ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾ. ಪಂಚಾಯತ್; ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ!

|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 03: ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಪತ್ನಿ, ಉಪಾಧ್ಯಕ್ಷರಾಗಿ ಪತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಗ್ರಾಮಸ್ಥರು ಸಹ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ.

ಹುಬ್ಬಳ್ಳಿ ತಾಲೂಕು ವರೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ವಿಶಾಲಾಕ್ಷಿ ಚನ್ನಬಸಗೌಡ ಹನುಮಂತಗೌಡರ, ಉಪಾಧ್ಯಕ್ಷರಾಗಿ ಚನ್ನಬಸಗೌಡ ಆಯ್ಕೆಯಾಗಿದ್ದಾರೆ. ಅಚ್ಚರಿ ಎಂದರೆ ಇಬ್ಬರೂ ಸಹ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು.

ಅಚ್ಚರಿ ನಡೆ; ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದ ಬಿಜೆಪಿ, ಕಾಂಗ್ರೆಸ್! ಅಚ್ಚರಿ ನಡೆ; ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದ ಬಿಜೆಪಿ, ಕಾಂಗ್ರೆಸ್!

ವರೂರ ಗ್ರಾಮ ಪಂಚಾಯಿತಿ 1ನೇ ವಾರ್ಡ್‌ನಿಂದ ವಿಶಾಲಾಕ್ಷಿ, 2ನೇ ವಾರ್ಡ್‌ನಿಂದ ಚನ್ನಬಸಗೌಡ ಚುನಾವಣಾ ಕಣಕ್ಕಿಳಿದು ಗೆದ್ದಿದ್ದರು. ಮೀಸಲಾತಿ ಪ್ರಕಟವಾದ ಬಳಿಕ ಪತ್ನಿ, ಪತಿ ಅಧ್ಯಕ್ಷ, ಉಪಾಧ್ಯಕ್ಷರಾಗಲು ಗ್ರಾಮಸ್ಥರೇ ಒಪ್ಪಿಗೆ ಕೊಟ್ಟರು.

ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಪಡೆಯಲು ಹಣ ವಿತರಣೆ! ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಪಡೆಯಲು ಹಣ ವಿತರಣೆ!

Husband And Wife Elected As Gram Panchayat President And Vice President

ಹುಬ್ಬಳ್ಳಿ ಗ್ರಾಮೀಣ ಬಿಇಒ ಅಶೋಕ ಸಿಂದಗಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಉಸ್ತುವಾರಿಯನ್ನು ನೋಡಿಕೊಂಡರು. ಗ್ರಾಮಸ್ಥರು ಪತ್ನಿ, ಪತಿ ಅವಿರೋಧವಾಗಿ ಆಯ್ಕೆಯಾಗಲು ಸಹಕಾರವನ್ನು ನೀಡಿದರು.

ಧಾರವಾಡ ಜಿಲ್ಲೆ 34 ಗ್ರಾಮ ಪಂಚಾಯತಿ ಆಯ್ಕೆಯಾದವರ ಪಟ್ಟಿ ಧಾರವಾಡ ಜಿಲ್ಲೆ 34 ಗ್ರಾಮ ಪಂಚಾಯತಿ ಆಯ್ಕೆಯಾದವರ ಪಟ್ಟಿ

ಪಕ್ಷಾತೀತವಾಗಿ ಪತ್ನಿ ಮತ್ತು ಪತಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿ, ಗ್ರಾಮದ ಅಭಿವೃದ್ಧಿ ಮಾಡಲಿ ಎಂದು ಗ್ರಾಮಸ್ಥರು ಆಶಯ ವ್ಯಕ್ತಪಡಿಸಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದೆ ಎಂದು ಪಿಡಿಓ ಹೇಳಿದ್ದಾರೆ.

Recommended Video

ಅಸಮಾಧಾನ ಶಮನಕ್ಕೆ ಸಿಎಂ ಬಿಎಸ್‌ವೈ ಭೋಜನಕೂಟ, ಹಲವರು ಶಾಸಕರು ಗೈರು | Oneindia Kannada

ಇತ್ತೀಚೆಗೆ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತ್ತೆ ಸೊಸೆ, ಅಣ್ಣ-ತಮ್ಮ, ಪತಿ-ಪತ್ನಿ ಗೆಲುವು ಸಾಧಿಸಿದ ಹಲವು ವರದಿಗಳಿವೆ. ಆದರೆ, ಪತಿ, ಪತ್ನಿ ಅಧ್ಯಕ್ಷ, ಉಪಾಧ್ಯಕ್ಷರಾದ ಘಟನೆ ಇದೇ ಮೊದಲು.

English summary
Wife elected as president and husband elected as vice president in Varura gram panchayat, Hubballi Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X