ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಹರ್ ಘರ್ ತಿರಂಗಾ' ಅಭಿಯಾನದ ಹಿಂದೆ ಕರುನಾಡ ಕುವರ!

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್‌ 10 : ಈ ವರ್ಷದ ಸ್ವಾತಂತ್ರ್ಯೋತ್ಸವವು ವಿಶೇಷವಾಗಿರಲಿದೆ.‌ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಪ್ರತಿ ಮನೆಯಲ್ಲೂ ಧ್ವಜ ಹಾರಿಸಲು 'ಹರ್ ಘರ್ ತಿರಂಗ' ಎಂಬ ಬೃಹತ್ ಅಭಿಯಾನಕ್ಕೆ ಕರೆ ನೀಡಿದ್ದಾರೆ.

ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದ ಸ್ಮರಣಾರ್ಥ ಕೇಂದ್ರ ಸರಕಾರ 'ಹರ್ ಘರ್ ತಿರಂಗಾ' ಅಭಿಯಾನವನ್ನು ನಡೆಸಲು ಘೋಷಿಸಲಾಗಿದೆ. ಈ ಅಭಿಯಾನದ ಅಡಿಯಲ್ಲಿ ದೇಶದ 20 ಕೋಟಿಗೂ ಹೆಚ್ಚು ಮನೆಗಳು ಮತ್ತು ನೂರು ಕೋಟಿಗೂ ಹೆಚ್ಚು ಜನರು ತಮ್ಮ ಮನೆಗಳಲ್ಲಿ ಮೂರು ದಿನಗಳ ಕಾಲ ರಾಷ್ಟ್ರದ ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ.

'ಹರ್ ಘರ್ ತಿರಂಗಾ' ಅಭಿಯಾನ ಬಿಬಿಎಂಪಿಯಿಂದ; ಎಲ್ಲೆಲ್ಲಿ ಧ್ವಜ ಮಾರಾಟ?'ಹರ್ ಘರ್ ತಿರಂಗಾ' ಅಭಿಯಾನ ಬಿಬಿಎಂಪಿಯಿಂದ; ಎಲ್ಲೆಲ್ಲಿ ಧ್ವಜ ಮಾರಾಟ?

ಈ ಅಭಿಯಾನದ ಅಡಿಯಲ್ಲಿ, ದೇಶದ ಪ್ರತಿಯೊಬ್ಬ ನಾಗರಿಕನು ತನ್ನ ಮನೆಯಲ್ಲಿ ರಾಷ್ಟ್ರೀಯ ಹೆಮ್ಮೆಯನ್ನು ಸಂಕೇತಿಸುವ ರಾಷ್ಟ್ರ ಧ್ವಜವನ್ನು ಹಾರಿಸುತ್ತಾನೆ. ಆಗಸ್ಟ್ 13ರಿಂದ 15ರವರೆಗೆ ನಡೆಯುವ ಈ ಅಭಿಯಾನದಲ್ಲಿ 20 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗುವುದು.

ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಆಡಳಿತಾಧಿಕಾರಿಗಳೊಂದಿಗೆ 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಈ ಯೋಜನೆಯಲ್ಲಿ ರಾಷ್ಟ್ರಧ್ವಜವನ್ನು ಗೌರವಪೂರ್ಣವಾಗಿ ಹಾರಿಸಲು ಕೇಂದ್ರ ಗೃಹ ಇಲಾಖೆ ಕರೆ ನೀಡಿದೆ.

 ರಾಷ್ಟ್ರಾಭಿಮಾನ ಬೆಳೆಸುವ ಉದ್ದೇಶ

ರಾಷ್ಟ್ರಾಭಿಮಾನ ಬೆಳೆಸುವ ಉದ್ದೇಶ

ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜಾರೋಹಣವು ದೇಶದ ಪ್ರತಿಯೊಬ್ಬ ಪ್ರಜೆಯ ಮನ ಮತ್ತು ಹೃದಯದಲ್ಲಿ ದೇಶ ಪ್ರೇಮದ ಭಾವನೆಯನ್ನು ದೊಡ್ಡ ಮಟ್ಟದಲ್ಲಿ ಕೊಂಡೊಯ್ಯುವ ಕಾರ್ಯಕ್ರಮವಾಗಿದೆ. ಎಲ್ಲರೂ ಈ ವರ್ಷವು ಧ್ವಜಾರೋಹಣಕ್ಕೆ ಮುಂದಾಗಬೇಕು ಇದರಿಂದ ರಾಷ್ಟ್ರಾಭಿಮಾನವು ಬೆಳೆಯಲಿದೆ ಎನ್ನುವ ಉದ್ದೇಶವಿದೆ. ಇನ್ನೂ, ಈ ಮಹತ್ತರವಾದ 'ಹರ್ ಘರ್ ತಿರಂಗಾ' ಎಂಬ ರಾಷ್ಟ್ರಾಭಿಮಾನದ ಅಭಿಯಾನ ಕರುನಾಡಿನ ಪುತ್ರನ ಕನಸಾಗಿತ್ತು. ಈ ಕುರಿತು ಏಳು ತಿಂಗಳ ಹಿಂದೆಯೇ ಇ- ಮೇಲ್ ಮೂಲಕ ದೇಶದ ಪ್ರಧಾನಿಗಳ ಗಮನ ಸೆಳೆದದ್ದು ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ.

