ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ವಿಧಾನ ಪರಿಷತ್ ಸಭಾಪತಿ ನಾನೇ ಆಗಬಹುದು''

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜನವರಿ 7: ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷ, ಜಾತ್ಯಾತೀತ ಜನತಾದಳ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ಸಿನಲ್ಲಿ ನನಗೆ ಬೇಕಾದವರು ಸಾಕಷ್ಟು ಜನರಿದ್ದಾರೆ. ಹೀಗಾಗಿ ನಾನು ಎಲ್ಲರಿಗೂ ಸರ್ವಸಮ್ಮತ ಸಭಾಪತಿ ಆಗಬಹುದೆಂದು ಹಿರಿಯ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಹುಬ್ಬಳ್ಳಿಯ ಐಟಿ ಪಾರ್ಕನಲ್ಲಿ ನಡೆದ ನಗರಾಭಿವೃದ್ಧಿ ಇಲಾಖೆಯ ಸಭೆಯ ನಂತರ ಮಾತನಾಡಿದ ಬಸವರಾಜ ಹೊರಟ್ಟಿ, ಬಹುತೇಕ ನಾನೇ ವಿಧಾನ ಪರಿಷತ್ ಸಭಾಪತಿ ಆಗಬಹುದು. ನನಗೆ ವಿರೋಧ ಮಾಡುವ ಸಂಭವ ಕಡಿಮೆಯಿದೆ ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಟಿಕೆಟ್‌ಗೆ ಭಾರೀ ಡಿಮ್ಯಾಂಡ್ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಟಿಕೆಟ್‌ಗೆ ಭಾರೀ ಡಿಮ್ಯಾಂಡ್

ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿದರೆ ಆಗ ನೋಡಬೇಕಾಗತ್ತದೆ. ಆದರೆ, ಯಾರೂ ಆ ಥರ ಮಾಡಲಿಕ್ಕಿಲ್ಲ ಎಂದ ಬಸವರಾಜ ಹೊರಟ್ಟಿ ಅವರಿಗೆ ಅವರ ಅಭಿಮಾನಿಗಳು, ಸಿಹಿಯನ್ನು ತಿನಿಸಿ ಸಂತಸಪಟ್ಟರು.

Hubballi: I will Become The Chairman Of Legislative Council: Basavaraj Horatti

ವಿಧಾನ ಪರಿಷತ್ ಗೆ ಸತತ ಏಳು ಬಾರಿ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ಮತ್ತೊಮ್ಮೆ ಸಭಾಪತಿಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಹೊರಟ್ಟಿಯವರು ಇದೆಲ್ಲವನ್ನು ಮಾತಾಡುವಾಗ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಶ್ರೀನಿವಾಸ ಮಾನೆ ಜೊತೆಗಿದ್ದರು.

English summary
Speaking at the IT Park in Hubballi Basavaraja Horatti, I will almost become the Chairman of the Legislative council. was less likely to oppose me, He said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X