ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಬೈಕ್ ಸವಾರನ ಬಳಿ ಹೆಲ್ಮೆಟ್ ಇಲ್ಲ ಅಂದ್ರೆ ಪೆಟ್ರೋಲ್ ಇಲ್ಲ

|
Google Oneindia Kannada News

ಬೆಂಗಳೂರು, ಫೆಬ್ರವರಿ 22 : ಅವಳಿನಗರಗಳಾದ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಬೈಕ್ ಸವಾರ ಹೆಲ್ಮೆಟ್ ಧರಿಸಿಲ್ಲ ಎಂದರೆ ಪೆಟ್ರೋಲ್ ಕೂಡ ದೊರೆಯುವುದಿಲ್ಲ. ಅಲ್ಲಿ ಸಂಚಾರ ಪೊಲೀಸರು ಈ ಒಂದು ಕ್ರಮಕ್ಕೆ ಮುಂದಾಗಿದ್ದಾರೆ.

ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದರೂ ಯಾರೂ ಕೂಡ ನಿಯಮ ಪಾಲಿಸುತ್ತಿಲ್ಲ, ಎಷ್ಟೇ ಕಾರ್ಯಕ್ರಮಗಳು, ರೋಡ್ ಶೋ ಗಳನ್ನು ನಡೆಸಿ ಹೆಲ್ಮೆಟ್ ಕುರಿತಾಗಿ ಜಾಗೃತಿ ಕಾರ್ಯಕ್ರಮಗಳನ್ನು ಪೊಲೀಸರು ಹಮ್ಮಿಕೊಂಡಿದ್ದರೂ ಕೂಡ ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ.

ಐಎಸ್ಐ ಹೆಲ್ಮೆಟ್ ತಪಾಸಣೆ ಆದೇಶ ತಾತ್ಕಾಲಿಕವಾಗಿ ಹಿಂದಕ್ಕೆಐಎಸ್ಐ ಹೆಲ್ಮೆಟ್ ತಪಾಸಣೆ ಆದೇಶ ತಾತ್ಕಾಲಿಕವಾಗಿ ಹಿಂದಕ್ಕೆ

ದಿನಕ್ಕೇ ಸಾಕಷ್ಟು ಅಪಘಾತಗಳು ಕೂಡ ಸಂಭವಿಸುತ್ತಿದೆ. ಇದೆಲ್ಲವನ್ನು ತಡೆಯಲು ಸಂಚಾರ ಪೊಲೀಸರು ಬೈಕ್ ಸವಾರರು ಹೆಲ್ಮೆಟ್ ಧರಿಸಿದರೆ ಮಾತ್ರ ಪೆಟ್ರೋಲ್ ನೀಡಲಾಗುವುದು ಎನ್ನುವ ನಿಯಮವನ್ನು ತಂದಿದ್ದಾರೆ.

In Hubballi, no petrol for helmet-less riders

ಪೊಲೀಸರು ಈ ಕುರಿತು ಪೆಟ್ರೋಲ್ ಬಂಕ್ ಮಾಲೀಕರ ಬಳಿ ಸಭೆ ನಡೆಸಿದ್ದು, ಒಂದೊಮ್ಮೆ ಹೆಲ್ಮೆಟ್ ಧರಿಸದೆ ಇರುವವರಿಗೆ ಪೆಟ್ರೋಲ್ ಕೂಡ ನೀಡಬಾರದು ಎಂದು ಸೂಚನೆ ನೀಡಿದ್ದಾರೆ. ಜತೆಗೆ ತಮ್ಮ ಈ ಅಭಿಯಾನಕ್ಕೆ ಸಾಥ್ ನೀಡುವಂತೆ ಮನವಿ ಮಾಡಿದ್ದಾರೆ. ಎರಡು ನಗರಗಳು ಸೇರಿ ಸುಮಾರು 4 ಲಕ್ಷಕ್ಕೂ ಹೆಚ್ಚು ಬೈಕ್ ಸವಾರರಿದ್ದಾರೆ.

ಹೆಲ್ಮೆಟ್ ಕುರಿತು ಅರಿವು ಮೂಡಿಸಲು ಪೊಲೀಸರು ಅನೇಕ ಅಭಿಯಾನ ಹಮ್ಮಿಕೊಂಡಿದ್ದರು ಅದರೆ ಯಾವುದೇ ಪ್ರಯೋಜ ನವಾಗಿಲ್ಲ. ನಗರದ ಪ್ರಮುಖ ಭಾಗಗಳಲ್ಲಿ ಒಟ್ಟು 15 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಅರ್ಧ ಹೆಲ್ಮೆಟ್‌ ಗೊಂದಲಕ್ಕೆ ತೆರೆ ಎಳೆದ ಸಾರಿಗೆ ಇಲಾಖೆಅರ್ಧ ಹೆಲ್ಮೆಟ್‌ ಗೊಂದಲಕ್ಕೆ ತೆರೆ ಎಳೆದ ಸಾರಿಗೆ ಇಲಾಖೆ

ಹೆಲ್ಮೆಟ್ ಧರಿಸದಿರುವ ಬೈಕ್ ಸವಾರರಿಗೆ ಪೆಟ್ರೋಲ್ ನೀಡದೆ ಪೊಲೀಸರು ಖುದ್ದಾಗಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಹೆಲ್ಮೆಟ್ ಧರಿಸಿದೆ ಇರುವವರು ಅಥವಾ ಸಂಚಾರಿ ನಿಯಮವನ್ನು ಉಲ್ಲಂಘಿಸುವವರಿಗೆ ದಂಡವನ್ನು ವಿಧಿಸಲಾಗುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎಂಎನ್. ನಾಗರಾಜ್ ತಿಳಿಸಿದ್ದಾರೆ.

English summary
The Hubballi-Dharwad police are now enforcing the no helmet, no petrol rule from wednesday to force them to fall in lane. The police held a meeting with the petrol bunk owners to persude them to join them in this unusual drive are providing their staff adequate security in case of blacklash from the bikers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X