 ಕನ್ನಡಿಗ ದೀಪಕ್‌ ಪರಶುರಾಮ ಸಲಹೆ

ಕನ್ನಡಿಗ ದೀಪಕ್‌ ಪರಶುರಾಮ ಸಲಹೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್‌ 13ರಿಂದ 15ರವರೆಗೆ ಕೇಂದ್ರ ಸರಕಾರ ಹಮ್ಮಿಕೊಂಡಿರುವ 'ಹರ್‌ ಘರ್‌ ತಿರಂಗಾ' (ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ) ಅಭಿಯಾನದ ಪರಿಕಲ್ಪನೆಯ ಬಗ್ಗೆ ಏಳು ತಿಂಗಳ ಹಿಂದೆಯೇ ಕನ್ನಡಿಗರೊಬ್ಬರು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. MY GOVT IDEA BOX ಮೂಲಕ ಕೇಂದ್ರ ಸರಕಾರಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ನಿವಾಸಿ ದೀಪಕ್‌ ಪರಶುರಾಮ ಬೋಚಗೇರಿ ಸಲಹೆ ನೀಡಿದ್ದರು ಎನ್ನಲಾಗಿದೆ.

ಮೊದಲಿನಿಂದಲೂ ರಾಷ್ಟ್ರಧ್ವಜ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತುಂಬು ಅಭಿಮಾನ ಹೊಂದಿದ್ದ ದೀಪಕ್ ಬೋಚಗೇರಿ, ಈ ವರ್ಷ ಅಮೃತ ಮಹೋತ್ಸವ ಆಚರಿಸುವ ಕುರಿತು ಕೇಂದ್ರ ಸರಕಾರ ಘೋಷಣೆ ಮಾಡಿದಾಗಲೇ, ಏನಾದರೊಂದು ಹೊಸ ಉಪಾಯವನ್ನು ಸರ್ಕಾರಕ್ಕೆ ನೀಡಬೇಕು ಎಂಬ ಹಂಬಲ ಅವರ ಮನದಲ್ಲಿ ಮೂಡಿತ್ತಂತೆ.

 ಪ್ರಧಾನಿ ಕಚೇರಿಯಿಂದ ಸ್ವಾಗತ

ಪ್ರಧಾನಿ ಕಚೇರಿಯಿಂದ ಸ್ವಾಗತ

20 ವರ್ಷಗಳಿಂದ ಆಗಸ್ಟ್‌ 15 ಮತ್ತು ಜನವರಿ 26ರಂದು ವರ್ಷಕ್ಕೆ ಎರಡು ಬಾರಿ ಅವರು‌ ತಮ್ಮ ಮನೆಯಲ್ಲಿ ಧ್ವಜ ಹಾರಿಸುವ ಮೂಲಕ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸುವುದು ದೀಪಕ್‌ ಹವ್ಯಾಸವಾಗಿದೆ. ಇದನ್ನೇ ದೇಶದ ಪ್ರತಿ ಮನೆಯಲ್ಲಿ ಮಾಡಿದರೆ ಹೇಗೆ? ಎಂಬ ಕಲ್ಪನೆ ಅವರ ಮನಸ್ಸಿನಲ್ಲಿ ಮೂಡಿತ್ತು. ಹೀಗಾಗಿ ಕಳೆದ ಜನವರಿ 28ರಂದು ಈ ಕುರಿತು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದೆ. ಇ-ಮೇಲ್‌ ಮೂಲಕ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದೆ.

ನಂತರ ನನ್ನ ಪರಿಕಲ್ಪನೆಯ ಸಲಹೆ ನೀಡಿದ್ದರ ಕುರಿತು ನಾನು ಮತ್ತೊಮ್ಮೆ ಮೇಲ್‌ ಮೂಲಕ ಕೇಂದ್ರ ಸರಕಾರದ ಗಮನಕ್ಕೆ ತಂದೆ. ಆಗ ಅವರು ನಿಮ್ಮ ಸಲಹೆಗಳನ್ನು ನಾವು ಸ್ವಾಗತಿಸಿದ್ದೇವೆ. ಇನ್ನೂ ಹೆಚ್ಚಿನ ಸಲಹೆಗಳನ್ನು ನಿರೀಕ್ಷಿಸುತ್ತೇವೆ ಎಂದು ಪ್ರತ್ಯುತ್ತರ ಬಂದಿದೆ ಎಂದು ದೀಪಕ್ ತಿಳಿಸಿದ್ದಾರೆ.

 ರಾಜ್ಯದಲ್ಲೂ 75 ಲಕ್ಷ ಮನೆಗಳ ಮೇಲೆ ಧ್ವಜಾರೋಹಣ

ರಾಜ್ಯದಲ್ಲೂ 75 ಲಕ್ಷ ಮನೆಗಳ ಮೇಲೆ ಧ್ವಜಾರೋಹಣ

ಆಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ದೇಶದ 20 ಕೋಟಿಗೂ ಹೆಚ್ಚು ಮನೆಗಳ ಮೇಲೆ ಮೂರು ದಿನಗಳ ಕಾಲ ತ್ರಿವರ್ಣ ಧ್ವಜ ಹಾರಾಡಲಿದೆ. ಕರ್ನಾಟಕದಲ್ಲೂ 75 ಲಕ್ಷ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡಲಿದೆ. ಶಾಲಾ ಕಾಲೇಜು, ಸರಕಾರಿ ಕಚೇರಿಗಳಲ್ಲೂ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.

English summary
Independence Day 2022: Hubballi man Deepak Parusharam Bochageri behind the idea of Har Ghar Tiranga campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X