ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಹುಡುಗರ ಸಾಧನೆ; ಕೋವಿಡ್ ಸೋಂಕಿತರಿಗೆ ಆಹಾರ ಕೊಡಲಿದೆ ವಾಹನ

|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 08: ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ಬಾರಿ ವಾರ್ಡ್‌ಗೆ ಹೋಗುವಾಗ ಪಿಪಿಇ ಕಿಟ್ ಧರಿಸಬೇಕು. ರೋಗಿಗಳಿಗೆ ಆಹಾರ, ಔಷಧಿಗಳನ್ನು ಸರಬರಾಬು ಮಾಡುವುದು ಸವಾಲಿನ ಕೆಲಸ.

ಹುಬ್ಬಳ್ಳಿಯ ಪ್ರತಿಷ್ಠಿತ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಕೋವಿಡ್ ಸೋಂಕಿತರಿಗೆ ಆಹಾರ, ಔಷಧ ಪೂರೈಕೆ ಮಾಡಲು ವಾಹನವೊಂದನ್ನು ಸಿದ್ಧಪಡಿಸಿದ್ದಾರೆ. ಸ್ವಯಂ ಚಾಲಿತವಾಗಿ ಈ ವಾಹನ ಸಂಚಾರ ನಡೆಸಲಿದೆ.

ಹುಬ್ಬಳ್ಳಿ-ಧಾರವಾಡ ನಡುವೆ 30 ನಿಮಿಷದಲ್ಲಿ ಪ್ರಯಾಣಿಸಿ ಹುಬ್ಬಳ್ಳಿ-ಧಾರವಾಡ ನಡುವೆ 30 ನಿಮಿಷದಲ್ಲಿ ಪ್ರಯಾಣಿಸಿ

ವೈರ್ ಲೆಸ್ ತಂತ್ರಜ್ಞಾನದ ಮೂಲಕ ಈ ವಾಹನ ಸಂಚಾರ ನಡೆಸಲಿದೆ. ವಾಹದಲ್ಲಿ ನಾಲ್ಕು ವಿಭಾಗವಿದ್ದು, ಅಲ್ಲಿ ಆಹಾರ ಮತ್ತು ಔಷಧಿಗಳನ್ನು ಇಟ್ಟು ಕೋವಿಡ್ ಸೋಂಕಿತರು ಇರುವ ವಾರ್ಡ್‌ಗಳಿಗೆ ಕಳಿಸಬಹುದಾಗಿದೆ.

ಹುಬ್ಬಳ್ಳಿಗೆ ಬಂಪರ್ ಉಡುಗೊರೆ ಕೊಟ್ಟ ಕೇಂದ್ರ ಸರ್ಕಾರ ಹುಬ್ಬಳ್ಳಿಗೆ ಬಂಪರ್ ಉಡುಗೊರೆ ಕೊಟ್ಟ ಕೇಂದ್ರ ಸರ್ಕಾರ

Hubballi Students Develops Vehicle To Supply Food To COVID Patients

ಬುಧವಾರ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಾವು ತಯಾರು ಮಾಡಿದ ವಾಹನದ ಪ್ರಾತ್ಯಕ್ಷಿಕೆ ನಡೆಸಿದರು. ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ಸಂಶೋಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.

ಹುಬ್ಬಳ್ಳಿ ಮಂದಿ ಕೆಂಗಣ್ಣಿಗೆ ಗುರಿಯಾದ ಕೇಂದ್ರ ಸರ್ಕಾರ ಹುಬ್ಬಳ್ಳಿ ಮಂದಿ ಕೆಂಗಣ್ಣಿಗೆ ಗುರಿಯಾದ ಕೇಂದ್ರ ಸರ್ಕಾರ

ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಐಸೊಲೇಷನ್ ವಾರ್ಡ್‌ನಲ್ಲಿ ಇರುತ್ತಾರೆ. ಅವರ ಆರೈಕೆ ಮಾಡುವವರು ಪ್ರತಿ ಬಾರಿ ವಾರ್ಡ್‌ಗೆ ಹೋಗವಾಗ ಪಿಪಿಇ ಕಿಟ್ ಧರಿಸಬೇಕು. ಇದು ವೆಚ್ಚದಾಯಕವಾಗಿದೆ. ಈ ಯಂತ್ರ ವೆಚ್ಚವನ್ನು ತಗ್ಗಿಸಲಿದೆ.

Hubballi Students Develops Vehicle To Supply Food To COVID Patients

ಆಸ್ಪತ್ರೆಯ ಸಿಬ್ಬಂದಿಗಳು ಯಂತ್ರದಲ್ಲಿ ಆಹಾರ, ಔಷಧಿಗಳನ್ನು ಇಟ್ಟು ಐಸೊಲೇಷನ್ ವಾರ್ಡ್‌ಗಳಿಗೆ ಕಳಿಸಬಹುದಾಗಿದೆ. ಯಂತ್ರ ಸ್ವಯಂ ಚಾಲಿತವಾಗಿ ಕೆಲಸ ಮಾಡುವುದರಿಂದ ಅದರ ಜೊತೆಗೆ ಸಿಬ್ಭಂದಿಗಳು ವಾರ್ಡ್‌ಗಳಿಗೆ ಹೋಗುವುದು ತಪ್ಪಿದೆ.

Recommended Video

Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02

ಬುಧವಾರದ ಮಾಹಿತಿಯಂತೆ ಧಾರವಾಡ ಜಿಲ್ಲೆಯಲ್ಲಿ 154 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 18272. ಸಕ್ರಿಯ ಪ್ರಕರಣಗಳ ಸಂಖ್ಯೆ 2625.

English summary
A team of engineering students of Hubballi's KLE Technological University develops an automatic guided vehicle. It will supply food and medicines to COVID-19 patients. It operates on wireless technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X