ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಷ್ಟು ದಿನ ಅಪ್ಪ ಮಕ್ಕಳ ಕಾಟವಿತ್ತು ಈಗ ಮೊಮ್ಮಕ್ಕಳ ಕಾಟ ಎಂದ ಯಡಿಯೂರಪ್ಪ

|
Google Oneindia Kannada News

Recommended Video

ಎಚ್ ಡಿ ದೇವೇಗೌಡ್ರ ಕುಟುಂಬವನ್ನ ಟೀಕಿಸಿದ ಬಿ ಎಸ್ ಯಡಿಯೂರಪ್ಪ

ಹುಬ್ಬಳ್ಳಿ, ಏ.12: ಇಷ್ಟು ದಿನ ಅಪ್ಪ ಮಕ್ಕಳ ಕಾಟವಿತ್ತುಈಗ ಮೊಮ್ಮಕ್ಕಳ ಕಾಟ ಎಂದು ದೇವೇಗೌಡರ ಕುಟುಂಬದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷ ಎಚ್‌ಡಿ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರ ಕಾಟವನ್ನು ರಾಜ್ಯ ಸಹಿಸಿಕೊಂಡಾಗಿದೆ.

ಈಗ ಪ್ರಜ್ವಲ್, ನಿಖಿಲ್ ಕುಮಾರಸ್ವಾಮಿ ಕೂಡ ರಾಜಕೀಯ ಪ್ರವೇಶಿಸಿದ್ದು ಅವರ ಕಾಟ ಆರಂಭವಾಗಿದೆ ಎಂದರು.

ತಂದೆ, ಮಕ್ಕಳನ್ನು ಗೆಲ್ಲಿಸುವುದೇ ಕುಮಾರಸ್ವಾಮಿ ಚಿಂತೆಯಾಗಿದೆ : ಬಿಎಸ್‌ವೈತಂದೆ, ಮಕ್ಕಳನ್ನು ಗೆಲ್ಲಿಸುವುದೇ ಕುಮಾರಸ್ವಾಮಿ ಚಿಂತೆಯಾಗಿದೆ : ಬಿಎಸ್‌ವೈ

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವು ಸಾಧಿಸುತ್ತಾರೆ ಎಂದು ಕುಮಾರಸ್ವಾಮಿ ಹತಾಶರಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ.

ರಾಜ್ಯದಲ್ಲಿ ಮೈತ್ರು ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ನಾವು ವಾಸ್ತವ ಸ್ಥಿತಿಯ ಮೇಲೆ ಲೋಕಸಭೆಯಲ್ಲಿ 22 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದೇವೆ ಎಂದರು.

Karnataka should bare Deve gowdas grandsons problems now

ತಾಕತ್ತಿದ್ದರೆ ಮೇ 23ರ ಒಳಗೆ ಕೇಸ್ ಓಪನ್ ಮಾಡಲಿ: ಎಚ್‌ಡಿಕೆಗೆ ಯಡಿಯೂರಪ್ಪ ಸವಾಲುತಾಕತ್ತಿದ್ದರೆ ಮೇ 23ರ ಒಳಗೆ ಕೇಸ್ ಓಪನ್ ಮಾಡಲಿ: ಎಚ್‌ಡಿಕೆಗೆ ಯಡಿಯೂರಪ್ಪ ಸವಾಲು

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಕೇವಲ 6 ದಿನಗಳಷ್ಟೇ ಬಾಕಿ ಇದೆ. ಎಲ್ಲಾ ಪಕ್ಷಗಳು ಹಗಲು ರಾತ್ರಿ ಎನ್ನದೆ ಪ್ರಚಾರ ಆರಂಭಿಸಿದೆ.

ಅದರಲ್ಲೂ ಮಂಡ್ಯ, ಹಾಸನ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಾಡಾಗಿದೆ. ಎಲ್ಲ ಗಮನವೂ ಸದ್ಯಕ್ಕೆ ಆ ಎರಡು ಕ್ಷೇತ್ರಗಳ ಮೇಲೆಯೇ ಇದೆ.

English summary
Lok sabha elections 2019, BJP state president BS Yeddyurappa alleged that Karnataka already suffered a lot from the Deve gowda family, now should bare the problems HD Deve gowdas grandsons also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X