ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಿಂದ ಕೊಚ್ಚಿ-ಗೋವಾಗೆ ವಿಮಾನ ಸೇವೆ ಆರಂಭ

By Gururaj
|
Google Oneindia Kannada News

ಹುಬ್ಬಳ್ಳಿ, ಜೂನ್ 27 : ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಸೇವೆ ಆರಂಭವಾಗಿದೆ. ಜುಲೈನಿಂದ ಪ್ರತಿನಿತ್ಯ 20 ವಿಮಾನಗಳು ಇಲ್ಲಿಂದ ಹಾರಾಟ ನಡೆಸಲಿವೆ.

ಗುರುವಾರ ಕೊಚ್ಚಿ-ಹುಬ್ಬಳ್ಳಿ-ಗೋವಾ ನಡುವಿನ ವಿಮಾನ ಹಾರಾಟಕ್ಕೆ ಚಾಲನೆ ಸಿಕ್ಕಿದೆ. ಇಂಡಿಗೋ ಸಂಸ್ಥೆ ಮೂರು ನಗರಗಳ ನಡುವೆ ವಿಮಾನ ಹಾರಾಟವನ್ನು ಆರಂಭಿಸಿದೆ.

ಹುಬ್ಬಳ್ಳಿಯಿಂದ ಕೊಲಂಬೋ, ದುಬೈಗೆ ವಿಮಾನ ಹಾರಾಟಹುಬ್ಬಳ್ಳಿಯಿಂದ ಕೊಲಂಬೋ, ದುಬೈಗೆ ವಿಮಾನ ಹಾರಾಟ

ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ. ಈಗಾಗಲೇ ಹಲವು ಕಂಪನಿಗಳು ಹುಬ್ಬಳ್ಳಿಯಿಂದ ವಿಮಾನ ಸೇವೆ ಒದಗಿಸಲು ಮುಂದಾಗಿವೆ.

IndiGo Airlines

ಇಂಡಿಗೋ ಸಂಸ್ಥೆ ಇಂದು ಕೊಚ್ಚಿ-ಹುಬ್ಬಳ್ಳಿ-ಗೋವಾ ನಡುವೆ ವಿಮಾನ ಸೇವೆ ಆರಂಭಿಸಿದೆ. ಸ್ಪೈಸ್ ಜೆಟ್ ಜುಲೈ 1ರ ಬಳಿಕ ದೆಹಲಿ, ಕೊಲಂಬೋ ಮತ್ತು ದುಬೈಗೆ ವಿಮಾನ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ.

ಹುಬ್ಬಳ್ಳಿಯಿಂದ 5 ನಗರಕ್ಕೆ ವಿಮಾನ ಸೇವೆ ಆರಂಭಹುಬ್ಬಳ್ಳಿಯಿಂದ 5 ನಗರಕ್ಕೆ ವಿಮಾನ ಸೇವೆ ಆರಂಭ

ಪ್ರಸ್ತುತ ಹುಬ್ಬಳ್ಳಿಯಿಂದ ಬೆಂಗಳೂರು, ಮುಂಬೈಗೆ ವಿಮಾನ ಸಂಚಾರ ನಡೆಯುತ್ತಿದೆ. ಜುಲೈ 1ರಿಂದ ಮತ್ತಷ್ಟು ವಿಮಾನಗಳ ಹಾರಾಟ ನಡೆಸಲಿವೆ.

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗಿದೆ. ಉಡಾನ್ ಯೋಜನೆಗೆ ಹುಬ್ಬಳ್ಳಿಯನ್ನು ಆಯ್ಕೆ ಮಾಡಲಾಗಿದ್ದು, ಸ್ಪೇಸ್‌ ಜೆಟ್, ಇಂಡಿಗೋ ವಿಮಾನಯಾನ ಸಂಸ್ಥೆಗಳು ಹುಬ್ಬಳ್ಳಿಯಿಂದ ವಿಮಾನ ಸೇವೆಯನ್ನು ಆರಂಭಿಸಿವೆ.

English summary
IndiGo Airlines on June 28, 2018 launched a flight service Kochi-Hubballi-Goa. By this service Hubballi airport get another flight connectivity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X