ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಿಂದ ಅಹಮದಾಬಾದ್‌ಗೆ ಮತ್ತೆ ವಿಮಾನ ಸೇವೆ ಆರಂಭ

|
Google Oneindia Kannada News

ಹುಬ್ಬಳ್ಳಿ, ಜನವರಿ 05: ಸತತ 9 ತಿಂಗಳ ಬಳಿಕ ಹುಬ್ಬಳ್ಳಿಯಿಂದ ಅಹಮದಾಬಾದ್‌ಗೆ ಇಂಡಿಗೋ ವಿಮಾನ ಹಾರಾಟ ಆರಂಭಿಸಲಿದೆ.
ಕೊರೊನಾ ಸೋಂಕಿನಿಂದಾಗಿ ಕೆಲವು ತಿಂಗಳಿಂದ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು.

ಸಾಂಕ್ರಾಮಿಕ ಸಮಯದಲ್ಲಿ ಹುಬ್ಬಳ್ಳಿಯಿಂದ ಪಶ್ಚಿಮ ರಾಜ್ಯಗಳನ್ನು ತಲುಪಲು ಅನೇಕ ಜನರಿಗೆ ಕಷ್ಟವಾಯಿತು. ಈ ಪ್ರದೇಶವು ಅಹಮದಾಬಾದ್ ಮತ್ತು ಸುತ್ತಮುತ್ತಲಿನ ನಗರಗಳಿಂದ ಜವಳಿ ಮತ್ತು ಕೈಗಾರಿಕಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಹುಬ್ಬಳ್ಳಿ ರಾಜಸ್ಥಾನದಿಂದ ಆಮದು ಮಾಡಿಕೊಳ್ಳುತ್ತದೆ.

ಮೈಸೂರು, ಹೈದರಾಬಾದ್ ನಡುವೆ ಇಂಡಿಗೋ ವಿಮಾನ ಸಂಚಾರ ಆರಂಭಮೈಸೂರು, ಹೈದರಾಬಾದ್ ನಡುವೆ ಇಂಡಿಗೋ ವಿಮಾನ ಸಂಚಾರ ಆರಂಭ

ಜನವರಿ 4 ರಿಂದ ವಿಮಾನ ಸೇವೆ ಆರಂಭವಾಗಿದೆ. ಸೋಮವಾರ, ಬುಧವಾರ, ಶುಕ್ರವಾರಗಳಂದು ಅಹಮದಾಬಾದ್- ಹುಬ್ಬಳ್ಳಿ-ನಡುವೆ ಸಂಚಾರ ನಡೆಸಲಿದೆ. ಸ್ಟಾರ್ ಏರ್ ಕಂಪೆನಿಯು ಇದೇ 11ರಿಂದ , ತಿರುಪತಿ, ಬೆಂಗಳೂರಿಗೆ ವಿಮಾನಯಾನ ಸೇವೆ ಪುನರಾರಂಭಿಸುತ್ತಿದೆ. ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರ ದಂದು ಮಾತ್ರ ಈ ವಿಮಾನ ಸಂಚರಿಸಲಿದೆ.

Indigo Resumes Flight Between Hubballi And Ahmedabad

ಹುಬ್ಬಳ್ಳಿಯ ಉದ್ಯಮಿಗಳು ಅಹಮದಾಬಾದ್ ಮತ್ತು ಗುಜರಾತ್‌ನ ಇತರ ನಗರಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಈ ಎರಡು ನಗರಗಳ ನಡುವೆ ವಿಮಾನ ಸೇವೆ ಪುನರಾರಂಭಗೊಂಡ ಮೊದಲ ದಿನ, ಅಹಮದಾಬಾದ್‌ನಿಂದ ಹುಬ್ಬಳ್ಳಿಗೆ ಹಾರಾಟದಲ್ಲಿ ಶೇ 60 ರಷ್ಟು ಸೀಟು ಭರ್ತಿಯಾಗಿತ್ತು.

ಅನೇಕ ವ್ಯಾಪಾರಸ್ಥರು ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಇದು ಲಾಕ್‌ಡೌನ್‌ಗೆ ಮುಂಚೆ ಜನಪ್ರಿಯ ಮಾರ್ಗಗಳಲ್ಲಿ ಒಂದಾಗಿತ್ತು. ಗುಜರಾತ್‌ನ ಅನೇಕ ನಗರಗಳು ಉತ್ತರ ಕರ್ನಾಟಕ ಪ್ರದೇಶಗಳಿಗೆ ಕೈಗಾರಿಕಾ ಸಾಮಾಗ್ರಿಗಳು ಮತ್ತು ಜವಳಿಗಳನ್ನು ಈ ಮಾರ್ಗದಿಂದ ಪೂರೈಕೆಯಾಗುತ್ತದೆ.

Recommended Video

ಬೆಳಗಾವಿ:ಶಾಲೆ ಆರಂಭವಾದ ಬೆನ್ನಲ್ಲೇ ಬಿಗ್ ಶಾಕ್-18 ಜನ ಶಿಕ್ಷಕರಿಗೆ ಕೊರೊನಾ | Oneinda Kannada

English summary
Indigo Resumes Flight Services Between Hubballi And Ahmedabad after 9 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X