳಿವೆ.

1 ಕೌಟುಂಬಿಕ ನ್ಯಾಯಾಲಯ, 2 ಜಿಲ್ಲಾ ನ್ಯಾಯಾಲಯ, 2 ಕಾರ್ಮಿಕ ನ್ಯಾಯಾಲಯ, 4 ಸಿವಿಲ್ ಜ್ಯೂನಿಯರ್ ಡಿವಿಜನ್, 2 ಜೆಎಂಎಫ್‌ಸಿ, 3 ಸೀನಿಯರ್ ಡಿವಿಜನ್ ಕೋರ್ಟ್‌ಗಳಿವೆ. ಒಂದು ಕಾನ್ಪರೆನ್ಸ್ ಹಾಲ್, 2 ಕೋರ್ಟ್‌ಗಳಲ್ಲಿ ಬಾರ್ ಅಸೋಸಿಯೇಶನ್, ಗ್ರಂಥಾಲಯ, ಮಹಿಳಾ ವಕೀಲರ ಕೊಠಡಿಗಳಿವೆ.

ನೀರಿನ ಮರುಬಳಕೆಗೆ ವ್ಯವಸ್ಥೆ

ನೀರಿನ ಮರುಬಳಕೆಗೆ ವ್ಯವಸ್ಥೆ

ಕಟ್ಟಡದ ನೆಲಮಹಡಿಯನ್ನು ಸಂಪೂರ್ಣವಾಗಿ ಪಾರ್ಕಿಂಗ್‌ಗೆ ಮೀಸಲಾಗಿ ಇಡಲಾಗಿದೆ. ಹೀಟಿಂಗ್ ವೆಂಟಿಲೇಶನ್ ಏರ್ ಕಂಡೀಷನಿಂಗ್ ಸಿಸ್ಟಮ್, ಸಿಂಕ್ರೊನೈಸಿಂಗ್ ವ್ಯವಸ್ಥೆಯುಳ್ಳ 1000 ಕೆವಿಎ, 750 ಕೆವಿಎ, 500 ಕೆವಿಯ ಡೀಸೆಲ್ ಜನರೇಟರ್ ಸೆಟ್ಸ್‌ ವ್ಯಸ್ಥೆ ಮಾಡಲಾಗಿದೆ.

ನೀರು ಮರುಬಳಕೆ ಮಾಡಲು 0.1 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣ ಘಟಕ, ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಟ್ಟಡ ಭೂಕಂಪ ನಿರೋಧಕ ಶಕ್ತಿಯನ್ನು ಹೊಂದಿದೆ.

ವಿಡಿಯೋ ಕಾನ್ಪರೆನ್ಸ್ ವ್ಯವಸ್ಥೆ

ವಿಡಿಯೋ ಕಾನ್ಪರೆನ್ಸ್ ವ್ಯವಸ್ಥೆ

ನೂತನ ನ್ಯಾಯಾಲಯದಲ್ಲಿ ಕೋರ್ಟ್ ಹಾಲ್ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿನ ಹಾಲ್‌ಗಿಂತ ದೊಡ್ಡದಿದೆ. ಭದ್ರತಾ ದೃಷ್ಠಿಯಿಂದ ಸಂಪೂರ್ಣ ಸಂಕೀರ್ಣಕ್ಕೆ ಸಿಸಿಟಿವಿ ಆಳವಡಿಕೆ ಮಾಡಲಾಗಿದೆ. ಸಂಕೀರ್ಣದೊಳಗೆ ವೈ-ಫೈ ವ್ಯವಸ್ಥೆ ಕಲ್ಪಿಸಲಾಗಿದೆ.

English summary
Justice Dipak Misra Chief Justice of India inaugurated the new court complex in Hubballi, Karnataka on August 12, 2018. The court complex which is built on five acres of land. It is the largest taluk-level court building in the entire country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X