• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿಗೆ 3 ರಿಂದ 4 ದಿನಕ್ಕೊಮ್ಮೆ ಕುಡಿಯುವ ನೀರು

|

ಹುಬ್ಬಳ್ಳಿ, ಫೆಬ್ರವರಿ 09: ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ನಗರದ ಜನರಿಗೆ ಪ್ರತಿ 3 ರಿಂದ 4 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಪ್ರಸ್ತುತ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನಸಂಖ್ಯೆ ಸುಮಾರು 11 ಲಕ್ಷ.

ಹುಬ್ಬಳ್ಳಿ-ಧಾರವಾಡ ಅವಳಿ ನಗರವು ರಾಜ್ಯದ 2ನೇ ಮಹಾನಗರವಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಠೇವಣಿ ಕೊಡುಗೆ ಕಾಮಗಾರಿ ಅಡಿಯಲ್ಲಿ ಸವದತ್ತಿ ಮತ್ತು ಅಮ್ಮಿನಭಾವಿ ಯಂತ್ರಾಗಾರಗಳಲ್ಲಿ ಹೊಸ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ.

ಹುಬ್ಬಳ್ಳಿ-ಹಿಂಡಾನ್ ಮಾರ್ಗದ ಸ್ಟಾರ್ ಏರ್ ವೇಳಾಪಟ್ಟಿ ಬದಲಾವಣೆ

2011ನೇ ಸಾಲಿನ ಜನಗಣತಿ ಪ್ರಕಾರ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಜನಸಂಖ್ಯೆ 9,43,000 ಇತ್ತು. ಪ್ರಸ್ತುತ ಸುಮಾರು 11,00,000 ಜನಸಂಖ್ಯೆಯಿದೆ. ಅವಳಿ ನಗರಗಳಿಗೆ ಮಲಪ್ರಭಾ ಜಲಾಶಯ ಹಾಗೂ ನೀರಸಾಗರ ಜಲ ಮೂಲಗಳಿಂದ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಮನೆಗೂ ಕುಡಿಯುವ ನೀರು: ಯಡಿಯೂರಪ್ಪ ಸರ್ಕಾರದ ಹೊಸ ಯೋಜನೆ

ಹುಬ್ಬಳ್ಳಿ ನಗರದಲ್ಲಿ ಒಟ್ಟು 43 ವಾರ್ಡ್‍ಗಳಿವೆ. ಪ್ರಸ್ತುತ ನಿರಂತರ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಿರುವ ವಾರ್ಡ್‍ಗಳನ್ನು ಹೊರತುಪಡಿಸಿ, ಉಳಿದ ವಾರ್ಡ್‍ಗಳಲ್ಲಿ 5 ರಿಂದ 6 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ಕುಡಿಯುವ ನೀರಿನ ಘಟಕಗಳಿಗೆ ಬೀಗ ಹಾಕಿದ ಆರೋಗ್ಯ ಅಧಿಕಾರಿಗಳು

ಅವಳಿ ನಗರಗಳಿಗೆ ನೀರು

ಅವಳಿ ನಗರಗಳಿಗೆ ನೀರು

ನೀರಸಾಗರ ಜಲಾಶಯ ಮಳೆಯ ಅಭಾವದಿಂದಾಗಿ ಪೂರ್ಣ ಬತ್ತಿಹೋಗಿದ್ದರಿಂದ ಸೆಪ್ಟೆಂಬರ್ 2016 ರಿಂದ ನೀರು ಸರಬರಾಜು ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತದಲ್ಲಿ ಮಲಪ್ರಭಾ ಜಲಾಶಯದಿಂದ ಪ್ರತಿ ದಿನ ಸರಾಸರಿ 153.80 ದಶಲಕ್ಷ ಲೀಟರ್ ನೀರನ್ನು ಅವಳಿ ನಗರಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಧಾರವಾಡ ನಗರದಲ್ಲಿ ಒಟ್ಟು 24 ವಾರ್ಡ್‍ಗಳಿವೆ. ಪ್ರಸ್ತುತ ನಿರಂತರ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಿರುವ ವಾರ್ಡ್‍ಗಳನ್ನು ಹೊರತುಪಡಿಸಿ, ಉಳಿದ ವಾರ್ಡ್‍ಗಳಲ್ಲಿ 3 ರಿಂದ 4 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ಸಚಿವರು ಹೇಳಿದ್ದೇನು

