ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಹೋಟೆಲ್ ಸಂಘದ 17ನೇ ಸಮ್ಮೇಳನ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್, 19 : ಕರ್ನಾಟಕ ಪ್ರದೇಶ ಹೊಟೆಲ್ ಮತ್ತ ಉಪಹಾರ ಮಂದಿರಗಳ ಸಂಘವು ನಗರದ ಡೆನಿಸನ್ಸ್ ಹೊಟೆಲ್ ನಲ್ಲಿ ಶುಕ್ರವಾರ 17 ನೇ ರಾಜ್ಯ ಸಮ್ಮೇಳನವನ್ನು ಮೇಯರ್ ಮಂಜುಳಾ ಅಕ್ಕೂರ ಉದ್ಘಾಟಿಸಿದರು. ಈ ಸಮ್ಮೇಳನವು ಶುಕ್ರವಾರ ಆರಂಭವಾಗಿದ್ದು. ನವೆಂಬರ್ 20 (ಭಾನುವಾರ) ಅಂತ್ಯಗೊಳ್ಳಲಿದೆ.

ಅವರು ಹು-ಧಾ ಹೊಟೆಲ್ ಸಂಘಗಳ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ 108 ಗಣಯಾಗ ಮತ್ತು ಅನ್ನಪೂರ್ಣೇಶ್ವರಿ ಪೂಜೆಯೊಂದಿಗೆ ಸಮ್ಮೇಳನ ಆರಂಭವಾಗಿದ್ದು ವಿಶೇಷ ಎಂದರು. ಸಮ್ಮೇಳನದಲ್ಲಿ ಎಲ್ಲ ಜಿಲ್ಲೆಗಳಿಂದ ಒಟ್ಟು 4000 ಸಾವಿರ ಜನರು ಪಾಲ್ಗೊಂಡಿದ್ದರು.

17th State conference of the Karnataka Pradesh Hotel and Restaurants Association in Hubballi

1972 ರಲ್ಲಿ ಹುಬ್ಬಳ್ಳಿಯಲ್ಲಿ 44 ನೇ ಸಮ್ಮೇಳನ ನಡೆದಿತ್ತು, ಈಗ ಮತ್ತೊಮ್ಮೆ ಹುಬ್ಬಳ್ಳಿಯಲ್ಲಿ 17ನೇ ಸಮ್ಮೇನ ಆಯೋಜಿಸಲಾಗಿತ್ತು. ಸಮ್ಮೇಳನದಲ್ಲಿ 50 ವರ್ಷಗಳ ಮೇಲ್ಪಟ್ಟು ನಡೆಸುತ್ತಿರುವ ಹೊಟೆಲ್ ಮಾಲೀಕರಿಗೆ, 25 ವರ್ಷ ಒಂದೇ ಹೊಟೆಲ್ ನಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಹಾಗೂ ಹೊಟೆಲ್ ಉದ್ಯಮಕ್ಕಾಗಿ ಹೊಸ ಅವಿಷ್ಕಾರ ಮಾಡಿದ ವ್ಯಕ್ತಿಗಳಿಗೆ ಸೇರಿದಂತೆ ಒಟ್ಟು 44 ಸಾಧಕರನ್ನು ಸನ್ಮಾನಿಸಲಾಯಿತು.

ಸಮ್ಮೇಳನದ ಯಶಸ್ಸಿಗೆ 8 ತಿಂಗಳಿಂದ 22 ಸಮಿತಿಗಳ ಸದಸ್ಯರು ಕಾರ್ಯನಿರತರಾಗಿದ್ದಾರೆ. ಈಗಾಗಲೇ ರಾಜ್ಯದ 34 ಕಡೆಗಳಲ್ಲಿ ಸಂಘದ ಚಟುವಟಿಕೆಗಳು ನಡೆಯುತ್ತಿದ್ದು. ಇನ್ಮೇಲೆ ತಾಲೂಕು ಮಟ್ಟದಲ್ಲಿ ಹೊಟೇಲ್ ಗಳ ಸಂಘವನ್ನು ಸ್ಥಾಪಿಸುವ ಗುರಿಯನ್ನು ಸಂಘ ಇಟ್ಟುಕಕೊಂಡಿದೆ.

ಸಮ್ಮೇಳನದಲ್ಲಿ ಕೃತಕ ಪದಾರ್ಥ ಬಳಕೆಯಿಂದ ಆಗುವ ದುಷ್ಪರಿಣಾಮ, ಕೃತಕ ಪದಾರ್ಥ ಇಲ್ಲದೇ ಆಹಾರ ತಯಾರಿಸುವುದು, ವಿದೇಶಿ ಆಹಾರ ಪದ್ಧತಿಯ ಅನುಕರಣೆ, ಆಹಾರದ ಗುಣಮಟ್ಟ ಮತ್ತು ಆಧುನಿಕ ಉಪಕರಣ,

ಆಹಾರದಲ್ಲಿ ಬಳಸುವ ಕಚ್ಚಾ ವಸ್ತು, ಹೊಸ ಅವಿಷ್ಕಾರ, ಶುಚಿತ್ವ ಮತ್ತು ಆರೋಗ್ಯಕರ ವಾತಾವರಣ ಹಾಗೂ ಹೊಟೆಲ್ ಸಿಬ್ಬಂದಿಗಳಿಗೆ ಕೆಟರಿಂಗ್ ಕಾಲೇಜ್ ಸ್ಥಾಪಿಸುವ ಬಗ್ಗೆ ಚರ್ಚಗಳು ನಡೆದವು. ಸಮ್ಮೇಳನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಚಾರ ಸಂಕಿರಣಗಳು ನಡೆದವು.

English summary
The 17th State conference of the Karnataka Pradesh Hotel and Restaurants Association (KPHRA) and the diamond jubilee celebrations of the Hubballi Hotel Association will be held at Hotel Dennison here from November 17 to November 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X