ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ, ಕಲಬುರಗಿಯಿಂದ ತಿರುಪತಿಗೆ ವಿಮಾನ; ವೇಳಾಪಟ್ಟಿ

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 15: ಸ್ಟಾರ್ ಏರ್ ಸಂಸ್ಥೆ ಜನವರಿಯಿಂದ ಹುಬ್ಬಳ್ಳಿ, ಕಲಬುರಗಿ ಯಿಂದ ತಿರುಪತಿಗೆ ವಿಮಾನ ಸೇವೆಯನ್ನು ಆರಂಭಿಸಲಿದೆ. ಈ ವಿಮಾನಕ್ಕಾಗಿ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ.

ಜನವರಿ 11ರಿಂದ ಸ್ಟಾರ್ ಏರ್ ವಿಮಾನಗಳು ಕಲಬುರಗಿ-ತಿರುಪತಿ, ತಿರುಪತಿ-ಹುಬ್ಬಳ್ಳಿ ನಡುವೆ ಸಂಚಾರ ನಡೆಸಲಿವೆ. ವಿಮಾನ ಹಾರಾಟದ ವೇಳಾಪಟ್ಟಿಯನ್ನು ವಿಮಾನಯಾನ ಸಂಸ್ಥೆ ಬಿಡುಗಡೆ ಮಾಡಿದೆ.

ಜನವರಿ 11ರಿಂದ ಹುಬ್ಬಳ್ಳಿ-ತಿರುಪತಿ ವಿಮಾನ ಹಾರಾಟ ಜನವರಿ 11ರಿಂದ ಹುಬ್ಬಳ್ಳಿ-ತಿರುಪತಿ ವಿಮಾನ ಹಾರಾಟ

1999 ರೂ.ಗಳಲ್ಲಿ ಜನರು ವಿಮಾನದಲ್ಲಿ ಹೋಗಿ ತಿರುಪತಿಯಲ್ಲಿ ದೇವರ ದರ್ಶನವನ್ನು ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸ್ಟಾರ್ ಏರ್ ಸಂಸ್ಥೆಯ ವೆಬ್ ಸೈಟ್‌ಗೆ ಭೇಟಿ ನೀಡಬಹುದು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಟರ್ಮಿನಲ್ ಆರಂಭ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಟರ್ಮಿನಲ್ ಆರಂಭ

flight

ವೇಳಾಪಟ್ಟಿ; ಕಲಬುರಗಿ-ತಿರುಪತಿ ವಿಮಾನ ಬೆಳಗ್ಗೆ 9.55ಕ್ಕೆ ಹೊರಡಲಿದ್ದು, 11 ಗಂಟೆಗೆ ತಿರುಪತಿ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ, ಭಾನುವಾರ ವಿಮಾನ ಹಾರಾಟ ನಡೆಸಲಿದೆ.

ವೈಕುಂಠ ಏಕಾದಶಿ; ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ ವೈಕುಂಠ ಏಕಾದಶಿ; ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ

ತಿರುಪತಿ-ಹುಬ್ಬಳ್ಳಿ ವಿಮಾನ ಬೆಳಗ್ಗೆ 11.25ಕ್ಕೆ ಹೊರಡಲಿದ್ದು, 12.30ಕ್ಕೆ ತಿರುಪತಿಗೆ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಸಂಚಾರ ನಡೆಸಲಿದೆ.

ಹುಬ್ಬಳ್ಳಿ-ತಿರುಪತಿ ನಡುವಿನ ವಿಮಾನ 12.55ಕ್ಕೆ ಹೊರಡಲಿದ್ದು, 14:00 ಗಂಟೆಗೆ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಸಂಚರಿಸಲಿದೆ.

Recommended Video

ಸಂಜನಾಗೆ ಜಾಮೀನು, ರಾಗಿಣಿಗೆ ತಪ್ಪದ ಟೆನ್ಷನ್ -ಸಿಸಿಬಿ ಜಂಟಿ ಆಯುಕ್ತರ ಭೇಟಿಯಾದ ರಾಗಿಣಿ ಪೋಷಕರು | Oneindia Kannada

ತಿರುಪತಿ-ಕಲಬುರಗಿ ನಡುವಿನ ವಿಮಾನ 14:25ಕ್ಕೆ ಹೊರಡಲಿದ್ದು, 15:30ಕ್ಕೆ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಈ ವಿಮಾನ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

English summary
Star Air will start Hubballi-Tirupati and Kalaburagi-Tirupati flight service from 11th January 2021. Here are the fare and schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X