ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನು ಮುಂದೆ ಹುಬ್ಬಳ್ಳಿಯಿಂದ ಪ್ರಮುಖ ನಗರಗಳ ಸಂಪರ್ಕ ಸುಲಭ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 19 : ವಾಣಿಜ್ಯ ನಗರಿ ಹುಬ್ಬಳ್ಳಿಗೆ ಮತ್ತೊಂದು ಹೆಮ್ಮೆಯ ಗರಿ ಬಂದಿದೆ. ಕಳೆದ ಕೆಲ ತಿಂಗಳ ಹಿಂದೆ ಆರಂಭವಾದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ದೇಶದ ಪ್ರಮುಖ ನಗರಗಳ ಸಂಪರ್ಕ ಸುಲಭವಾಗುವ ಕಾಲ ಸನ್ನಿಹಿತವಾಗಿದೆ.

ಹೌದು, ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಉಡಾನ್ ಯೋಜನೆಯಡಿ ಇಂಡಿಗೋ ಜೂನ್ ರಿಂದ ಹುಬ್ಬಳ್ಳಿಯಿಂದ ದೇಶದ ಐದು ಪ್ರಮುಖ ನಗರಗಳಾದ ಚೆನ್ನೈ, ಕೊಚ್ಚಿನ್ ಗೋವಾ, ಕಣ್ಣೂರ್, ಅಹ್ಮದಬಾದ್ ಗೆ ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ.

ವಿಮಾನದಲ್ಲಿ ಸೊಳ್ಳೆ ಎಂದು ದೂರು ನೀಡಿದ ಡಾಕ್ಟರ್‌, ಮುಂದೇನಾಯ್ತು?ವಿಮಾನದಲ್ಲಿ ಸೊಳ್ಳೆ ಎಂದು ದೂರು ನೀಡಿದ ಡಾಕ್ಟರ್‌, ಮುಂದೇನಾಯ್ತು?

ದೇಶದ ಪ್ರಮುಖ ವಿಮಾನ ಸೇವಾ ಕಂಪನಿ ಇಂಡಿಗೋ ಹುಬ್ಬಳ್ಳಿಯಿಂದ ಈ ಐದು ನಗರಗಳಿಗೆ ವಾರದ ಎಲ್ಲಾ ದಿನಗಳಲ್ಲೂ ವಿಮಾನ ಸೇವೆ ಒದಗಿಸಲು ಸಜ್ಜಾಗಿದೆ . ಈ ಹಿನ್ನಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಜಾಗ ಸಹ ಪಡೆದುಕೊಂಡಿದೆ.

Indigo will start air services in Hubballi

ಅಲ್ಲದೆ ಇದಕ್ಕೆ ಹಣ ಕೂಡ ಸಂದಾಯ ಮಾಡಿದೆ. ಇನ್ನು ಸ್ಟಾರ್ ಏರ್ ಲೈನ್ಸ್ ಕೂಡ ಹುಬ್ಬಳ್ಳಿಯಿಂದ ವಿಮಾನ ಸೇವೆ ಆರಂಭಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದೆ. ಸ್ಟಾರ್ ಏರ್ ಲೈನ್ಸ್ ಅಧಿಕಾರಿಗಳು ಈಗಾಗಲೇ ಹುಬ್ಬಳ್ಳಿ ವಿಮಾನ ನಿಲ್ದಾಣ ಪರಿಶೀಲಿಸಿ, ವಿಮಾನಯಾನ ಸೇವೆ ಒದಗಿಸುವ ನಿಟ್ಟಿನಲ್ಲಿ ಜಾಗ ಗುರುತಿಸಿ, ಖರೀದಿಸಲು ಮುಂದಾಗಿದ್ದಾರೆ.

ಇದಕ್ಕೆ ಅವಶ್ಯವಾದ ಹಣ ಪಾವತಿಸುವುದು ಮಾತ್ರ ಬಾಕಿ ಉಳಿದಿದೆ. ಈ ಸಂಸ್ಥೆಯು ಅಕ್ಟೋಬರ್ ಅಂತ್ಯದೊಳಗೆ ವಿಮಾನಯಾನ ಸೇವೆ ಆರಂಭಿಸುವ ಲಕ್ಷಣಗಳಿವೆ.

ಸದ್ಯ ಏರ್ ಇಂಡಿಯಾ ಹುಬ್ಬಳ್ಳಿಯಿಂದ ಬೆಂಗಳೂರು ಹಾಗೂ ಮುಂಬಯಿಗೆ ವಿಮಾನಯಾನ ಸೇವೆ ಒದಗಿಸುತ್ತಿದೆ. ಮೇನಿಂದ ಸ್ಪೈಸ್ಜೆಟ್ ಕಂಪನಿಯು ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ. ಒಂದು ವೇಳೆ ಅಂದುಕೊಂಡಂತೆ ಎಲ್ಲವೂ ನಡೆದರೆ ಮೇ-ಜೂನ್ ತಿಂಗಳಲ್ಲಿ ಹುಬ್ಬಳ್ಳಿಯಿಂದ ದೇಶದ ವಿವಿಧ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ನಿರಂತರವಾಗಿ ದೊರೆಯಲಿದೆ.

English summary
By Hubballi Airport we are easily accessible major cities of the country. Under the UDAN scheme of the Central Government Indigo will start air services on June.scheduled to start service the major cities such as Chennai, Cochin Goa, Kannur and Ahmedabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X