ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ದೇಶದ ಅತಿದೊಡ್ಡ ಸ್ಟಾರ್ಟ್ಅಪ್ ಇನ್‌ಕ್ಯುಬೇಷನ್ ಕೇಂದ್ರ

|
Google Oneindia Kannada News

ಹುಬ್ಬಳ್ಳಿ, ಜುಲೈ 18: ದೇಶದಲ್ಲೇ ಅತಿ ದೊಡ್ಡ ಸ್ಟಾರ್ಟ್‌ಅಪ್ ಇನ್‌ಕ್ಯುಬೇಷನ್‌ ಕೇಂದ್ರವನ್ನು ನೀತಿ ಆಯೋಗದ ನೀತಿ ಅಧ್ಯಕ್ಷ ಅಮಿತಾಭ್ ಕಾಂತ್ ಬುಧವಾರ ಉದ್ಘಾಟಿಸಿದರು.

ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸ್ಯಾಂಡ್ ಬಾಕ್ಸ್ ಸ್ಡಾರ್ಟ್ಅಪ್‌ನ ಭಾರತದ ಅತಿದೊಡ್ಡ ತಂತ್ರಜ್ಞಾನ ವಾಣಿಜ್ಯೋದ್ಯಮ ಇನ್‌ಕ್ಯುಬೇಟರ್ ಇದಾಗಿದ್ದು, ಒಂದು ಲಕ್ಷ ಚದರ ಅಡಿ ಪ್ರದೇಶದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಹೊಂದಿದೆ.

ಹುಬ್ಬಳ್ಳಿ: ಅತ್ಯಾಧುನಿಕ ಸ್ಟಾರ್ಟ್‌ಅಪ್ ಕ್ಲಸ್ಟರ್ ಉದ್ಘಾಟಿಸಲಿರುವ ಜಾರ್ಜ್ಹುಬ್ಬಳ್ಳಿ: ಅತ್ಯಾಧುನಿಕ ಸ್ಟಾರ್ಟ್‌ಅಪ್ ಕ್ಲಸ್ಟರ್ ಉದ್ಘಾಟಿಸಲಿರುವ ಜಾರ್ಜ್

ಬಳಿಕ ಮಾತನಾಡಿದ ಅಮಿತಾಭ್ ಕಾಂತ್, 'ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತಹ ಕ್ಷೇತ್ರಗಳಿಗೆ ಕಾಯಕಲ್ಪ ನೀಡಲು ಭಾರತವು ಪ್ರಮುಖ ಕ್ರಮಗಳನ್ನು ಕೈಗೊಳ್ಳಬೇಕಿದೆ. ದೇಶದ ಶೇ 60 ರಷ್ಟು ಜನ ವಾಸಿಸುವ ಗ್ರಾಮೀಣ ಪ್ರದೇಶದ ಪ್ರಗತಿಗಾಗಿ ಬಹುದೊಡ್ಡ ಸಾಮಾಜಿಕ ಬದಲಾವಣೆಯ ಅಗತ್ಯವಿದೆ. ದೇಶವು ಎದುರಿಸುತ್ತಿರುವ ಸಮಸ್ಯೆಗಳಿಗೆ ನಗರ-ಪಟ್ಟಣಗಳೇ ಪರಿಹಾರ ಕಲ್ಪಿಸಬಲ್ಲವು ಎಂದರು.

indias biggest startup incubation centre inauguration hubballi

ದೇಶದ 1.3 ಶತಕೋಟಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಇಡೀ ಜಗತ್ತಿಗೆ ಭಾರತವು ಮಾದರಿಯಾಗಬಲ್ಲದು. ನಮ್ಮ ನೂತನ ಆವಿಷ್ಕಾರಗಳಿಂದ ಜಗತ್ತನ್ನು ಮುನ್ನಡೆಸಬಹುದು ಎಂದು ಹೇಳಿದರು.

