ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಯೋತ್ಪಾದನೆ ಬಗ್ಗೆ ಜಾಗೃತಿ ಮೂಡಿಸಲು ಹುಬ್ಬಳ್ಳಿ ಹೈದರಿಂದ ಬೈಕ್ ರಾಲಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 07: ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ದಾಳಿಯಾದ ಹಿನ್ನೆಲೆಯಲ್ಲಿ ಭಯೋತ್ಪಾದನೆ ಬಗ್ಗೆ ಜಾಗೃತಿ ಮೂಡಿಸಲು ನಗರದ ಮಹ್ಮದ್ ಹುಸೇನ್ ಹಾಜಿ ಹಾಗೂ ಸುನೀಲ್ ಮರಾಠೆ ಎಂಬುವವರು ದೇಶಾದ್ಯಂತ ಬೈಕ್ ರಾಲಿ ನಡೆಸಲು ಮುಂದಾಗಿದ್ದಾರೆ.

ನಗರದ ಚೆನ್ನಮ್ಮ ಸರ್ಕಲ್ ನಿಂದ ಬೈಕ್ ರಾಲಿ ಹೋಗುವ ಮುನ್ನ ಮಾತನಾಡಿದ ಮಹಮ್ಮದ್, ಉಗ್ರರ ಬಗ್ಗೆ ತಪ್ಪು ಮಾಹಿತಿಗಳನ್ನು ಜನರು ಅರ್ಥೈಸುತ್ತಿದ್ದು, ಇಸ್ಲಾಂ ಧರ್ಮ ಎಂದರೆ ಭಯೋತ್ಪಾದನೆ, ಭಯೋತ್ಪಾದನೆ ಎಂದರೆ ಇಸ್ಲಾಂ ಎಂದು ಹೇಳಲಾಗುತ್ತಿದೆ.

ಮೈಸೂರಿನಲ್ಲಿ ಭಯೋತ್ಪಾದನಾ ನಿಗ್ರಹ ದಳ ರಚನೆಮೈಸೂರಿನಲ್ಲಿ ಭಯೋತ್ಪಾದನಾ ನಿಗ್ರಹ ದಳ ರಚನೆ

ಉಗ್ರರಿಗೆ ಯಾವುದೇ ಜಾತಿ, ಧರ್ಮ ಇರುವುದಿಲ್ಲ ಅವರು ಕೇವಲ ತಮ್ಮ ಕಾರ್ಯಸಾಧನೆ ಬಗ್ಗೆ ಮಾತ್ರ ಯೋಚಿಸುವಂತಹವರು. ಈ ಬಗ್ಗೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಉಗ್ರರು ಎಂದರೆ ಮುಸ್ಲಿಂ ಸಮುದಾಯ ಎಂದು ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Hubli youths doing a bike rally to raise awareness about terrorism

ದೇಶದಲ್ಲಿ ಹಿಂದೂ-ಮುಸ್ಲಿಂರು ಒಗ್ಗಟ್ಟಿನಿಂದ ಸಹಬಾಳ್ವೆಯಲ್ಲಿ ಬದುಕುತ್ತಿದ್ದಾರೆ. ಆದರೆ, ಉಗ್ರವಾದಿಗಳು ಈ ಸಂಬಂಧಕ್ಕೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದ ಮಹ್ಮದ್ ಹುಸೇನ್ ಹಾಜಿ, ಇದರಿಂದ ಸಮಾಜದ ಸಾಸ್ಥ್ಯ ಹಾಳಾಗುತ್ತಿದೆ. ಪ್ರತಿಯೊಂದು ಸಭೆ- ಸಮಾರಂಭಗಳಲ್ಲಿಯೂ ನಾವೆಲ್ಲ ಒಂದಾಗಿ ನಡೆಯುತ್ತಿದ್ದೇವೆ. ಇದನ್ನು ಎಲ್ಲರ ಮನಸ್ಸಿನಲ್ಲಿ ಅಚ್ಚು ಹಾಕಲೆಂದೇ ನಾವು ಈ ಪರ್ಯಟನೆ ಮಾಡುತ್ತಿದ್ದೇವೆ ಎಂದರು.

 ರಾಜ್ಯದ 5 ಜಿಲ್ಲೆಗಳಲ್ಲಿ ಸದ್ಯದಲ್ಲಿಯೇ ಭಯೋತ್ಪಾದನೆ ನಿಗ್ರಹ ಪಡೆ ರಚನೆ ರಾಜ್ಯದ 5 ಜಿಲ್ಲೆಗಳಲ್ಲಿ ಸದ್ಯದಲ್ಲಿಯೇ ಭಯೋತ್ಪಾದನೆ ನಿಗ್ರಹ ಪಡೆ ರಚನೆ

ಹಿಂದು, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮ ಯಾವುದೇ ಆಗಲಿ ಭಯೋತ್ಪಾದನೆಯನ್ನು ಹೇಳಿಕೊಡುವುದಿಲ್ಲ. ಇಲ್ಲಿ ಎಲ್ಲಾ ಒಂದೇ, ನಾವು ಭಾರತದಲ್ಲೇ ಹುಟ್ಟಿದ್ದೇವೆ, ಭಾರತದಲ್ಲೇ ಸಾಯುತ್ತೇವೆ ಎಂದು ಹುಸೇನ್ ತಿಳಿಸಿದರು.

 ಬಾಲಕೋಟ್ ದಾಳಿ ಸುಳ್ಳಾ? ಉಪಗ್ರಹ ಚಿತ್ರಗಳು ಹೇಳುವ ಹೊಸಕತೆ ನಿಜಾನಾ? ಬಾಲಕೋಟ್ ದಾಳಿ ಸುಳ್ಳಾ? ಉಪಗ್ರಹ ಚಿತ್ರಗಳು ಹೇಳುವ ಹೊಸಕತೆ ನಿಜಾನಾ?

ಇನ್ನು ಭಯೋತ್ಪಾದನೆ ಬಗ್ಗೆ ಜನರಲ್ಲಿ ಜಾಗೃತಿಗೊಳಿಸುವ ಜೊತೆಗೆ ದೇಶದ ಜನ ಹಿಂದೂ, ಮುಸ್ಲಿಂ ಒಗ್ಗೂಡಿ ದೇಶಕ್ಕಾಗಿ ಹೋರಾಟ ಮಾಡಬೇಕು ಎನ್ನುವ ಉದ್ದೇಶದಿಂದ ಬೈಕ್ ರಾಲಿ ನಡೆಸುತ್ತಿದ್ದೇವೆ. ಬೈಕ್ ಮೂಲಕ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ನವದೆಹಲಿ, ಉತ್ತರಪ್ರದೇಶ ಸೇರಿದಂತೆ ಒಟ್ಟಾರೆ 6000 ಕಿ.ಮೀ. ಪ್ರಯಾಣಿಸುವುದಾಗಿ ಹುಸೇನ್ ಹೇಳಿದರು.

English summary
Hubli youths doing a bike rally to raise awareness about terrorism. Mohammed Hussein Haji and Sunil Marate are planning to hold a bike rally across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X