ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೇಳಿಕೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದ ಸಿದ್ದರಾಮಯ್ಯ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 22: "ಎಕ್ಸಿಟ್ ಪೋಲ್ ಗಳು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿವೆ. ಎಲ್ಲವೂ ಫಲಿತಾಂಶ ಬಂದಮೇಲೇ ತಿಳಿಯುತ್ತದೆ, ಕಾದು ನೋಡೋಣ" ಎಂದಿದ್ದಾರೆ ವಿಪಕ್ಷ ನಾಯಕ ಸಿದ್ದರಾಮಯ್ಯ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಜನ ತೀರ್ಪು ಕೊಟ್ಟರೆ ಒಪ್ಪಿಕೊಳ್ಳಲೇ ಬೇಕಲ್ವಾ? ಆದರೆ ಮಹಾರಾಷ್ಟ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ. ಅಲ್ಲಿನ ರಸ್ತೆಗಳು ಕೆಟ್ಟದಾಗಿವೆ. ಜನ ಅದು ಹೇಗೆ ಬಿಜೆಪಿಗೆ ಮತ ನೀಡುತ್ತಾರೋ ಗೊತ್ತಿಲ್ಲ" ಎಂದು ವ್ಯಂಗ್ಯ ಮಾಡಿದ್ದಾರೆ.

Recommended Video

Siddaramaiah is behind the raids of ED on Congress leaders | Oneindia Kannada

ಸಿದ್ದರಾಮಯ್ಯಗೆ ಔದಾರ್ಯತೆಯ ಪರಮಾವಧಿ ತೋರಿದ ಸಿಎಂ ಬಿಎಸ್ವೈಸಿದ್ದರಾಮಯ್ಯಗೆ ಔದಾರ್ಯತೆಯ ಪರಮಾವಧಿ ತೋರಿದ ಸಿಎಂ ಬಿಎಸ್ವೈ

ಇವಿಎಂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದೂ ಆರೋಪಿಸಿದ ಅವರು, "ಇವಿಎಂ ಅಷ್ಟೇ ಅಲ್ಲ, ಚುನಾವಣೆ ಆಯೋಗವನ್ನು ಕೂಡ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. 70 ದಿನ ಮೊದಲೇ ಚುನಾವಣೆ ಘೋಷಣೆ ಆಗಿದ್ದನ್ನು ಇತಿಹಾಸದಲ್ಲಿ ನೋಡಿದ್ದಿರಾ?" ಎಂದು ಪ್ರಶ್ನಿಸಿದರು.

I Wont Take Back My Statement Regarding Savarkar Said Siddaramaiah In Hubballi

ಬಳಿಕ ನೆರೆ ಪರಿಹಾರ ಸಂಬಂಧ ಮಾತನಾಡಿದ ಅವರು, "ನೆರೆ ಪರಿಹಾರ ಇನ್ನೂ ಸಿಕ್ಕಿ ಲ್ಲ. ಮತ್ತೆ ಪ್ರವಾಹ ಬಂದಿದೆ. ಎಲ್ಲಾ ಕಡೆ ಜನ ತೊಂದರೆಯಲ್ಲಿದ್ದಾರೆ. ಬಿಜೆಪಿ ಸರ್ಕಾರ ಏನೂ ಮಾಡಿಲ್ಲ. ನಾವು ಕೂಡ ಸಾಕಷ್ಟು ಹೋರಾಟ ಮಾಡಿದ್ದೇವೆ. ಮಲಗಿರೋರನ್ನ ಎಬ್ಬಿಸಬಹುದು, ಆದ್ರೆ‌ ಮಲಗಿರುವವರ ರೀತಿ ನಾಟಕ‌ ಮಾಡೋರನ್ನ ಎಬ್ಬಿಸೋಕ್ಕಾಗುತ್ತಾ...?" ಎಂದರು.

"ಗಾಂಧಿಯನ್ನು ಗೋಡ್ಸೆ ಒಂದು ಬಾರಿ ಕೊಂದರೆ, ಕಾಂಗ್ರೆಸ್ ಪ್ರತಿದಿನ ಕೊಲ್ಲುತ್ತಿದೆ"

ಸಾವರ್ಕರ್ ವಿಚಾರವಾಗಿ ಉಂಟಾಗಿದ್ದ ವಿವಾದದ ಕುರಿತು ಮಾತನಾಡುತ್ತಾ, "ಸಾವರ್ಕರ್ ಬಗ್ಗೆ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ಈ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನೀಗಾಗಲೇ ಹೇಳಿರುವೆ, ಮಹಾತ್ಮಾ ಗಾಂಧಿ ಕೊಲೆಯಲ್ಲಿ ಸಾವರ್ಕರ್ ಅವರು ಒಬ್ಬ ಆರೋಪಿ. ಕೆಲವೊಂದು ಸಾಕ್ಷ್ಯಗಳ ಕೊರತೆಯಿಂದ ಹೊರಬಂದಿರಬಹುದು. ಹಾಗಾಂತ ಅವರು ಆರೋಪಿಯೇ ಅಲ್ಲ ಅನ್ನುವುದಕ್ಕೆ ಸಾಧ್ಯನಾ? ಅಂಥವರಿಗೆ ಭಾರತ ರತ್ನ ಕೊಡುವುದು ಬೇಡ ಎಂದು ಪುನರುಚ್ಛರಿಸಿದ್ದಾರೆ.

English summary
Commenting on Savarkar's controversy, "I still stick on to my statement about Savarkar. There is no question of moving back" said siddaramaiah in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X