ದೇಶಪಾಂಡೆ ಪ್ರತಿಷ್ಠಾನವು ಹುಬ್ಬಳ್ಳಿಯಲ್ಲಿ ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌‌ಅಪ್ ಇನ್ ಕ್ಯುಬೇಷನ್ ಆರಂಭಿಸಿರುವುದನ್ನು ಅವರು ಶ್ಲಾಘಿಸಿದರು.

ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾರು ಕುರ್ಚಿ, ಜೀಪು ಟೇಬಲ್!ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾರು ಕುರ್ಚಿ, ಜೀಪು ಟೇಬಲ್!

ಕೇಂದ್ರ ಸರ್ಕಾರ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯಮಾವಕಾಶ ಬೆಳೆಸುವುದನ್ನು ಬೆಂಬಲಿಸುತ್ತದೆ. ದೇಶವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ 25 ಇನ್ ಕ್ಯುಬೇಷನ್ ಕೇಂದ್ರಗಳಿಗೆ ನೆರವು ಒದಗಿಸುತ್ತಿದೆ.

ಅಭಿವೃದ್ಧಿಗಾಗಿ ಎಲ್ಲರನ್ನೂ ಒಳಗೊಳ್ಳುವ ಸೂತ್ರ ಅಳವಡಿಸಿಕೊಳ್ಳುವ ಅಗತ್ಯವಿದೆ. ಸರ್ಕಾರ 115 ಅತ್ಯಂತ ಹಿಂದುಳಿದ ಜಿಲ್ಲೆಗಳನ್ನು ಗುರುತಿಸಿದೆ.

indias biggest startup incubation centre inauguration hubballi

ಆ ಜಿಲ್ಲೆಗಳಲ್ಲಿನ ನೈಜ ಅಂಕಿ ಅಂಶಗಳನ್ನು ಬಳಸಿಕೊಂಡು ಸಾಮಾಜಿಕ ಸೂಚ್ಯಂಕದಲ್ಲಿ ಹೆಚ್ಚಳ ಆಗುವುದಕ್ಕೆ ಕಾರ್ಯಸಾಧುವಾದ ಕ್ರಿಯಾಯೋಜನೆ ರೂಪಿಸುವ ಅಗತ್ಯವಿದೆ ಎಂದು ವಿವರಿಸಿದರು.

ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ಗುರುರಾಜ ದೇಶಪಾಂಡೆ, ಪ್ರತಿಷ್ಠಾನದ ಟ್ರಸ್ಟಿ ಶ್ರೀನಿವಾಸ ದೇಶಪಾಂಡೆ, ಸಿಇಓ ವಿವೇಕ್ ಪವಾರ್, ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌‌ಅಪ್ ಸಿಇಓ ಸಿಎಂ ಪಾಟೀಲ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ ದೇಶದ ಮಾದರಿ ಕೋರ್ಟ್ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ ದೇಶದ ಮಾದರಿ ಕೋರ್ಟ್

ಇನ್‌ಕ್ಯುಬೇಷನ್ ಕೇಂದ್ರದಲ್ಲಿ ಏನೇನಿದೆ?
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಮೀಪದ ಗೋಕುಲ ರಸ್ತೆಯ 6.09 ಎಕರೆ ಪ್ರದೇಶದಲ್ಲಿ ಕ್ಯುಬೇಷನ್ ಕೇಂದ್ರ ನಿರ್ಮಿಸಲಾಗಿದೆ. ನಿಗದಿತ ಸಮಯದಲ್ಲಿ ನೂರಕ್ಕೂ ಹೆಚ್ಚು ಸ್ಟಾರ್ಟ್‌‌ಅಪ್‌ಗಳ ಇನ್ ಕ್ಯುಬೇಷನ್‌ಗೆ ಸ್ಥಳಾವಕಾಶ ಇದೆ.

