ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಇಂಡಿಗೋ ವಿಮಾನ ಟೈರ್ ಸ್ಪೋಟ; ತಪ್ಪಿದ ಭಾರೀ ಅನಾಹುತ

|
Google Oneindia Kannada News

ಹುಬ್ಬಳ್ಳಿ, ಜೂನ್ 15: ಕೇರಳದ ಕಣ್ಣೂರಿನಿಂದ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೋಗಬೇಕಾದ ಇಂಡಿಗೋ ವಿಮಾನ ಸರಿಯಾಗಿ ಲ್ಯಾಂಡಿಂಗ್ ಆಗದೆ, ನೋಸ್ ಟೈರ್ ಆಪ್ ಶೂಟ್ ಆಗಿದ್ದು, ಅದೃಷ್ಟವಶಾತ್ ಪೈಲಟ್‌ನ ಚಾಣಾಕ್ಷತನದಿಂದ ವಿಮಾನದಲ್ಲಿದ್ದ 5 ಪ್ರಯಾಣಿಕರು ಭಾರೀ ದುರಂತದಿಂದ ಪಾರಾದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಕಣ್ಣೂರಿನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 18 ಪ್ರಯಾಣಿಕರನ್ನು ಕರೆದುಕೊಂಡು ಪ್ರಯಾಣ ಬೆಳೆಸಬೇಕಿತ್ತು. ಆದರೆ, ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ವೇಳೆ, ರನ್‌ವೇನಲ್ಲಿ ಸುಮಾರು 200 ಮೀಟರ್ ಮುಂದೆ ಬಂದು ಲ್ಯಾಂಡ್ ಆಗಿದೆ. ಈ ಸಂದರ್ಭದಲ್ಲಿ ನೋಸ್ ಟೈರ್ ಶೂಟ್ ಆಪ್ ಆಗಿದೆ.

 Indigo Flight From Kannur Tyre Bursts While Landing In Hubballi Airport; Passengers And Crew Safe

ಮಂಜುಕವಿದ ವಾತಾವರಣ: ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ವಿಮಾನ ಮಂಗಳೂರಿಗೆಮಂಜುಕವಿದ ವಾತಾವರಣ: ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ವಿಮಾನ ಮಂಗಳೂರಿಗೆ

Recommended Video

ನಮ್ ಹೊಟ್ಟೆ ತುಂಬಿಲ್ಲ ಅಂದ್ರು ಗಾಡಿ ಹೊಟ್ಟೆ ತುಂಬಿಸಬೇಕು | Oneindia Kannada

ಈ ಘಟನೆಯಿಂದ ಸ್ವಲ್ಪವೂ ವಿಚಲಿತರಾಗದೆ ಲ್ಯಾಂಡಿಂಗ್ ಆಗುತ್ತಿದ್ದ ವಿಮಾನವನ್ನು ಮತ್ತೆ ಟೇಕ್ ಆಪ್ ಮಾಡಿರುವ ಪೈಲಟ್, ನಂತರ ಸಾವಧಾನವಾಗಿ ವಿಮಾನವನ್ನು ಮತ್ತೆ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ನೋಸ್ ಟೈರ್ ಸ್ಪೋಟಗೊಂಡಿದ್ದರಿಂದ ಮುಂದಿನ ಪ್ರಯಾಣವನ್ನು ರದ್ದುಗೊಳಿಸಲಾಯಿತು.

English summary
Indigo Flight from kannur Tyre Bursts While Landing in Hubballi airport; Passengers and crew Safe. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X