ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ಕೃಷಿ ಇಲಾಖೆ ಜಾಗೃತ ದಳದ ದಾಳಿ; ಅನಧಿಕೃತ ಬೀಜ ದಾಸ್ತಾನು ಜಫ್ತಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ 27: ಶಹರದ ಅಮರಗೋಳದ ಎಪಿಎಂಸಿ ಆವರಣದಲ್ಲಿರುವ ವಿವಿಧ ಬಿತ್ತನೆ ಬೀಜಗಳ ದಾಸ್ತಾನು ಮಳಿಗೆಗಳಿಗೆ ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿಗಳ ತಂಡ ಭೇಟಿ ನೀಡಿ ಸುಮಾರು 30.33 ಲಕ್ಷ ರೂ. ಮೌಲ್ಯದ ಅನಧಿಕೃತ ಬಿತ್ತನೆ ಬೀಜ ದಾಸ್ತಾನು ವಶಪಡಿಸಿಕೊಂಡು, ಎರಡು ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಯಶಸ್ವಿ ಹೃದಯ ಚಿಕಿತ್ಸೆಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಯಶಸ್ವಿ ಹೃದಯ ಚಿಕಿತ್ಸೆ

ಮೆ. ಗಾಯತ್ರಿದೇವಿ ಅಗ್ರೋ ಸರ್ವೀಸಸ್ ಮಾರಾಟ ಮಳಿಗೆಯಲ್ಲಿ ಹೈಬ್ರಿಡ್ ಮುಸುಕಿನ ಜೋಳ ಎಂಎಎಚ್ 14- 5 ತಳಿಯ 32 ಕ್ವಿಂಟಾಲ್, ಡೆಲ್ಟಾ 90 ವಿ 90 ತಳಿಯ 28 ಕ್ವಿಂಟಾಲ್, ಹೈ. ಮುಸುಕಿನ ಜೋಳ ಈಗಲ್ 10 ತಳಿಯ 22 ಕ್ವಿಂಟಾಲ್, ಹೈ. ಮುಸುಕಿನ ಜೋಳ ಈಗಲ್ 20 ತಳಿಯ 24.4 ಕ್ವಿಂಟಾಲ್ ಮತ್ತು ಸೋಯಾಬಿನ್ 26.75 ಕ್ವಿಂಟಾಲ್ ಸೇರಿದಂತೆ ಒಟ್ಟಾರೆಯಾಗಿ ರೂ.18.48 ಲಕ್ಷ ಮೌಲ್ಯದ ಅನಧಿಕೃತವಾಗಿ ಸಂಗ್ರಹಿಸಿದ ದಾಸ್ತಾನನ್ನು ಜಪ್ತಿ ಮಾಡಲಾಯಿತು. ಮೆ. ಈಗಲ್ ಸೀಡ್ಸ್ ಆಯಂಡ್ ಬಯೋಟೆಕ್ ಲಿಮಿಟೆಡ್ ಮಾರಾಟ ಮಳಿಗೆಯಲ್ಲಿ ಹೈ.ಮುಸುಕಿನ ಜೋಳ ಈಗಲ್ 10 ತಳಿಯ 33.20 ಕ್ವಿಂಟಾಲ್, ಹೈ. ಮುಸುಕಿನ ಜೋಳ ಈಗಲ್ 20 ತಳಿಯ 30 ಕ್ವಿಂಟಾಲ್ ಸೇರಿದಂತೆ ಒಟ್ಟಾರೆಯಾಗಿ ರೂ.11.85 ಲಕ್ಷ ಮೌಲ್ಯದ ಅನಧಿಕೃತ ದಾಸ್ತಾನನ್ನು ಜಪ್ತಿ ಮಾಡಲಾಯಿತು.

Illegal Storage of Sowing Seeds Confiscated by Officers during raid at Hubballi

ಎರಡೂ ಅಂಗಡಿಗಳ ವಿರುದ್ಧ ಪ್ರಕರಣ:

ಈ ಎರಡೂ ಅಂಗಡಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕ್ರಮ ಕೈಗೊಳ್ಳಲಾಯಿತು. ಜಾಗೃತ ದಳದ ಅಧಿಕಾರಿಗಳಾದ ರಾಘವೇಂದ್ರ ಬಮ್ಮಿಗಟ್ಟಿ, ವಿ.ವಿ.ವಿಠ್ಠಲರಾವ್ , ಉಪ ಕೃಷಿ ನಿರ್ದೇಶಕರಾದ ಮಂಜುನಾಥ ಅಂತರವಳ್ಳಿ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು.

(ಒನ್ಇಂಡಿಯಾ ಸುದ್ದಿ)

English summary
Agriculture Department's Vigilance Officers raided various places at Hubballi to check illegal storage of sowing seeds. Over 33 lakh worth of seeds were confiscated at Amaragola APMC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X