ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದಿನ ಚುನಾವಣೆಗೆ ಸಿಎಂ ಬೊಮ್ಮಾಯಿ ನೇತೃತ್ವ: ಜಗದೀಶ್ ಶೆಟ್ಟರ್ ಹೇಳಿದ್ದೇನು?

|
Google Oneindia Kannada News

ಧಾರವಾಡ, ಸೆಪ್ಟೆಂಬರ್ 3: "ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ದಾವಣಗೆರೆಯಲ್ಲಿ ಘೋಷಿಸಿದರು.

"ಮುಂದಿನ ವಿಧಾನಸಭಾ ಚುನಾವಣೆಯ ನೇತೃತ್ವವನ್ನು ಸಿಎಂ ಬೊಮ್ಮಾಯಿಯವರಿಗೆ ನೀಡಿದ್ದು ಒಳ್ಳೆಯ ಸಂಗತಿ," ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕುಟುಂಬ ಸಮೇತವಾಗಿ ಮತದಾನ ಮಾಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ನಡೆಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ್ದಾರೆ. ಇದಕ್ಕೆ ತಮ್ಮ ಸಹಮತ ಇದೆ," ಎಂದು ಹೇಳಿದರು.

Jagadish Shettar Reaction To Basavaraj Bommai To Lead BJP In 2023 Karnataka Elections

"ಪಕ್ಷದ ಹೈಕಮಾಂಡ್ ನಿರ್ಧಾರದಂತೆ ನಾವೂ ಮುಂದುವರೆಯುತ್ತೇವೆ. ಆದರೆ ಮುಂದಿನ ಚುನಾವಣೆ ಇನ್ನೂ ದೂರ ಇದೆ. ಜೊತೆಗೆ ಸರ್ಕಾರದಲ್ಲಿ ಹಿರಿಯರನ್ನು ಕಡೆಗಣಿಸಿದ ಬಗ್ಗೆ ಈಗಾಗಲೇ ನಾವು ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿದ್ದೇವೆ," ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.

"ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಾನು ಪ್ರಚಾರ ಮಾಡಿರುವೆ. ಜನರಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಇದೆ. ಪಾಲಿಕೆ ಚುನಾವಣೆಯ 82 ಸ್ಥಾನಗಳಲ್ಲಿ 60ಕ್ಕೂ ಸ್ಥಾನಗಳನ್ನು ಗೆಲ್ಲುತ್ತೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಅಲ್ಲದೆ ಪಾಲಿಕೆ ಚುನಾವಣೆಯ ಟಿಕೆಟ್ ಆಕ್ಷಾಂಕಿಗಳ ಮಧ್ಯೆ ಸಾಕಷ್ಟು ಪೈಪೋಟಿ ಇತ್ತು. 700ಕ್ಕೂ ಹೆಚ್ಚು ಜನರು ಆಕ್ಷಾಂಕಿಗಳು ಇದ್ದರು. ಕೆಲವು ಕಡೆ ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಬಂಡಾಯಗಾರರಿಗೆ ಬೆಂಬಲ ನೀಡಿಲ್ಲ. ಬಂಡಾಯಗಾರರು ಯಾರೂ ಗೆಲುವು ಸಾಧಿಸುವುದಿಲ್ಲ," ಎಂದು ಭರವಸೆ ವ್ಯಕ್ತಪಡಿಸಿದರು.

Jagadish Shettar Reaction To Basavaraj Bommai To Lead BJP In 2023 Karnataka Elections

ಬಿಜೆಪಿ ಪಕ್ಷದವರೆ ಬಿಜೆಪಿಗೆ ಮತ ಹಾಕಬೇಡಿ ಎಂದು ಕೆಲವರು ಹೇಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, "ಪಾಲಿಕೆ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿತ್ತು.700ಕ್ಕೂ ಹೆಚ್ಚು ಪಕ್ಷದಿಂದ ಅರ್ಜಿ ಸಲ್ಲಿಸಿದ್ದರು. ಪ್ರತಿಯೊಂದು ವಾರ್ಡ್‌ನಲ್ಲಿ 10- 15 ಆಕಾಂಕ್ಷಿಗಳಿದ್ದರು. ನಿರಾಸೆಯಾದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂಥಹ ವಾರ್ಡ್‌ಗಳಲ್ಲಿ ಈ ರೀತಿಯಾಗುವುದು ಸಹಜ ಆದರೆ ಇದರಿಂದ ಯಾವುದೇ ರೀತಿ ಪರಿಣಾಮ ಬೀಳುವುದಿಲ್ಲ," ಎಂದರು.

ಬಂಡಾಯ ಅಭ್ಯರ್ಥಿಗಳು ಜಯ ಗಳಿಸಿದರೆ ನಿಮ್ಮ ಪಕ್ಷದಲ್ಲಿ ಸೇರಿಸಿಕೊಳ್ಳುತ್ತಿರಾ? ಎಂಬ ಪ್ರಶ್ನೆಗೆ, "ಅವರು ಯಾರೂ ಗೆಲ್ಲುವುದಿಲ್ಲ. ಅಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು. ಬೆಲೆ ಏರಿಕೆ ಬೇರೆ ಪಕ್ಷವಿದ್ದಾಗಲೂ ಇತ್ತು. ಆದ್ದರಿಂದ ಯಾವುದೇ ರೀತಿ ಪಾಲಿಕೆ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ,' ಎಂದರು.

ಮತದಾನಕ್ಕೆ ಜನರ ನೀರಸ ಪ್ರತಿಕ್ರಿಯೆ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ 82 ವಾರ್ಡ್‌ಗಳಲ್ಲಿ ಅತ್ಯಂತ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. 842 ಕೇಂದ್ರಗಳಲ್ಲಿ ಮತದಾನ ಕಾರ್ಯಕ್ಕೆ ಮತದಾರರು ನಿರಸ ಪ್ರತಿಕ್ರಿಯೆ ತೋರಿರುವುದು ಕಂಡುಬಂದಿದೆ.

ಹುಬ್ಬಳ್ಳಿ- ಧಾರವಾಡ ಮಹಾನಗರ ವ್ಯಾಪ್ತಿಯ 842 ಕೇಂದ್ರಗಳಲ್ಲಿ ಬೆಳಿಗ್ಗೆ 9 ಗಂಟೆ ವೇಳೇಗೆ ಶೇ.8ರಷ್ಟು ಮತದಾನ ಆಗಿದೆ. ಮತ ಕೇಂದ್ರ ಸಂಖ್ಯೆ 3ರಲ್ಲಿ 84 ವರ್ಷದ ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಇನಾಂದಾರ ಮತದಾನ ಮಾಡಿದರು.

Recommended Video

ಕಾಂಗ್ರೆಸ್ ಪಾರ್ಟಿ ಸೇರೋಕೆ ಅಪ್ಪ ಮಗನ ಲಾಬಿ ಜೋರಾಗಿದೆ | Oneindia Kannada

English summary
Former CM Jagadish Shettar reaction to Basavaraj Bommai to Lead BJP In Karnataka Assembly Election 2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X