ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರ ಕಾರ್ಮಿಕ ವಿರೋಧಿ ನೀತಿ: ರೈಲ್ವೆ ಸಿಬ್ಬಂದಿಗಳ ಪ್ರತಿಭಟನೆ

|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 2 : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ರೈಲ್ವೆ ಸಿಬ್ಬಂದಿಗಳು ಶುಕ್ರವಾರ ಹುಬ್ಬಳ್ಳಿಯ ಕೇಶವಪುರದಲ್ಲಿರುವ ರೈಲ್ವೆ ವಲಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನೈರುತ್ಯ ರೈಲ್ವೆ ಕಾರ್ಮಿಕ ಸಂಘಟನೆಗಳ ಸಾವಿರಾರು ಕಾರ್ಮಿಕರಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕನಿಷ್ಠ ವೇತನ 18 ಸಾವಿರ ರೂ ನಿಂದ ಹೆಚ್ಚಿಸಬೇಕು, ಪೇ ಫಿಕ್ಸೇಷನ್ ಫಾರ್ಮುಲಾ ಹೆಚ್ಚಿಸಿ ಪರಿಷ್ಕೃತ ವೇತನವನ್ನು ಜನವರಿ 2016ರಿಂದಲೇ ಜಾರಿಯಾಗುವಂತೆ ಪೂರ್ವಾನ್ವಯವಾಗುವಂತೆ ಕೊಡುವುದು, ಹೊಸ ಪಿಂಚಣಿ ಪದ್ಧತಿ ರದ್ದುಪಡಿಸಿ, ಗ್ಯಾರಂಟಿ ಪೆನ್ಷನ್ ಪದ್ಧತಿ ಜಾರಿಗೆ ತರಬೇಕು.

ಡ್ರೈವರ್ ಮತ್ತು ಗಾರ್ಡ್ ಗಳಿಗೆ ರನ್ನಿಂಗ್ ಪೆನ್ಷನ್ ಭತ್ಯೆ ಪರಿಷ್ಕರಿಸುವುದು. ಹುದ್ದೆಗಳನ್ನು ಕಡಿತಗೊಳಿಸುವುದನ್ನು ನಿಲ್ಲಿಸಬೇಕು. ರೈಲ್ವೆ ಇಲಾಖೆಯಲ್ಲಿ ಖಾಸಗೀಕರಣ ಹಾಗೂ ಹೊರ ಗುತ್ತಿಗೆಯನ್ನು ರದ್ದುಪಡಿಸಬೇಕು. ಸುರಕ್ಷಿತ ಹುದ್ದೆಗಳಲ್ಲಿ ಸ್ವನಿವೃತ್ತಿ ಹೊಂದಿದ ಕಾರ್ಮಿಕ ಮಕ್ಕಳಿಗೆ ನೇಮಕಾತಿ ಮಾಡುವುದನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

Hundreds of Railway workers protest against union government

ರೈಲ್ವೆ ಕ್ವಾಟರ್ಸ್ ಗಳ ಎಲೆಕ್ಟ್ರಿಕ್ ಹಾಗೂ ಇತರೆ ರಿಪೇರಿ ಕೆಲಸವನ್ನು ತ್ವರಿತವಾಗಿ ಮಾಡಬೇಕು. ರೈಲ್ವೆ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಜತೆಗೆ ಲೈಫ್ ಸೇವಿಂಗ್ ಔಷಧಿಗಳನ್ನು ಎಲ್ಲ ಕಾಲಕ್ಕೂ ಲಭ್ಯವಾಗಿರುವಂತೆ ಮಾಡಬೇಕು. ಹೀಗೆ ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ನಾಲ್ಕು ‌ವರ್ಷದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ನಾಲ್ಕು ವರ್ಷದಿಂದ ಕೇಂದ್ರ‌ ಸರ್ಕಾರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಲ್ಲ. ನಿನ್ನೆ ಕೇಂದ್ರ ಬಜೆಟ್ ನಲ್ಲೂ ಈ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಇವತ್ತು‌ ರೈಲ್ವೆ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದರು.

English summary
Seeking increment in basic salary hundreds of railway workers have been staged protest in Hubli on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X