ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರ್ಗೋ ಸೇವೆ ಆರಂಭ

By Gururaj
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್ 23 : ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ಸೇವೆ (ಕಾರ್ಗೋ) ಆರಂಭಿಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಹುಬ್ಬಳ್ಳಿ ಕೈಗಾರಿಕೋದ್ಯಮಿಗಳು ಸೇವೆ ಆರಂಭಿಸಲು ಮನವಿ ಮಾಡಿದ್ದರು.

ಇಂಡಿಗೋ ಮತ್ತು ಸ್ಪೈಸ್ ಜೆಟ್ ವಿಮಾನಗಳು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರ್ಗೋ ಸೇವೆಯನ್ನು ಆರಂಭಿಸಲಿವೆ. ಕೆಲವೇ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಹ ಈ ಸೇವೆಯನ್ನು ಪ್ರಾರಂಭಿಸಲಿದೆ.

ಹುಬ್ಬಳ್ಳಿ : ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಿಹುಬ್ಬಳ್ಳಿ : ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಿ

'ಪ್ರಯಾಣಿಕರ ವಿಮಾನದಲ್ಲಿಯೇ ಸರಕು ಸಾಗಣೆ ಮಾಡಲು ಅನುಮತಿ ನೀಡಲಾಗಿದೆ. ಅಗತ್ಯ ಸೌಲಭ್ಯವನ್ನು ಒದಗಿಸಲಾಗಿದೆ. ಹುಬ್ಬಳ್ಳಿಗೆ ಸರಕುಗಳನ್ನು ತರಿಸಿಕೊಳ್ಳಲು ಮತ್ತು ಕಳುಹಿಸಲು ಅವಕಾಶವಿದೆ. ಇದಕ್ಕಾಗಿಯೇ ಪ್ರತ್ಯೇಕ ಕಟ್ಟಡ ಒದಗಿಸಿಕೊಡುವ ಕಾರ್ಯ ನಡೆಯುತ್ತಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

ಹುಬ್ಬಳ್ಳಿಯಿಂದ ಕೊಚ್ಚಿ-ಗೋವಾಗೆ ವಿಮಾನ ಸೇವೆ ಆರಂಭಹುಬ್ಬಳ್ಳಿಯಿಂದ ಕೊಚ್ಚಿ-ಗೋವಾಗೆ ವಿಮಾನ ಸೇವೆ ಆರಂಭ

Indigo and Spicejet begins cargo service from Hubballi airport

ಹುಬ್ಬಳ್ಳಿ ಕೈಗಾಕೋದ್ಯಮಿಗಳ ಸಂಘ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಾರ್ಗೋ ಸೇವೆ ಆರಂಭಿಸಲು ಅನುಮತಿ ನೀಡಬೇಕು ಎಂದು ಕೋರಿತ್ತು. ಸದ್ಯ ಬೆಂಗಳೂರಿಗೆ ನಾಲ್ಕು ವಿಮಾನಗಳು ಹುಬ್ಬಳ್ಳಿಯಿಂದ ಹಾರಾಟ ನಡೆಸುತ್ತಿವೆ.

ಏಷ್ಯಾ ಖಂಡದಲ್ಲೇ ಮಾದರಿಯಾದ ಹುಬ್ಬಳ್ಳಿ ಕೋರ್ಟ್ ವಿಶೇಷತೆಗಳುಏಷ್ಯಾ ಖಂಡದಲ್ಲೇ ಮಾದರಿಯಾದ ಹುಬ್ಬಳ್ಳಿ ಕೋರ್ಟ್ ವಿಶೇಷತೆಗಳು

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ಸೇವೆ ಒದಗಿಸಲು ಸಾಕಷ್ಟು ಅವಕಾಶಗಳಿವೆ. ಇಂಡಿಗೋ ಸ್ಪರ್ಧಾತ್ಮಕ ಬೆಲೆಯಲ್ಲಿ ಸೇವೆಯನ್ನು ನೀಡುತ್ತಿದೆ. ನಿಯಮಿತವಾಗಿ ಸೇವೆ ಬಳಸುವವರಿಗೆ ವಿಶೇಷ ಆಫರ್‌ಗಳನ್ನು ನೀಡಲು ಸಂಸ್ಥೆ ನಿರ್ಧರಿಸಿದೆ.

English summary
Airport Authority Of India approved to began cargo service from Hubballi airport. Hubballi Industries Association submit the memorandum to Airport Authority Of India to began cargo service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X