ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕೆಜೆಪಿಯಿಂದ ಬಿಎಸ್ ವೈ ಉಚ್ಚಾಟನೆಗೆ ಶೆಟ್ಟರ್ 10 ಕೋಟಿ ಡೀಲ್'

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 26: "ಯಡಿಯೂರಪ್ಪ ಅವರನ್ನು ಕರ್ನಾಟಕ ಜನತಾ ಪಕ್ಷದಿಂದ (ಕೆಜೆಪಿ) ಉಚ್ಚಾಟನೆ ಮಾಡುವುದಕ್ಕೆ ನನಗೆ ಹತ್ತು ಕೋಟಿ ರುಪಾಯಿ ಆಮಿಷ ಒಡ್ಡಿದ್ದರು ಆಗ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್. ಈ ವಿಚಾರದಲ್ಲಿ ನನ್ನ ಬಳಿ ಮಧ್ಯಸ್ಥಿಕೆ ಮಾಡುವುದಕ್ಕೆ ಇಂದ್ರಜಿತ್ ಲಂಕೇಶ್ ಹಾಗೂ ಚಂದ್ರಚೂಡ ಬಂದಿದ್ದರು" ಎಂದು ಕೆಜೆಪಿಯ ರಾಷ್ಟ್ರಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ ಇಲ್ಲಿ ಸೋಮವಾರ ಹೇಳಿದ್ದಾರೆ.

ಯಡಿಯೂರಪ್ಪ ವಿರುದ್ಧ ಶಿಕಾರಿಪುರದಲ್ಲಿ ಸ್ಪರ್ಧೆ: ಕೆಜೆಪಿ ಪದ್ಮನಾಭಯಡಿಯೂರಪ್ಪ ವಿರುದ್ಧ ಶಿಕಾರಿಪುರದಲ್ಲಿ ಸ್ಪರ್ಧೆ: ಕೆಜೆಪಿ ಪದ್ಮನಾಭ

ಇನ್ನೂ ಮುಂದುವರಿದು, ಈ ಬಗ್ಗೆ ಯಡಿಯೂರಪ್ಪ ಅವರಿಗೆ ತಿಳಿಸಿದ್ದೆ ಎಂದು ಕೂಡ ಹೇಳಿರುವ ಅವರು, ಆಗ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ಅವರು ತಮ್ಮ ಮನೆಗೆ ಕರೆಸಿಕೊಂಡು ನನಗೆ ಹಣದ ಆಮಿಷ ತೋರಿಸಿದ್ದರು. ಇದಕ್ಕೆ ಸಾಕ್ಷಿ ಅನ್ನೋ ಹಾಗೆ ನನ್ನ ಹತ್ತಿರ ವಿಡಿಯೋ ಇದೆ. ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಕೂಡ ಹೇಳಿದ್ದಾರೆ.

Jagadish Shettar offered 10 crore to expel Yeddyurappa from KJP

ಇನ್ನೇನು ವಿಧಾನಸಭೆ ಚುನಾವಣೆ ಹತ್ತಿರ ಇದೆ ಅನ್ನೋ ಕಾರಣಕ್ಕೆ ಈ ರೀತಿಯ ಆರೋಪ ಮಾಡುತ್ತಿಲ್ಲ. ಈ ಬಗ್ಗೆ ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡುವುದಕ್ಕೆ ನಾನು ಸಿದ್ಧನಾಗಿದ್ದೇನೆ ಎಂದು ಹೇಳಿರುವ ಪದ್ಮನಾಭ ಪ್ರಸನ್ನ ಕುಮಾರ್, ವಿಧಾನಸಭೆ ಚುನಾವಣೆಗೆ ತಮ್ಮ ಪಕ್ಷದಿಂದ ಸ್ಪರ್ಧಿಸುವ ನಲವತ್ಮೂರು ಅಭ್ಯರ್ಥಿಗಳು ಪಟ್ಟಿ ಸಹ ಬಿಡುಗಡೆ ಮಾಡಿದರು.

English summary
Jagadish Shettar when he was chief minister, offered 10 crore to me to expel Yeddyurappa from KJP, says KJP national president Padmanabha Prasanna Kumar in Hubballi press meet on Monday. Journalists Indrajeeth Lankesh and Chandrachood sent for mediation, he further alleged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X