ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಧಾರವಾಡ; ಇನ್ನು ಮುಂದೆ ನಾಮಫಲಕದಲ್ಲಿ ಕನ್ನಡ ಕಡ್ಡಾಯ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್ 1: ಕನ್ನಡ ರಾಜ್ಯೋತ್ಸವವಾದ ಇಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಕನ್ನಡ ಭಾಷೆಯ ಪರವಾಗಿ ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದೆ.

ಕರ್ನಾಟಕ ಹೆಸರು ಬಂದಿದ್ದರ ಹಿಂದಿದೆ ರೋಚಕ ಇತಿಹಾಸಕರ್ನಾಟಕ ಹೆಸರು ಬಂದಿದ್ದರ ಹಿಂದಿದೆ ರೋಚಕ ಇತಿಹಾಸ

ಹೌದು. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಹೋಟೆಲ್, ಅಂಗಡಿ, ಲಾಡ್ಜ್, ಕಲ್ಯಾಣ ಮಂಟಪ, ಬಾರ್ ವಾಣಿಜ್ಯ ಕಟ್ಟಡಗಳ ನಾಮಫಲಕವನ್ನು ಕನ್ನಡದಲ್ಲೇ ಹಾಕಬೇಕು ಎನ್ನುವ ಆದೇಶವನ್ನ ಹು-ಧಾ ಮಹಾನಗರ ಪಾಲಿಕೆಯ ಆಯುಕ್ತ ಸುರೇಶ ಹಿಟ್ನಾಳ ಹೊರಡಿಸಿದ್ದಾರೆ.

Kannada Compulsory In Nameplates In Hubballi Dharwad

ಕೆಎಂಸಿ ಕಾಯ್ದೆ 1976ರ ಅನ್ವಯ ಉದ್ದಿಮೆದಾರರು ವ್ಯಾಪಾರಿಗಳು ಇನ್ನು ಮುಂದೆ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಪ್ರಧಾನವಾಗಿ ಬಳಸಿ ಪ್ರದರ್ಶಿಸುವುದು ಕಡ್ಡಾಯ ಎನ್ನುವ ಆದೇಶವನ್ನು ಹೊರಡಿಸಲಾಗಿದೆ. ಪಾಲಿಕೆಯ ಈ‌ ಆದೇಶ ಜಾರಿಯಾದಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ಇನ್ನು ಮುಂದೆ ಕನ್ನಡದಲ್ಲಿ ನಾಮಫಲಕಗಳು ರಾರಾಜಿಸಲಿವೆ. ಪಾಲಿಕೆಯ ಈ ಆದೇಶವನ್ನು ಕನ್ನಡ ಪರ ಹೋರಾಟಗಾರರು ಸ್ವಾಗತಿಸಿದ್ದು ಪಾಲಿಕೆಯ ಆದೇಶ ಜಾರಿಗೆ ಕಟ್ಟುನಿಟ್ಟಿನ ಕ್ರಮ‌ಕೈಗೊಳ್ಳಬೇಕೆಂದು ಮನವಿ‌ ಮಾಡಿದ್ದಾರೆ.

English summary
Hubballi-dharwad mahanagara palike commissioner Suresh Hitnal has issued an order stating that the name of the hotel, shop, lodge, marriage hall and bar commercial buildings in Hubballi-Dharwad metropolitan area should be in Kannada language,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X