ಸಚಿವರು ಹೇಳಿದ್ದೇನು

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಈ ಕುರಿತು ಮಾಹಿತಿ ನೀಡಿದ್ದು, "ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಮಲಪ್ರಭಾ ಜಲಾಶಯದ ನೀರು ಪಡೆಯುತ್ತಿರುವ ಹಳ್ಳಿಗಳು ಸೇರಿದಂತೆ ಜಿಲ್ಲೆಯ 399 ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ ಮಲಪ್ರಭಾ ನದಿಯ ನೀರನ್ನು ಸರಬರಾಜು ಮಾಡಲು 1,300 ಕೋಟಿ ಅಂದಾಜು ಮೊತ್ತದ ಸಮಗ್ರ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ" ಎಂದು ಹೇಳಿದ್ದಾರೆ.

ಅವಳಿ ನಗರಕ್ಕೆ ನಿತ್ಯ ನೀರು

ಅವಳಿ ನಗರಕ್ಕೆ ನಿತ್ಯ ನೀರು

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಒಟ್ಟು 64 ವಾರ್ಡ್‍ಗಳ ಪೈಕಿ ಈಗಾಗಲೇ 11 ವಾರ್ಡಗಳಿಗೆ ಪೂರ್ಣ ಪ್ರಮಾಣದಲ್ಲಿ ಮತ್ತು 15 ವಾರ್ಡಗಳ ಭಾಗಶಃ ಪ್ರದೇಶಕ್ಕೆ ನಿರಂತರ ಕುಡಿಯುವ ನೀರು ಪೂರೈಸಲಾಗುತ್ತಿದೆ. ಎಲ್ಲ ವಾರ್ಡುಗಳಿಗೂ ನಿರಂತರ ನೀರು ಯೋಜನೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ನಿರ್ವಹಿಸುವ ಗುತ್ತಿಗೆ ಕಂಪನಿಯ ಅನುಮೋದನೆಗಾಗಿ ಆರ್ಥಿಕ ನೆರವು ನೀಡಲಿರುವ ವಿಶ್ವಬ್ಯಾಂಕ್‍ಗೆ ಸಲ್ಲಿಸಲಾಗಿದೆ.

ನೀರು ಸರಬರಾಜು

ನೀರು ಸರಬರಾಜು

ಹುಬ್ಬಳ್ಳಿ-ಧಾರವವಾಡ ಮಹಾನಗರದ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಸರಬರಾಜು ಮಾಡಲು ಪ್ರತಿ ದಿನಕ್ಕೆ ಸುಮಾರು 200 ಎಮ್‍ಎಲ್‍ಡಿ ನೀರಿನ ಅಗತ್ಯವಿದೆ. ಹುಬ್ಬಳ್ಳಿ ಮಹಾನಗರಕ್ಕೆ ನೀರಸಾಗರ ಜಲಾಶಯದಿಂದ ಸುಮಾರು 40 ಎಮ್‍ಎಲ್‍ಡಿ ನೀರನ್ನು ಪಡೆಯಲಾಗುತ್ತಿತ್ತು. ಆದರೆ ಜಲಾಶಯ ಬತ್ತಿದ್ದರಿಂದ ಮಲಪ್ರಭಾ ಜಲಾಶಯದಿಂದ ಪಡಿಯುತ್ತಿದ್ದ 160 ಎಮ್‍ಎಲ್‍ಡಿ ನೀರಿನ ಮೇಲೆ ಅವಳಿ ನಗರ ಅವಲಂಬಿಸಬೇಕಾಯಿತು. ಇದರಿಂದಾಗಿ ಬೇಸಿಗೆ ಕಾಲದಲ್ಲಿ 8-10 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಬೇಕಾಯಿತು.

English summary
Residents of Hubballi city will get three to four days of drinking water per week soon. Hubballi city has 43 ward and drinking water will get in 5 to 6 days in week now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more