ತಯಾರಕರ ಪ್ರಯೋಗಶಾಲೆ ಮತ್ತು ಇಎಸ್ ಡಿಎಂ ಕ್ಲಸ್ಟರ್‍ ಸೇರಿದಂತೆ ಪೂರ್ಣಪ್ರಮಾಣದ ಸೌಲಭ್ಯಗಳನ್ನು ಹೊಂದಿರುವ ಭಾರತದ ಏಕೈಕ ಇನ್ ಕ್ಯುಬೇಷನ್ ಕೇಂದ್ರ ಇದಾಗಿದೆ.

ಕಳೆದ ಎಂಟು ವರ್ಷಗಳಲ್ಲಿ ಸ್ಯಾಂಡ್ ಬಾಕ್ಸ್ ಸ್ಟಾರ್ಟ್‌ಅಪ್ ಕೇಂದ್ರವು 80ಕ್ಕೂ ಹೆಚ್ಚು ಸುಸ್ಥಿರ, ಗಣನೀಯ ಮತ್ತು ಚೇತರಿಸಿಕೊಳ್ಳುತ್ತಿರುವ ಉದ್ಯಮ ಮಾದರಿಗಳನ್ನು ಸೃಷ್ಟಿಸುವುದಕ್ಕೆ ಕಾರಣವಾಗಿದೆ.

ಇದರಿಂದ 70 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಸ್ಥಳೀಯ ಆರ್ಥಿಕತೆಗೆ ಸೇರಿಸುವುದು ಸಾಧ್ಯವಾಗಿದೆ. ಸಹಭಾಗಿತ್ವದಲ್ಲಿರುವ ಹಲವು ಸಂಸ್ಥೆಗಳ ಪೈಕಿ 50ಕ್ಕೂ ಹೆಚ್ಚು ತಂತ್ರಜ್ಞಾನ ವಲಯದ ಪೇಟೆಂಟ್ (ಹಕ್ಕು ಸ್ವಾಮ್ಯ) ಪಡೆಯಲು ಅರ್ಜಿ ಸಲ್ಲಿಸಿವೆ.

ತಂತ್ರಜ್ಞಾನ ಕ್ಷೇತ್ರದ ವಿವಿಧ ವಲಯಗಳಾದ ಇಮೇಜ್ ಪ್ರೊಸೆಸಿಂಗ್, ಕೃಷಿ ತಂತ್ರಜ್ಞಾನ, ಇಂಟರ್‌ನೆಟ್ ಆಫ್ ಥಿಂಗ್ಸ್, ಸಂಪರ್ಕ, ಇ-ವಾಣಿಜ್ಯ, ಆರೋಗ್ಯ ಮತ್ತು ಸೇವಾ ಕ್ಷೇತ್ರಗಳಲ್ಲಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ.

ಲಾಭಾಪೇಕ್ಷೆಯಿಲ್ಲದ ಹಾಗೂ ಸಮಾಜದ ಮೇಲೆ ಹೆಚ್ಚು ಪರಿಣಾಮ ಬೀರುವ ಯೋಜನೆಗಳಿಗಾಗಿ ತಮ್ಮನ್ನೇ ತೊಡಗಿಸಿಕೊಂಡಿರುವ 'ಸ್ಯಾಂಡ್ ಬಾಕ್ಸ್ ಸಂವಿಧಾ' ತಂಡ ಕಾರ್ಯನಿರ್ವಹಿಸುತ್ತಿದೆ.

ಇದರಿಂದಾಗಿ ಗ್ರಾಮೀಣ ಮತ್ತು ಅರೆನಗರ ಪ್ರದೇಶದಲ್ಲಿ ವಾಸಿಸುವ ಜನರ ಸಮಸ್ಯೆಗಳನ್ನು ಅರಿತ ಮತ್ತು ಹೊಸದಾಗಿ ಉದ್ಯಮದಲ್ಲಿ ತೊಡಗಿಸಿಕೊಳ್ಳಬಯಸುವ ಉದ್ಯಮಿಗಳಿಗೆ ಅವಕಾಶ ದೊರಕಿದೆ.

English summary
Indias largest startup Incubation centre was inaugurated on Wednesday at hubballi by niti aayog's niti president Amitabh Kanth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X